ಕೃಷಿಕರೇ ಸಂಗ್ರಹಿಸುವ ಮಳೆ ಮಾಹಿತಿ – ರೂರಲ್‌ ಮಿರರ್‌ ನಲ್ಲಿ…

September 25, 2020
10:18 PM
ಗ ಸುಳ್ಯ ತಾಲೂಕಿನ 16 ಮಂದಿ ಕೃಷಿಕರು ತಮ್ಮ ಜಮೀನಿನಲ್ಲಿ ಸುರಿದ ಮಳೆಯನ್ನು ಅಳತೆ ಮಾಡಿ ದಾಖಲಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.
ಪ್ರತಿ ದಿನ ಬೆಳಗ್ಗೆ ಹಿಂದಿನ 24  ಗಂಟೆಗಳಲ್ಲಿ ಸುರಿದ ಮಳೆಯನ್ನು ಆಸಕ್ತರ “ಮಳೆ ಮಾಹಿತಿ” ವಾಟ್ಸ್ ಅಪ್ ಬಳಗದಲ್ಲಿ ಹಂಚಿಕೊಳ್ಳುತ್ತಾರೆ. ಪ್ರತಿ 13/14 ದಿನಗಳಿಗೊಮ್ಮೆ ಮಹಾ/ಮಳೆ ನಕ್ಷತ್ರ ಬದಲಾದಂತೆ  ತಮ್ಮ “ಮಳೆ ಮಾಹಿತಿ” ಬಳಗದ ತಲೆ ಬರಹಕ್ಕೆ ಆ ನಕ್ಷತ್ರದ ಹೆಸರು ಸೇರ್ಪಡೆಯಾಗುವುದು ಇಲ್ಲಿ ಇನ್ನೊಂದು ವಿಶೇಷ. ಇದರೊಂದಿಗೆ ಪ್ರತಿ ಮಹಾ/ಮಳೆ ನಕ್ಷತ್ರದ ಅವಧಿಯಲ್ಲಿ ದಾಖಲಾದ ಮಳೆಯನ್ನು ವಿಶೇಷವಾಗಿ ಗಮನಿಸುತ್ತಾರೆ,ಮಾತ್ರವಲ್ಲ ಅದು ಕೃಷಿ  ಚಟುವಟಿಕೆಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ.

ಸುಳ್ಯ ತಾಲೂಕಿನ ಬಾಳಿಲದ ಪಿ.ಜಿ.ಎಸ್.ಎನ್ ಪ್ರಸಾದ್, ಅಯ್ಯನಕಟ್ಟೆಯ ಪಿ.ಜಿ.ಕೃಷ್ಣಮೂರ್ತಿ, ಚೊಕ್ಕಾಡಿಯ ಪಿ.ಕೆ.ಸುಬ್ಬರಾವ್, ಕಲ್ಮಡ್ಕದ ಸುರೇಶ್ಚಂದ್ರ ಟಿ ಆರ್, ಕಮಿಲದ ಮಹೇಶ್ ಪುಚ್ಚಪ್ಪಾಡಿ, ಹಾಲೆಮಜಲಿನ ಉಣ್ಣಿಕೃಷ್ಣನ್, ಮೆಟ್ಟಿನಡ್ಕದ ರಾಜೇಶ್, ಕಲ್ಲಾಜೆಯ ಸೀಜೋ ಅಬ್ರಹಾಂ, ಹರಿಹರದ ವಿನೂಪ್ ಮಲ್ಲಾರ, ಕೊಲ್ಲಮೊಗ್ರದ ಕೇಶವ ಭಟ್ ಕಟ್ಟ, ಮಡಪ್ಪಾಡಿಯ ವಿಜಯ ಕುಮಾರ್ ಎಂ.ಡಿ.,ವಾಲ್ತಾಜೆ-ಕಂದ್ರಪ್ಪಾಡಿಯ  ಪ್ರಶಾಂತ್ ಮುಂಡೋಡಿ, ಸುಳ್ಯ ನಗರದ ಶ್ರೀಧರ  ರಾವ್, ಮುಳ್ಯ-ಅಜ್ಜಾವರದ ವಿಕ್ರಮ್ ಎಂ.ಕೆ, ತೊಡಿಕಾನದ ವಸಂತ ರಾವ್, ದೊಡ್ಡತೋಟದ ವೇದಮೂರ್ತಿ ಕೀಲಾರ್ಕಜೆ,

Advertisement
Advertisement

ಕಡಬ ತಾಲೂಕಿನ ಎಣ್ಮೂರಿನ ಪ್ರಸನ್ನ ಕೆ/ಶ್ರೀ ನಂದನ , ಬಳ್ಪದ ಉದಯ ಕುಮಾರ್, ಸುಬ್ರಹ್ಮಣ್ಯದ ವೆಂಕಟೇಶ್ ಕೆ ಆರ್, ಕೋಡಿಂಬಳ-ತೆಕ್ಕಡ್ಕದ ಪ್ರಶಾಂತ ನರಸಿಂಹ, ಕಡಬದ ಸದಾಶಿವ ರಾವ್,

ಪುತ್ತೂರು ತಾಲೂಕು ಶಾಂತಿಗೋಡಿನ ರಾಮಕೃಷ್ಣ ಭಟ್, ಮುಂಡೂರಿನ ಮುರಳಿ ಬಂಗಾರಡ್ಕ,  ಆರ್ಯಾಪುವಿನ ರಾಮಕೃಷ್ಣ ಬಂಗಾರಡ್ಕ, ಪುತ್ತೂರು  ಬಲ್ನಾಡಿನ ಸುರೇಶ್, ಕೊಳ್ತಿಗೆಯ ಎಕ್ಕಡ್ಕ ಗಣಪತಿ ಭಟ್, ಕೆದಿಲದ ಶಿವಕುಮಾರ್ ಎದುರ್ಕಳ,
ಬಂಟ್ವಾಳ ತಾಲೂಕಿನ ಕೆಲಿಂಜದ ವೆಂಕಟಗಿರಿ, ಮಂಚಿಯ ವಸಂತ ಕಜೆ, ಮುಡಿಪು-ಕೈರಂಗಳದ ಪ್ರವೀಣಶಂಕರ ಕೊಲ್ಲರಮಜಲು,
ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲಿನ ಡಾ.ಕಿಶನ್ ದಿನಕರ್, ಇಳಂತಿಲದ ಕೈಲಾರು ಸುಬ್ರಹ್ಮಣ್ಯ ಭಟ್,
ಕಾಸರಗೋಡಿನ ಕಲ್ಲಕಟ್ಟದ ಪಿ.ಕೆ.ಬಾಲಸುಬ್ರಹ್ಮಣ್ಯ, ಮಡಿಕೇರಿಯ ಎಂ ಚೆಂಬುವಿನ ಆನಂದ ಎಂ. ಇವರು ಮಳೆ ಅಳತೆಯನ್ನು ದಾಖಲಿಸುತ್ತಿರುವವರು.
ಅನೇಕ ಮಂದಿ ಇತ್ತೀಚಿನ ದಿನಗಳಲ್ಲಿ ಈ ಹವ್ಯಾಸವನ್ನು ರೂಢಿಸಿಕೊಂಡವರು. ಇವರೆಲ್ಲರ ಮಳೆ ಅಳತೆ ಮಾಹಿತಿಯನ್ನು ಇನ್ನು ಮುಂದೆ ನಲ್ಲಿ ಬಾಳಿಲದ ಪಿ ಜಿ ಎಸ್‌ ಎನ್‌ ಪ್ರಸಾದ್‌ ಅವರ ಸಾರಥ್ಯದಲ್ಲಿ , ಅವರ ವಿಶ್ಲೇಷಣೆಯೊಂದಿಗೆ ತಾವು ದಿನವೂ ಗಮನಿಸಬಹುದು. ಕರಿಕಳದ ಸಾಯಿಶೇಖರ ಅವರು ಮಳೆ ಮುನ್ಸೂಚನೆಯನ್ನು ನಿಖರವಾಗಿ ಅಭ್ಯಸಿಸಿ ಈ ಬಳಗದಲ್ಲಿ ಹಂಚಿಕೊಳ್ಳುತ್ತಿರುವುದು ಈ ಬಳಗದ ಇನ್ನೊಂದು ಗರಿಮೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-05-2025 | ಸಾಮಾನ್ಯ ಮಳೆ ಮುಂದುವರಿಕೆ | ಮೇ.23 ರಿಂದ ಮತ್ತೆ ಉತ್ತಮ ಮಳೆ | ವಾಯುಭಾರ ಕುಸಿತದ ಪರಿಣಾಮ ಏನಾಗಬಹುದು ?
May 21, 2025
12:46 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.05.2025 |ಮೇ. 21ರಿಂದ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ನಿರೀಕ್ಷೆ
May 20, 2025
11:56 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 19-05-2025 | ಮೇ 24 ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣ
May 19, 2025
11:35 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 18-05-2025 | ಮೇ.19 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆ | ನಿರೀಕ್ಷೆಗೂ ಮುನ್ನವೇ ಮುಂಗಾರು ನಿರೀಕ್ಷೆ |
May 18, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group