ಅಸಾನಿ ಚಂಡಮಾರುತ ಪರಿಣಾಮ | ದಿನವಿಡೀ ಸುರಿದ ಮಳೆ | ಹಲವು ಕಡೆ 50 ಮಿಮೀ ಮಳೆ ದಾಖಲು |

Advertisement

ಅಸಾನಿ ಚಂಡಮಾರುತವು ಸದ್ಯ ಕರಾವಳಿ ಆಂಧ್ರ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ 12 ಗಂಟೆಗಳಲ್ಲಿ ಅದೇ ಪ್ರದೇಶದ ಸುತ್ತಲೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.ನಂತರ ದುರ್ಬಲವಾಗುವ ಸೂಚನೆ ಇದೆ. ಈ ನಡುವೆ ಕರ್ನಾಟಕ ವಿವಿದೆಡೆಯೂ ಮಳೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವಾತಾವರಣದ ಉಷ್ಣತೆ ಕುಸಿದಿದೆ. ಕರ್ನಾಟಕದ ಕರಾವಳಿಯ ವಿವಿದೆಡೆ 50 ಮಿಮೀಗಿಂತಲೂ ಅಧಿಕ ಮಳೆಯಾಗಿದೆ.

Advertisement

ಅಸಾನಿಯ ಪರಿಣಾಮವಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 12 ಗಂಟೆಗಳಲ್ಲಿ, ಕೃಷ್ಣಾ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಮತ್ತು ಪುದುಚೇರಿಯ ಯಾನಂನಲ್ಲಿ ಬಹುಶಃ ಚಂಡಮಾರುತದ ಗಾಳಿ ಬೀಸಲಿದೆ. ಸಮುದ್ರದ ಪರಿಸ್ಥಿತಿಯು ಪ್ರಕ್ಷುಬ್ಧವಾಗಲಿದ್ದು, ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

Advertisement
Advertisement
Advertisement

ಹವಾಮಾನ ಇಲಾಖೆ ಪ್ರಕಾರ, ನಗರದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ಅಸಾನಿ ಚಂಡಮಾರುತ ಬುಧವಾರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯ ಬಳಿ ಬರಲಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ

ಬಿಹಾರ, ಜಾರ್ಖಂಡ್, ಒಳಭಾಗ ಒಡಿಶಾ, ದಕ್ಷಿಣ ಛತ್ತೀಸ್‌ಗಢ, ತೆಲಂಗಾಣದ ಕೆಲವು ಭಾಗಗಳು, ಕೊಂಕಣ ಮತ್ತು ಗೋವಾ, ಉತ್ತರ ಒಳಭಾಗ ಕರ್ನಾಟಕ, ದಕ್ಷಿಣ ಮಧ್ಯ ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕೆಲವು ಸಾಧಾರಣ  ಮಳೆಯಾಗುವ ಸಾಧ್ಯತೆಯಿದೆ.ಗುಜರಾತ್‌, ರಾಜಸ್ಥಾನದ ಹಲವು ಭಾಗಗಳು, ವಿದರ್ಭ, ಮರಾಠವಾಡ, ಉತ್ತರ ಮಧ್ಯ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ದಕ್ಷಿಣ ಹರಿಯಾಣದ ಕೆಲವು ಭಾಗಗಳಲ್ಲಿ ಹೀಟ್‌ವೇವ್ ಪರಿಸ್ಥಿತಿಗಳು ಇರಬಹುದು ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.

Advertisement
Advertisement

ಕರಾವಳಿ ಜಿಲ್ಲೆಯ ವಿವಿದೆಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ. ಕಲ್ಲಾಜೆ 63 ಮಿಮೀ ,ಅಯ್ಯನಕಟ್ಟೆ 64 ಮಿಮೀ ,  ಬಳ್ಪ 58 ಮಿಮೀ, ಬಾಳಿಲ 58 ಮಿಮೀ, ವಾಲ್ತಾಜೆ 58 ಮಿಮೀ, ಮೆಟ್ಟಿನಡ್ಕ 54 ಮಿಮೀ, ಬಳ್ಪ ಪಟೋಳಿ 54 ಮಿಮೀ , ಕರಿಕಳ 47 ಮಿಮೀ , ಮಂಚಿ 46 ಮಿಮೀ ,ದೊಡ್ಡತೋಟ 46 ಮಿಮೀ, ಕಮಿಲ 45 ಮಿಮೀ  ,ಹರಿಹರ 44 ಮಿಮೀ ,  ಬೆಳ್ಳಾರೆ-ಕಾವಿನಮೂಲೆ 37 ಮಿಮೀ, ಉಡುಪಿ 37 ಮಿಮೀ , ಚೊಕ್ಕಾಡಿ 36 ಮಿಮೀ , ಕೋಡಿಂಬಾಳ 35 ಮಿಮೀ,  ಬಲ್ನಾಡು 33 ಮಿಮೀ ,ಬಂಟ್ವಾಳ 33 ಮಿಮೀ ,ಸುಬ್ರಹ್ಮಣ್ಯ 33 ಮಿಮೀ , ಕೊಲ್ಲಮೊಗ್ರ 30 ಮಿಮೀ , , ಸುಳ್ಯ ನಗರ 26 ಮಿಮೀ , ಕುಂಬಳೆ 31 ಮಿಮೀ, ಮುರುಳ್ಯ 3೦ ಮಿಮೀ ,ಕೆದಿಲ 27 ಮಿಮೀ, ಕಾಸರಗೋಡು 25 ಮಿಮೀ ,  ಪೆಲತ್ತಡ್ಕ 21 ಮಿಮೀ ,ಪುತ್ತೂರು ಶಾತಿಗೋಡು 15 ಮಿಮೀ ,ಕೈಲಾರು ಬೆಳ್ತಂಗಡಿ 14 ಮಿಮೀ, ಎಕ್ಕಡ್ಕ-ಕೊಳ್ತಿಗೆ 12 ಮಿಮೀ, ಉರುವಾಲು 11 ಮಿಮೀ,  ಬೆಳ್ತಂಗಡಿ ನಗರ 6  ಮಿಮೀ  ಮಳೆಯಾಗಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಸಾನಿ ಚಂಡಮಾರುತ ಪರಿಣಾಮ | ದಿನವಿಡೀ ಸುರಿದ ಮಳೆ | ಹಲವು ಕಡೆ 50 ಮಿಮೀ ಮಳೆ ದಾಖಲು |"

Leave a comment

Your email address will not be published.


*