ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ನಡುವೆ ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮೊದಲ ಮಳೆಗೆ ಜನತೆ ಖುಷಿಪಟ್ಟರು. ಕೃಷಿಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.….ಮುಂದೆ ಓದಿ…..
ಈ ಬಾರಿ ಮಳೆಯ ಕೊರತೆಯಿಂದ ರಾಜ್ಯದ ಎಲ್ಲೆಡೆ ಕೃಷಿಕರು ಕಂಗಾಲಾಗಿದ್ದಾರೆ. ಬಿಸಿಲ ಧಗೆಯಿಂದ ಭೂಮಿ ಕಾದ ಕಾವಲಿಯಂತಾಗಿತ್ತು. ನೀರಿಲ್ಲದೆ ತೋಟಗಳು ಸಂಪೂರ್ಣ ಒಣಗಿ ನಿಂತಿದ್ದವು. ಈ ವರ್ಷ ಬಯಲು ಸೀಮೆ ಭಾಗವಾದ ಕಡೂರು, ತರೀಕೆರೆ ತಾಲೂಕಿನಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ. ಈ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ ಐದಳ್ಳಿ, ಕಣತಿ, ಮಾಗೋಡು, ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆಯಾಗಿದೆ. ಕಳೆದ ಐದು ದಿನದ ಹಿಂದೆ ಮಲೆನಾಡಿನಲ್ಲಿ ಮೊದಲ ಮಳೆಯಾಗಿತ್ತು.….ಮುಂದೆ ಓದಿ…..
ಇದೇ ವೇಳೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಕ್ಲಿ ಗ್ರಾಮದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಬೀದರ್, ಔರಾದ್, ಕಮಲನಗರ, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.