ದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ | ಹವಾಮಾನ ಇಲಾಖೆ

April 15, 2024
10:16 PM

ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ಈ ಬಾರಿ ಬರಗಾಲ(Drought) ತಾಂಡವವಾಡುತ್ತಿದೆ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ. ರೈತರು(Farmer) ಬೆಳೆದ ಬೆಳೆಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ಈ ವರ್ಷ ಅಂದರೆ 2024ರ ಮಾನ್ಸೂನ್(Monsoon)​ ಋತುವಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದ್ದು(Rainfall), ಲಾ ​ನಿನಾ ಪರಿಣಾಮದಿಂದಾಗಿ ಆಗಸ್ಟ್​- ಸೆಪ್ಟೆಂಬರ್​ನಲ್ಲಿ ಈ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Advertisement

ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯು ತಾತ್ಕಾಲಿಕ ಅಥವಾ ದೇಶದೆಲ್ಲೆಡೆ ಎಲ್ಲಾ ಪ್ರಾದೇಶಿಕ ಸ್ಥಳದಲ್ಲಿ ಒಂದೇ ರೀತಿಯಲ್ಲಿ ಮಳೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯಿಂದ ಹಲವೆಡೆ ಹಲವು ಪ್ರಮಾಣದ ಮಳೆಯನ್ನು ಕಾಣಬಹುದಾಗಿದೆ.

ಹವಾಮಾನ ತಜ್ಞರು ಹೇಳುವಂತೆ, ಮಳೆಯಾಗುವ ದಿನಗಳು ಇಳಿಕೆಯಾಗಿವೆ. ಅಧಿಕ ಮಳೆ ಅಥವಾ ಕಡಿಮೆ ಮಳೆ ಅವಧಿಯು ಹೆಚ್ಚಿದೆ. ಇದು ಬರ ಮತ್ತು ಪ್ರವಾಹದ ಪರಿಸ್ಥಿತಿಗೆ ಕಾರಣವಾಗಲಿದೆ. 1951 -2023ರ ನಡುವಿನ ದತ್ತಾಂಶದ ಆಧಾರದ ಮೇಲೆ ಭಾರತವು ಎಲ್​ನಿನೊ ಸಂಭವಿಸಿದ ನಂತರದ 9 ಅವಧಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಂಡಿದೆ ಎಂದು ಐಎಂಡಿಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ. ನಾಲ್ಕನೇ ತಿಂಗಳಿನ ಮಾನ್ಸೂನ್​ ಋತುವಿನಲ್ಲಿ (ಜೂನ್​ನಿಂದ ಸೆಪ್ಟೆಂಬರ್​​)ನಲ್ಲಿ ಭಾರತವು ವಾಡಿಕೆಗಿಂತ ಹೆಚ್ಚಿನ ಮಳೆ ಅಂದರೆ ಅಂದಾಜು 106ರಷ್ಟು ದೀರ್ಘಾವಧಿ ಮಳೆ ಕಾಣಬಹುದಾಗಿದೆ ಎಂದಿದ್ದಾರೆ.

ಹಿಂದೂ ಮಹಾಸಾಗರದ ಸಕಾರಾತ್ಮಕ ಪರಿಸ್ಥಿತಿ ಮತ್ತು ಉತ್ತರಧೃವ ಗೋಳದಲ್ಲಿನ ಕಡಿಮೆ ಹಿಮ ಆವೃತದ ಮೇಲೆ ಅಂದಾಜಿಸಲಾಗುವುದು. ಈ ಪರಿಸ್ಥಿತಿಗಳು ಭಾರತದ ನೈರುತ್ಯ ಮಾನ್ಸೂನ್​ಗೆ ಪೂರಕವಾದ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ಸುಧಾರಿತ ಎಲ್​ ನಿನೊ ಪರಿಸ್ಥಿತಿಯನ್ನು ಇದೀಗ ಕಾಣಬಹುದಾಗಿದೆ. ಇದು ಮಾನ್ಸೂನ್​ ಋತುಮಾನದ ಸಮಯ ಆಗಮನದಲ್ಲಿ ತಟಸ್ಥವಾಗಲಿದೆ ಎಂದು ಅಂದಾಜಿಸಲಾಗಿದೆ. ಇದಾದ ಬಳಿಕ ಆಗಸ್ಟ್​- ಸೆಪ್ಟೆಂಬರ್​​ನಲ್ಲಿ ಲಾ ನಿನಾ ಪರಿಸ್ಥಿತಿ ರೂಪುಗೊಳ್ಳಲಿದೆ ಎಂದು ವಿವರಿಸಿದರು.

ಪ್ರಸ್ತುತ ಮುನ್ಸೂಚನೆಗಳ ಪ್ರಕಾರ ವಾಯುವ್ಯ, ಪೂರ್ವ ಮತ್ತು ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

2023ರಲ್ಲಿ ಭಾರತವು ಕಡಿಮೆ ಸರಾಸರಿಗಿಂತ ಸಾಮಾನ್ಯ ಮಳೆಯನ್ನು ಕಂಡಿತು. ಕಳೆದ ನಾಲ್ಕು ವರ್ಷಗಳಿಂದ ಭಾರತ ಸಾಮಾನ್ಯ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಮಾನ್ಸೂನ್​ ಋತುಮಾನದಲ್ಲಿ ಕಂಡಿದೆ. ನೈರುತ್ಯ ಮುಂಗಾರು ಭಾರತದ ಒಟ್ಟಾರೆ ಶೇ 70ರಷ್ಟು ಮಳೆ ತರುತ್ತದೆ. ಇದು ದೇಶದ ಕೃಷಿ ವಲಯಕ್ಕೆ ಹೆಚ್ಚು ನಿರ್ಣಾಯಕವಾಗಿದೆ. ಕೃಷಿಯು ಭಾರತದ ಜಿಡಿಪಿಯಲ್ಲಿ ಶೇ 14ರಷ್ಟು ಕೊಡುಗೆಯನ್ನು ನೀಡುತ್ತಿದೆ. ಅಲ್ಲದೇ ಈ ಅವಧಿಗಿಂತ ಮುಂಚಿತವಾಗಿಯೇ ಮಾನ್ಸೂನ್​ ಆರಂಭವಾಗಲಿದೆ ಎಂದು ಈ ಹಿಂದೆ ಐಎಂಡಿ ತಿಳಿಸಿತ್ತು.

ಜೂನ್ ಮತ್ತು ಜುಲೈ  ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳು. ಈ ತಿಂಗಳುಗಳಲ್ಲಿ ಕೃಷಿ ಬೆಳೆಗಳ ಹೆಚ್ಚಿನ ಭಾಗ ನಡೆಯುತ್ತದೆ. ಹಾಗಿದ್ದರೂ ಈ ತಿಂಗಳಲ್ಲಿ ಬರಬಹುದಾದ ಮಳೆಯ ಮಾಹಿತಿಯನ್ನು ಇಲಾಖೆ ನೀಡಲಿಲ್ಲ.

 

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group