ಮತ್ತೆ ಕೈಕೊಟ್ಟ ಹವಾಮಾನ | ಹಲವು ಕಡೆ ಮಳೆ-ತುಂತುರು ಮಳೆ | ಧನುರ್ಮಾಸದಲ್ಲಿ ವರುಣಾಗಮನ..! |

January 3, 2024
9:07 AM

ಮಳೆಗಾಲದಲ್ಲಿ ನಿರೀಕ್ಷೆಯಷ್ಟು ಮಳೆ ಬರದೇ ಹೋಯಿತು. ಬರದ ಛಾಯೆ ಆವರಿಸಿತು. ಚಳಿಗಾಲ ಬಂದಾಗಲೂ ಚಳಿ ದೂರವಾಯಿತು. ಈ ಬಾರಿ 18 ಡಿಗ್ರಿಗಿಂತ ಕಡಿಮೆ ಚಳಿ ಇಲ್ಲದೇ ಹೋಯಿತು. ಈಗ ಮತ್ತೆ ಮಳೆ ಶುರುವಾಗಿದೆ. ಕೆಲವು ಕಡೆ ಉತ್ತಮ ಮಳೆ, ಇನ್ನೂ ಕೆಲವು ಕಡೆ ತುಂತುರು ಮಳೆ ಕರಾವಳಿ ಪ್ರದೇಶದಲ್ಲಿ ಕಾಣಿಸಿದೆ. ಒಟ್ಟಾರೆ ಈ ಬಾರಿ ಹವಾಮಾನ ಕೈಕೊಟ್ಟಿದೆ. ಕೃಷಿ, ಗ್ರಾಮೀಣ ಭಾಗ ಸಂಕಷ್ಟಕ್ಕೆ ಸಿಲುಕುತ್ತಿದೆ.

Advertisement
Advertisement

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಕಡಬ ,ಪುತ್ತೂರು, ಸುಳ್ಯ, ಬಂಟ್ವಾಳ ಭಾಗದಲ್ಲಿ ಬುಧವಾರ ಮುಂಜಾನೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಮಂಗಳವಾರ ಸಂಜೆಯಿಂದಲೇ ತುಂತುರು ಮಳೆಯ ಸಿಂಚನವಾಗುತ್ತಿದ್ದು ಮೋಡ ಕವಿದ ವಾತಾವರಣವಿತ್ತು.ಕಾಸರಗೋಡು ಕಡೆ 2 ಮಿಮೀ ವರೆಗೆ ಮಳೆಯಾದರೆ ಬಂಟ್ವಾಳ ಪ್ರದೇಶದಲ್ಲಿ 5 ಮಿಮೀ ಮಳೆಯಾಗಿದೆ.

Advertisement

ಧನುರ್ಮಾಸದಲ್ಲಿ ವಿಪರೀತ ಚಳಿ ಇರುವುದು ಪದ್ಧತಿ. ಆದರೆ ಈಗ ಅಕಾಲಿಕ ಮಳೆ ಕೃಷಿಕರಿಗೂ ಸಂಕಷ್ಟ.  ಅಡಿಕೆ ಬೆಳೆ ಸಹಿತ ಎಲ್ಲಾ ಕೃಷಿಕರಿಗೂ ಸಂಕಷ್ಟ. ಅಡಿಕೆ ಒಣಗಿಸಲು ಹರಸಾಹಸ, ರಬ್ಬರ್‌ ಇಳುವರಿ ಕುಂಠಿತವಾಗಿದೆ. ಮುಂದಿನ ಅಡಿಕೆ ಫಸಲಿಗೂ ಇದೇ ಸಂಕಷ್ಟದ ಮಳೆ. ಚಳಿಯ ಕೊರತೆ, ಮಳೆಯ ಆಗಮನ ಇದೆರಡೂ ಈಗ ಸಮಸ್ಯೆ, ಕೃಷಿಗೂ ಸಂಕಷ್ಟ.

ಉತ್ತರಾಯಣ ಆರಂಭವಾಗಿರುವ ಕಾರಣ ಹಲವು ಮನೆಗಳಲ್ಲಿ ಶುಭಕಾರ್ಯಗಳು, ಭೂತಾರಾದನೆಯಂತಹ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅಕಾಲಿಕ ಮಳೆಗೆ ಕಾರ್ಯಕ್ರಮ ನಡೆಯುವ ಮನೆಗಳಲ್ಲಿ ಚಿಂತೆ ಉಂಟಾಗಿದೆ.

Advertisement

ಗ್ರಾಮೀಣ ಭಾಗಗಳು ಸೇರಿದಂತೆ ಈಗ ಅಭಿವೃದ್ಧಿ ಕಾರ್ಯಗಳು ಆರಂಭವಾಗುವ ಸಮಯ. ಈಗ ಅಕಾಲಿಕ ಮಳೆಯು ಅಭಿವೃದ್ಧಿ ಕಾರ್ಯಗಳೂ ವಿಳಂಬಕ್ಕೂ ಕಾರಣವಾಗುತ್ತಿದೆ.

RM ನ್ಯೂಸ್‌, ಕೊಕ್ಕಡ -ನೆಲ್ಯಾಡಿ

Advertisement

Belthangady, Kadaba ,Puttur, Sullia, Bantwal area of ​​Dakshina Kannada district received rain for about an hour on Wednesday morning.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror