ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ಈ ಬಾರಿ ಬರಗಾಲ(Drought) ತಾಂಡವವಾಡುತ್ತಿದೆ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ. ರೈತರು(Farmer) ಬೆಳೆದ ಬೆಳೆಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ಈ ವರ್ಷ ಅಂದರೆ 2024ರ ಮಾನ್ಸೂನ್(Monsoon) ಋತುವಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದ್ದು(Rainfall), ಲಾ ನಿನಾ ಪರಿಣಾಮದಿಂದಾಗಿ ಆಗಸ್ಟ್- ಸೆಪ್ಟೆಂಬರ್ನಲ್ಲಿ ಈ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯು ತಾತ್ಕಾಲಿಕ ಅಥವಾ ದೇಶದೆಲ್ಲೆಡೆ ಎಲ್ಲಾ ಪ್ರಾದೇಶಿಕ ಸ್ಥಳದಲ್ಲಿ ಒಂದೇ ರೀತಿಯಲ್ಲಿ ಮಳೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯಿಂದ ಹಲವೆಡೆ ಹಲವು ಪ್ರಮಾಣದ ಮಳೆಯನ್ನು ಕಾಣಬಹುದಾಗಿದೆ.
ಹವಾಮಾನ ತಜ್ಞರು ಹೇಳುವಂತೆ, ಮಳೆಯಾಗುವ ದಿನಗಳು ಇಳಿಕೆಯಾಗಿವೆ. ಅಧಿಕ ಮಳೆ ಅಥವಾ ಕಡಿಮೆ ಮಳೆ ಅವಧಿಯು ಹೆಚ್ಚಿದೆ. ಇದು ಬರ ಮತ್ತು ಪ್ರವಾಹದ ಪರಿಸ್ಥಿತಿಗೆ ಕಾರಣವಾಗಲಿದೆ. 1951 -2023ರ ನಡುವಿನ ದತ್ತಾಂಶದ ಆಧಾರದ ಮೇಲೆ ಭಾರತವು ಎಲ್ನಿನೊ ಸಂಭವಿಸಿದ ನಂತರದ 9 ಅವಧಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಂಡಿದೆ ಎಂದು ಐಎಂಡಿಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ. ನಾಲ್ಕನೇ ತಿಂಗಳಿನ ಮಾನ್ಸೂನ್ ಋತುವಿನಲ್ಲಿ (ಜೂನ್ನಿಂದ ಸೆಪ್ಟೆಂಬರ್)ನಲ್ಲಿ ಭಾರತವು ವಾಡಿಕೆಗಿಂತ ಹೆಚ್ಚಿನ ಮಳೆ ಅಂದರೆ ಅಂದಾಜು 106ರಷ್ಟು ದೀರ್ಘಾವಧಿ ಮಳೆ ಕಾಣಬಹುದಾಗಿದೆ ಎಂದಿದ್ದಾರೆ.
ಹಿಂದೂ ಮಹಾಸಾಗರದ ಸಕಾರಾತ್ಮಕ ಪರಿಸ್ಥಿತಿ ಮತ್ತು ಉತ್ತರಧೃವ ಗೋಳದಲ್ಲಿನ ಕಡಿಮೆ ಹಿಮ ಆವೃತದ ಮೇಲೆ ಅಂದಾಜಿಸಲಾಗುವುದು. ಈ ಪರಿಸ್ಥಿತಿಗಳು ಭಾರತದ ನೈರುತ್ಯ ಮಾನ್ಸೂನ್ಗೆ ಪೂರಕವಾದ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ಸುಧಾರಿತ ಎಲ್ ನಿನೊ ಪರಿಸ್ಥಿತಿಯನ್ನು ಇದೀಗ ಕಾಣಬಹುದಾಗಿದೆ. ಇದು ಮಾನ್ಸೂನ್ ಋತುಮಾನದ ಸಮಯ ಆಗಮನದಲ್ಲಿ ತಟಸ್ಥವಾಗಲಿದೆ ಎಂದು ಅಂದಾಜಿಸಲಾಗಿದೆ. ಇದಾದ ಬಳಿಕ ಆಗಸ್ಟ್- ಸೆಪ್ಟೆಂಬರ್ನಲ್ಲಿ ಲಾ ನಿನಾ ಪರಿಸ್ಥಿತಿ ರೂಪುಗೊಳ್ಳಲಿದೆ ಎಂದು ವಿವರಿಸಿದರು.
ಪ್ರಸ್ತುತ ಮುನ್ಸೂಚನೆಗಳ ಪ್ರಕಾರ ವಾಯುವ್ಯ, ಪೂರ್ವ ಮತ್ತು ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
2023ರಲ್ಲಿ ಭಾರತವು ಕಡಿಮೆ ಸರಾಸರಿಗಿಂತ ಸಾಮಾನ್ಯ ಮಳೆಯನ್ನು ಕಂಡಿತು. ಕಳೆದ ನಾಲ್ಕು ವರ್ಷಗಳಿಂದ ಭಾರತ ಸಾಮಾನ್ಯ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಮಾನ್ಸೂನ್ ಋತುಮಾನದಲ್ಲಿ ಕಂಡಿದೆ. ನೈರುತ್ಯ ಮುಂಗಾರು ಭಾರತದ ಒಟ್ಟಾರೆ ಶೇ 70ರಷ್ಟು ಮಳೆ ತರುತ್ತದೆ. ಇದು ದೇಶದ ಕೃಷಿ ವಲಯಕ್ಕೆ ಹೆಚ್ಚು ನಿರ್ಣಾಯಕವಾಗಿದೆ. ಕೃಷಿಯು ಭಾರತದ ಜಿಡಿಪಿಯಲ್ಲಿ ಶೇ 14ರಷ್ಟು ಕೊಡುಗೆಯನ್ನು ನೀಡುತ್ತಿದೆ. ಅಲ್ಲದೇ ಈ ಅವಧಿಗಿಂತ ಮುಂಚಿತವಾಗಿಯೇ ಮಾನ್ಸೂನ್ ಆರಂಭವಾಗಲಿದೆ ಎಂದು ಈ ಹಿಂದೆ ಐಎಂಡಿ ತಿಳಿಸಿತ್ತು.
ಜೂನ್ ಮತ್ತು ಜುಲೈ ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳು. ಈ ತಿಂಗಳುಗಳಲ್ಲಿ ಕೃಷಿ ಬೆಳೆಗಳ ಹೆಚ್ಚಿನ ಭಾಗ ನಡೆಯುತ್ತದೆ. ಹಾಗಿದ್ದರೂ ಈ ತಿಂಗಳಲ್ಲಿ ಬರಬಹುದಾದ ಮಳೆಯ ಮಾಹಿತಿಯನ್ನು ಇಲಾಖೆ ನೀಡಲಿಲ್ಲ.
ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…
ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…
ಮ್ಯಾನ್ಮಾರ್ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್ಗೆ…