ಆಲಿಕಲ್ಲು ಮಳೆಗೆ ತತ್ತರಿಸಿದ ರೈತರು | ಮಣ್ಣು ಪಾಲಾದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ |

Advertisement

ಕರಾವಳಿ ಜನತೆ ಈಗಾಗಲೇ ಮೆಣಸಿನಕಾಯಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷದಿಂದ ಕೆ.ಜಿಗೆ 400-500 ರಲ್ಲೇ ಮೆಣಸಿಕಾಯಿ ಬೆಲೆ ಇದ್ದು, ಸಂಬಾರು ಭಾರಿ ಖಾರ ಅನ್ನಿಸಿ ಬಿಟ್ಟಿದೆ. ಈ ಬಾರಿಯಾದ್ರು ಇಳಿಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಮತ್ತೆ ನಿರಾಸೆಯಾಗಿದೆ. ಕರಾವಳಿಗೆ ಮೆಣಸು ಏನಿದ್ರು ಉತ್ತರ ಕರ್ನಾಟಕದ ಕಡೆಯಿಂದಲೇ ಬರಬೇಕು. ಅಲ್ಲಿ ಮಳೆ ಬೆಳೆ ಚೆನ್ನಾಗಿ ಆದ್ರೆ ನಮಗೆ ಮೆಣಸಿನ ರೇಟಿನ ಘಾಟು ಸ್ವಲ್ಪ ಕಮ್ಮಿ ಆಗಬಹುದು. ಆದ್ರೆ ಈ ಬಾರಿ ಸುರಿದ ಅಕಾಲಿಕ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ.

Advertisement

ಬಿಸಿಲಿನ ಧಗೆಗೆ ಜನರು ತತ್ತರಿಸಿ ಹೋಗಿದ್ದರು. ಆದರೆ ಬೇಸಿಗೆ ಆರಂಭದಲ್ಲಿಯೇ ವರುಣ ದೇವ ಭಾರೀ ಅವಾಂತರ ಮಾಡಿದ್ದಾನೆ. ಆಲಿಕಲ್ಲು ಮಳೆಗೆ ಅನ್ನದಾತರು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಬೃಹತ್ ಗಾತ್ರದ ಆಲಿಕಲ್ಲುಗಳು ಧರೆಗುರುಳಿದ್ದ ಪರಿಣಾಮ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದೆ.

Advertisement
Advertisement

ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದ ಹಲವೆಡೆ ವರುಣನ ಆರ್ಭಟ ಶುರುವಾಗಿದೆ. ನಿನ್ನೆ ತಡರಾತ್ರಿ ಹಾಗೂ ಬೆಳಗಿನ ಜಾವ ಯಾದಗಿರಿ ಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.ಯಾದಗಿರಿ ನಗರದಲ್ಲಿ ವರುಣನ ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ರೈಲ್ವೆ ನಿಲ್ದಾಣ ರಸ್ತೆ ಜಲಾವೃತ ಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.

Advertisement

ಹಲವು ಭಾಗದಲ್ಲಿ ಆಲಿಕಲ್ಲು ಮಳೆ ಯಾಗಿದ್ದು ಸಣ್ಣ ಸಣ್ಣ ಉಂಡೆಗಳಂತೆ ಧರೆಗೆ ಅಪ್ಪಳಿಸಿದೆ. ಇದರಿಂದದಾಗಿ ವಡಗೇರಾ ತಾಲೂಕಿನ ಗುಂಡಗುರ್ತಿ, ಗೋಡಿಹಾಳ ಭಾಗದಲ್ಲಿ ಲಕ್ಷಾಂತರ ಬೆಲೆ ಬಾಳುವ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಮತ್ತೊಂದು ಕಡೆ ಭತ್ತದ ಬೆಳೆ ನೆಲಕ್ಕಚ್ಚಿದೆ.

Advertisement

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳಿಸಗರ ಗ್ರಾಮದಲ್ಲಿ ಆಲಿಕಲ್ಲು ಮಳೆ ಹಿನ್ನಲೆ ಹಲವೆಡೆ ರೈತರು ಬೆಳೆದ ಅಪಾರ ಪ್ರಮಾಣದ ಪಪ್ಪಾಯಿ ಬೆಳೆ ಹಾನಿಯಾಗಿದೆ. ಶಹಾಪುರದ ಪಟ್ಟಣ ಸುತ್ತ ಮುತ್ತಲಿನಲ್ಲಿ‌ ಭಾರೀ ಪ್ರಮಾಣದ ಆಲಿಕಲ್ಲು ಧರೆಗುರುಳಿದ್ದು, ಕೆಲ ಸಮಯ ಮಿನಿ ಕಾಶ್ಮೀರದಂತೆ ಪರಿವರ್ತನೆಯಾಗಿತ್ತು.

ಬೆನಕನಹಳ್ಳಿಯಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ.ಅಕಾಲಿಕ ಮಳೆಯಿಂದಾಗಿ ಅಕ್ಷರಶಃ ಯಾದಗಿರಿ ಜನತೆ ತತ್ತರಿಸಿದ್ದು, ಮತ್ತೆ ರೈತಾಪಿ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆದ ಬೆಳೆ ರೈತರ ಕೈಗೆ ಬಾರದಂತಾಗಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಆಲಿಕಲ್ಲು ಮಳೆಗೆ ತತ್ತರಿಸಿದ ರೈತರು | ಮಣ್ಣು ಪಾಲಾದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ |"

Leave a comment

Your email address will not be published.


*