ಬುಧವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕು ಸೇರಿದಂತೆ ವಿವಿದೆಡೆಯ ಕೃಷಿಕರಿಗೆ ಅಪಾರ ನಷ್ಟವಾಗಿದೆ. ಗಾಳಿ ಮಳೆಗೆ ವಿವಿದೆಡೆ ಮನೆಗೆ, ಅಂಗಡಿಗಳಿಗೆ ಹಾನಿಯಾಗಿದೆ. ಪುತ್ತೂರು ಜಾತ್ರಾ ಉತ್ಸವದ ಪ್ರಯುಕ್ತ ಹಾಕಿದ್ದ ಅಂಗಡಿಗಳಿಗೂ ಮಳೆಯಿಂದ ಹಾನಿಯಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸುಳ್ಯ ತಾಲೂಕಿನ ವಿವಿದೆಡೆ ಅಡಿಕೆ ಮರಗಳು ಉರುಳಿದೆ. ಕಳೆದ 3 ದಿನದ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಅಡಿಕೆ ಮರಗಳು ನಾಶವಾಗಿದೆ. ಬುಧವಾರ ಕಲ್ಲಾಜೆಯಲ್ಲಿ 95 ಮಿಮೀ ದಾಖಲೆಯ ಮಳೆಯಾಗಿದೆ. 1994 ರಲ್ಲಿ ಎಪ್ರಿಲ್ ತಿಂಗಳಲ್ಲಿ ದಾಖಲೆಯ ಮಳೆಯಾಗಿತ್ತು ಎಂದು ಮಳೆ ದಾಖಲೆ ಸಂಗ್ರಹಗಾರ ಪಿ ಜಿ ಎಸ್ ಎನ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಸುಳ್ಯ ತಾಲೂಕಿನಲ್ಲಿ ಮಳೆಯ ಅಬ್ಬರ ಇದೆ. ಅದರಲ್ಲೂ ಗಾಳಿ ಮಳೆಗೆ ಅಪಾರ ಪ್ರಮಾಣದ ಕೃಷಿ ಹಾನಿಯಾಗುತ್ತಿದೆ. ಬುಧವಾರ ದ ಕ ಜಿಲ್ಲೆಯ ವಿವಿದೆಡೆ ಗಾಳಿಯ ಅಬ್ಬರವೂ ಕಂಡುಬಂದಿತ್ತು. ಸುಳ್ಯ ಸೇರಿದಂತೆ ಪುತ್ತೂರು, ಬೆಳ್ತಂಗಡಿಯ ವಿವಿಧ ಕೃಷಿಕರ ತೋಟದಲ್ಲಿ ಅಡಿಕೆ ಮರಗಳು ಧರೆಗೆ ಉರುಳಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ಅವರ ತೋಟದಲ್ಲಿ ಕಳೆದ ಮೂರು ದಿನಗಳ ಗಾಳಿಗೆ ಒಟ್ಟು ಸುಮಾರು 200 ಕ್ಕೂ ಅಧಿಕ ಅಡಿಕೆ ಮರ ಧರೆಗೆ ಉರುಳಿದೆ. ಆಸುಪಾಸಿನ ಕೃಷಿಕರ ತೋಟದಲ್ಲೂ ಕೃಷಿ ನಾಶವಾಗಿದೆ. ಪಂಜ, ಕರಿಕಳದಲ್ಲೂ ಕೃಷಿ ನಾಶವಾಗಿದೆ. ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿಯ ಅಬ್ಬರದಿಂದ ಕೃಷಿಕರು ನಷ್ಟ ಅನುಭವಿಸಿದರು.
ಕಲ್ಲಾಜೆ 95 ಮಿಮೀ, ಕಮಿಲ 51 ಮಿಮೀ, ಮಡಪ್ಪಾಡಿ 47 ಮಿಮೀ,ಬಂಗಾರಡ್ಕ ಆರ್ಯಾಪು 47 ಮಿಮೀ, ಸುಬ್ರಹ್ಮಣ್ಯ 46 ಮಿಮೀ, ಬಳ್ಪ 43 ಮಿಮೀ, ದೊಡ್ಡತೋಟ 44 ಮಿಮೀ, ಕೇನ್ಯ 41ಮಿಮೀ, ನೆಲ್ಯಾಡಿ 39, ಕಂದ್ರಪ್ಪಾಡಿ 36 ಮಿಮೀ, ಕೈಲಾರು 36 ಮಿಮೀ, ಮಂಜಿ 35 ಮಿಮೀ, ಬೆಳ್ತಂಗಡಿ 35 ಮಿಮೀ, ಮುಂಡೂರು 35 ಮಿಮೀ, ನೆಕ್ರಕಜೆ 35 ಮಿಮೀ, ಬಲ್ನಾಡು 34 ಮಿಮೀ, ಮೆಟ್ಟಿನಡ್ಕ 34 ಮಿಮೀ, ಕೊಳ್ತಿಗೆ 34 ಮಿಮೀ, ಕೆಲಿಂಜ 30 ಮಿಮೀ, ಕೈರಂಗಳ 25 ಮಿಮೀ, ಉರುವಾಲು 28 ಮಿಮೀ, ಮರ್ಧಾಳ 26 ಮಿಮೀ, ಉಪ್ಪಿನಂಗಡಿ 26 ಮಿಮೀ, ಹರಿಹರ 25 ಮಿಮೀ, ಕೋಡಿಂಬಾಳ 24 ಮಿಮೀ, ಪಾಂಡೇಶ್ವರ 22 ಮಿಮೀ, ಕೊಲ್ಲಮೊಗ್ರ 22 ಮಿಮೀ, ಚೊಕ್ಕಾಡಿ 20 ಮಿಮೀ, ಮುರುಳ್ಯ 19 ಮಿಮೀ, ಎಣ್ಮೂರು 18 ಮಿಮೀ , ಬೆಳ್ಳಾರೆ ಕಾವಿನಮೂಲೆ 18 ಮಿಮೀ, ಕಡಬ 18 ಮಿಮೀ, ಕರಿಕಳ 18 ಮಿಮೀ, , ಅಯ್ಯನಕಟ್ಟೆ 16 ಮಿಮೀ, ಬಾಳಿಲ 16 ಮಿಮೀ, ಸುಳ್ಯ 16 ಮಿಮೀ ಮಳೆಯಾಗಿದೆ. ಕಾಸರಗೋಡಿನಲ್ಲಿ ದಾಖಲೆಯ ಮಳೆಯಾಗಿದೆ. ರಾತ್ರಿ ಇಡೀ ವರ್ಷಧಾರೆಯಾಗಿದ್ದು ಕಳೆದ 24 ಗಂಟೆಯಲ್ಲಿ 138 ಮಿಮೀ ಮಳೆಯಾಗಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…