ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಭಾಗದಲ್ಲಿ ಈ ವರ್ಷದ ಮೊದಲ ಮಳೆ ಶುಕ್ರವಾರ ಬೆಳಗ್ಗೆ ಸುರಿದಿದೆ. ಮಂಗಳೂರು ಸೇರಿದಂತೆ ದಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸುರಿದಿದೆ. ಕಾಸರಗೋಡು ಭಾಗದ ಕುಂಬಳೆ ಸೇರಿದಂತೆ ಹಲವು ಕಡೆಗಳಲ್ಲಿ ಸುರಿದಿದೆ.
ಬಿಸಿಲಿನಿಂದ ಸಂಕಷ್ಟ ಪಡುತ್ತಿದ್ದ ಕರಾವಳಿ ಜನರಿಗೆ ವರುಣ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಮೊದಲ ಮಳೆ ಜನರಿಗೆ ಖುಷಿ ನೀಡಿತು. ಇದೇ ವೇಳೆ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ , ಸುಳ್ಯದ ಕೆಲವು ಕಡೆ ತುಂತುರು ಮಳೆಯಾಗಿದೆ. ಸುಳ್ಯದ ಕೊಲ್ಲಮೊಗ್ರ, ಕಲ್ಲಾಜೆ, ಬಳ್ಪ, ಸುಬ್ರಹ್ಮಣ್ಯ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ. ಪುತ್ತೂರಿನ ಪಾಣಾಜೆ , ಈಶ್ವರಮಂಗಲ ಮೊದಲಾದ ಕಡೆಗಳಲ್ಲೂ ಮಳೆಯಾಗಿದೆ. ಬೆಳ್ತಂಗಡಿಯ ಕೆಲವು ಕಡೆ ಮಳೆಯಾಗಿದೆ. ಕಾಸರಗೋಡಿನ ಕುಂಬಳೆ, ಬಾಯಾರು ಸೇರಿದಂತೆ ಹಲವು ಕಡೆ ಮಳೆಯಾಯಿತು. ಉಡುಪಿ ಜಿಲ್ಲೆಯ ಕೆಲವು ಕಡೆ ಮಳೆಯಾಯಿತು.
Dakshina Kannada district and Kasaragod region received the first rain of this year on Friday morning.
ಹವಾಮಾನ ವಿಶ್ಲೇಷಣೆ ಮಾಡುವ ಕೃಷಿಕ ಸಾಯಿಶೇಖರ್ ಕರಿಕಳ ಅವರು ಗುರುವಾರ ನೀಡಿರುವ ಹವಾಮಾನ ಮಾಹಿತಿ…