ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಮಳೆ, ಪ್ರವಾಹ, ಭೂಕುಸಿತ | ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ | ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ ಏನು?

July 8, 2024
11:32 AM

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು(Mansoon) ಚುರುಗೊಂಡಿದ್ದು, ವರುಣ(Rain) ಅಬ್ಬರಿಸುತ್ತಿದ್ದಾನೆ. ಹಲವು ಕಡೆ ಸಾಕಷ್ಟು ಅವಾಂತರಗಳು ಉಂಟಾಗುತ್ತಿವೆ. ಕಾರವಾರದ ಗೋವಾ-ಮಂಗಳೂರು(Goa-Mangaluru) ಹೆದ್ದಾರಿಯಲ್ಲಿ ಮತ್ತೆ ಕಲ್ಲುಬಂಡೆ ಕುಸಿದಿದೆ. ಹೊನ್ನಾವರದ ಕರ್ನಲ್ ಹಿಲ್ ಬಳಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿದೆ. ಇಡೂರಿನಲ್ಲಿ ಗುಡ್ಡದ ನೀರು ಹರಿದು ಹೆದ್ದಾರಿ ಹಾಗೂ ಮನೆಗಳು ಜಲಾವೃತವಾಗಿದೆ. ಅರೆಬೈಲ್‌ನಲ್ಲಿ ಹೈವೇ ಮೇಲೆ ಮರ ಬಿದ್ದಿದೆ. ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಕಾರಣ ನದಿಗಳೆಲ್ಲಾ ತುಂಬಿ ಹರಿದು, ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

Advertisement
Advertisement
Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ (Dakshina Kannada) ಮಳೆಯ (Rain) ಅಬ್ಬರ ಮುಂದುವರಿದಿದ್ದು,  ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭೂ ಕುಸಿತ, ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದೆ. ಹೀಗಾಗಿ ಇನ್ನಷ್ಟು ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗಿರಿತಾಣ, ಶಿಖರಗಳಲ್ಲಿ ಚಾರಣಕ್ಕೆ ಪ್ರವಾಸಿಗರು ತೆರಳದಂತೆ ನಿಷೇಧ ಹೇರಲಾಗಿದೆ. ನದಿ ಹಾಗೂ ಸಮುದ್ರ ತಟದಲ್ಲಿ ಈಜು ಮೋಜು-ಮಸ್ತಿ, ನೀರಿಗೆ ಇಳಿಯೋದು, ಮೀನು ಹಿಡಿಯುವುದು ಇತ್ಯಾದಿ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ

Advertisement

ಕೊಡಗಿನಲ್ಲಿಯೂ ಮಳೆಯಾಗುತ್ತಿದ್ದು, ಚಿಕ್ಲಿಹೊಳೆ ಡ್ಯಾಂ ತುಂಬಿ ಹರಿದಿದೆ. ಶಿರಾಡಿಘಾಟ್‌ನ ಹಲವೆಡೆ ನಿರ್ಮಾಣದ ಹಂತದ ರಸ್ತೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಅಫಜಲಪುರ ಬಳಿ ಸೇತುವೆ ಜಲಾವೃತವಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಕಾರಣ ಚಿಕ್ಕೋಡಿಯ ನಾಲ್ಕು ಸೇತುವೆ ಮುಳುಗಡೆಯಾಗಿವೆ. ಖಾನಾಪುರದ ಏಳು ಫಾಲ್ಸ್ ನೋಡಲು ಅವಕಾಶ ನೀಡದಿರುವುದಕ್ಕೆ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾಗಿವೆ. ಗೋಕಾಕ್ ಫಾಲ್ಸ್ ಬಳಿ ಸೂಕ್ತ ಭದ್ರತೆ ಕೈಗೊಳ್ಳದ ಕಾರಣ ಪ್ರವಾಸಿಗರು ಬಂಡೆಗಲ್ಲುಗಳ ಅಂಚಿನಲ್ಲಿ ಸೆಲ್ಫಿ ಹುಚ್ಚಾಟ ನಡೆಸಿದ್ದಾರೆ.

ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ
ಕೆಎಆರ್‌ಎಸ್ ಜಲಾಶಯದ ಒಟ್ಟು ಸಾಮರ್ಥ್ಯ 49.45 ಟಿಎಂಸಿ, ಇಂದಿನ ಮಟ್ಟ 24.42 ಟಿಎಂಸಿ ಇದ್ದು, ಒಳಹರಿವು 11,027 ಕ್ಯೂಸೆಕ್ ಹಾಗೂ ಹೊರಹರಿವು 562 ಕ್ಯೂಸೆಕ್ ಇದೆ. ಕಬಿನಿ ಒಟ್ಟು ಸಾಮರ್ಥ್ಯ 19.52 ಟಿಎಂಸಿ, ಇಂದಿನ ಮಟ್ಟ 17.98 ಟಿಎಂಸಿ ಇದೆ. ಒಳಹರಿವು 5,039 ಕ್ಯೂಸೆಕ್ ಹಾಗೂ ಹೊರಹರಿವು 3250 ಕ್ಯೂಸೆಕ್ ಇದೆ.

Advertisement

ಹೇಮಾವತಿ ಒಟ್ಟು ಸಾಮರ್ಥ್ಯ 37.10 ಟಿಎಂಸಿ, ಇಂದಿನ ಮಟ್ಟ 17.60 ಟಿಎಂಸಿ ಇದೆ. ಒಳಹರಿವು 7,796 ಕ್ಯೂಸೆಕ್ ಹಾಗೂ ಒಳಹರಿವು 250 ಕ್ಯೂಸೆಕ್ ಇದೆ. ಹಾರಂಗಿ ಒಟ್ಟು ಸಾಮರ್ಥ್ಯ 8.50 ಟಿಎಂಸಿ, ಇಂದಿನ ಮಟ್ಟ 5.46 ಟಿಎಂಸಿ ಇದೆ. ಒಳಹರಿವು 2,472 ಕ್ಯೂಸೆಕ್ ಹಾಗೂ ಒಳಹರಿವು 200 ಕ್ಯೂಸೆಕ್ ಇದೆ. ತುಂಗಭದ್ರಾ ಒಟ್ಟು ಸಾಮರ್ಥ್ಯ 105.79 ಟಿಎಂಸಿ, ಇಂದಿನ ಮಟ್ಟ 18.24 ಟಿಎಂಸಿ ಇದೆ. ಒಳಹರಿವು 50,715 ಕ್ಯೂಸೆಕ್ ಹಾಗೂ ಹೊರಹರಿವು 391 ಕ್ಯೂಸೆಕ್ ಇದೆ. ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 151.75 ಟಿಎಂಸಿ, ಇಂದಿನ ಮಟ್ಟ 35.41 ಟಿಎಂಸಿ ಇದೆ. ಒಳಹರಿವು 29,044 ಕ್ಯೂಸೆಕ್ ಹಾಗೂ ಹೊರಹರಿವು 1570 ಕ್ಯೂಸೆಕ್ ಇದೆ. ಸೂಪಾ ಜಲಾಶಯದ ಒಟ್ಟು ಸಾಮರ್ಥ್ಯ 145.33 ಟಿಎಂಸಿ, ಇಂದಿನ ಮಟ್ಟ 42.81 ಟಿಎಂಸಿ ಇದೆ. ಒಳಹರಿವು 28,597 ಕ್ಯೂಸೆಕ್ ಹಾಗೂ ಹೊರಹರಿವು 500 ಕ್ಯೂಸೆಕ್ ಇದೆ. ಆಲಮಟ್ಟಿ ಡ್ಯಾಂನ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇಂದಿನ ಮಟ್ಟ 59.39 ಟಿಎಂಸಿ ಇದೆ. ಒಳಹರಿವು 59,306 ಕ್ಯೂಸೆಕ್ ಹಾಗೂ ಹೊರಹರಿವು 430 ಕ್ಯೂಸೆಕ್ ಇದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ
March 4, 2025
10:11 PM
by: The Rural Mirror ಸುದ್ದಿಜಾಲ
ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |
March 4, 2025
3:30 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
March 4, 2025
2:33 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |
March 4, 2025
12:55 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror