ಮಳೆಗಾಲ ಆರಂಭವಾಗುತ್ತಿದೆ.ಜೂನ್.1 ರ ಬಳಿಕ ಮಳೆಗಾಲವೇ. ಈ ಬಾರಿ ಅದೇ ಸಮಯಕ್ಕೆ ಮಳೆ ಆರಂಭವಾಗುತ್ತಿದೆ. ಆದರೆ ಈಚೆಗೆ ಮುಂಗಾರು ಪೂರ್ವ ಮಳೆಯೂ ಉತ್ತಮವಾಗುತ್ತಿದೆ. ಕಾಡು ಹೊಂದಿರುವ ಪ್ರದೇಶಗಳಲ್ಲಿ ಈ ಬಾರಿಯೂ ಇದುವರೆಗೆ ಉತ್ತಮ ಮಳೆಯಾಗಿದೆ. ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ 2022 ರ ಮೇ ವರೆಗೆ 1108 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿಯೇ ಈ ಬಾರಿ 708 ಮಿಮೀ ಮಳೆಯಾಗಿದೆ.
ಮಳೆ ದಾಖಲು ಮಾಡುವ ಕೃಷಿಕರು ದಕ್ಷಿಣ ಕನ್ನಡ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇದ್ದಾರೆ. ಹವಾಮಾನ ವೀಕ್ಷಣೆ ಹಾಗೂ ಮಳೆ ಬೀಳುವ ಲೆಕ್ಕಾಚಾರ, ಬೀಳುವ ಮಳೆಯ ಲೆಕ್ಕ ಇದರ ಆಧಾರದಲ್ಲಿ ಕೃಷಿ ಕಾರ್ಯವನ್ನು ನಿರ್ಧರಿಸುವ ಯುವ ಕೃಷಿಕರೂ ಇದ್ದಾರೆ. ಕೃಷಿಕ ಪಿ ಜಿ ಎಸ್ ಎನ್ ಪ್ರಸಾದ್ ಅವರ ನೆರವಿನೊಂದಿಗೆ ಅನೇಕರು ಮಳೆ ಲೆಕ್ಕ ಆರಂಭಿಸಿದ್ದಾರೆ. ಕಳೆದ ಕೆಲವು ಸಮಯಗಳ ವೀಕ್ಷಣೆಯ ಪ್ರಕಾರ ಕಾಡಂಚಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಸುಬ್ರಹ್ಮಣ್ಯ, ಕಲ್ಲಾಜೆ, ಬಳ್ಪ, ಕಲ್ಮಡ್ಕ, ಎಣ್ಮೂರು, ಕಡಬ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತದೆ.ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಬಿದ್ದ ಪ್ರಮಾಣ ಹೆಚ್ಚಾಗಿದೆ.
ಈ ವರ್ಷ ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ಮೇ ತಿಂಗಳ ಅಂತ್ಯದವರೆಗೆ 1108 ಮಿಮೀ ಮಳೆಯಾಗಿದೆ. ಮೆಟ್ಟಿನಡ್ಕದಲ್ಲಿ 944 ಮಿಮೀ, ಎಣ್ಮೂರು 909 ಮಿಮೀ, ಬಳ್ಪ ಕೋಡಿಗದ್ದೆಯಲ್ಲಿ 904 ಮಿಮೀ, ಬಾಳಿಲದಲ್ಲಿ 826 ಮಿಮೀ, ಕಮಿಲ ಪುಚ್ಚಪ್ಪಾಡಿಯಲ್ಲಿ 807 ಮಿಮೀ , ಕಡಬ ಕೋಡಿಂಬಾಳದಲ್ಲಿ 698 ಮಿಮೀ, ಬೆಳ್ಳಾರೆ ಕಾವಿನಮೂಲೆಯಲ್ಲಿ 630 ಮಿಮೀ, ಕೋಡಪದವಿನಲ್ಲಿ 361 ಮಿಮೀ. , ಮಳೆಯಾಗಿದೆ.
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…