ಇಂದಿನಿಂದ ಮಹಾ ಮಳೆ ನಕ್ಷತ್ರಗಳು ಆರಂಭವಾಗುತ್ತದೆ. ಮಹಾನಕ್ಷತ್ರ ಅಶ್ವಿನೀ ಮಂಗಳವಾರದಿಂದ ಪ್ರಾರಂಭವಾಗುತ್ತದೆ. ಎಪ್ರಿಲ್ ತಿಂಗಳಿನಿಂದಲೇ ಮಳೆ ಆರಂಭವಾಗುತ್ತಿದೆ. ವಾತಾವರಣದ ಉಷ್ಣತೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿಯಲ್ಲಿ ಮಳೆಯೂ ಆರಂಭವಾಗುತ್ತಿದೆ. ಹವಾಮಾನ ವರದಿ ಪ್ರಕಾರ ಮಂಗಳವಾರವೂ ಮಳೆಯಾಗಲಿದೆ. ಸೋಮವಾರ ರಾಜ್ಯದ ವಿವಿದೆಡೆ ಮಳೆಯಾಗಿತ್ತು.
ಕಳೆದ 24 ಗಂಟೆಯಲ್ಲಿ ಬೆಳ್ತಂಗಡಿ ತಾಲೂಕಿಮ ಅಡೆಂಜ ಉರುವಾಲು ಪ್ರದೇಶದಲ್ಲಿ 60 ಮಿಮೀ , ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಪ್ರದೇಶದಲ್ಲಿ 52 ಮಿಮೀ ಮಳೆಯಾಗಿತ್ತು. ಉಳಿದಂತೆ ಬೆಳ್ತಂಗಡಿ 42 ಮಿಮೀ,ಚೆಂಬು 38 ಮಿಮೀ, ಕಲ್ಮಡ್ಕ 31 ಮಿಮೀ, ಬಳ್ಪ 30 ಮಿಮೀ, ಚೊಕ್ಕಾಡಿ 25 ಮಿಮೀ, ಇಳಂತಿಲ 25 ಮಿಮೀ, ಹಾಲೆಮಜಲು 20 ಮಿಮೀ, ಕಾಸರಗೋಡು 19 ಮಿಮೀ, ಕಲ್ಲಾಜೆ 18 ಮಿಮೀ, ಕೋಡಪದವು 17 ಮಿಮೀ , ಅಯ್ಯನಕಟ್ಟೆ15 ಮಿಮೀ, ಮೆಟ್ಟಿನಡ್ಕ 13 ಮಿಮೀ, ಕಂದ್ರಪ್ಪಾಡಿ 13 ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಕೆದಿಲ-ಮುರ 13 ಮಿಮೀ, ಮಡಪ್ಪಾಡಿ 6 ಮಿಮೀ, ಕೈರಂಗಳ 6 ಮಿಮೀ, ಸುಳ್ಯ ನಗರ 5 ಮಿಮೀ, ಕೋಡಿಂಬಾಳ 5 ಮಿಮೀ,ಬಲ್ನಾಡು 4 ಮಿಮೀ, ಕೊಳ್ತಿಗೆ 3 ಮಿಮೀ, ಎಣ್ಮೂರು 3 ಮಿಮೀ, ಕಡಬ 2.5 ಮಿಮೀ, ಕಾವಿನಮೂಲೆ 2 ಮಿಮೀ, ಹಾಸನ 2 ಮಿಮೀ ಮಳೆಯಾಗಿದೆ.