#Gliricidia | ಮಳೆಗಾಲ ಆರಂಭವಾಗಿದೆ ಹಸಿರೆಲೆ ಗೊಬ್ಬರದ ಗಿಡ ನೆಡಿ | ಗೊಬ್ಬರದ ಚಿಂತೆ ಬಿಡಿ

July 13, 2023
1:48 PM
ಹಸಿರು ಗೊಬ್ಬರ ಬೆಳೆಯುವ ಸಸ್ಯಗಳನ್ನು ಹೊಲದಲ್ಲಿಯೇ ಬೆಳೆದು ಸ್ಥಳದಲ್ಲಿಯೇ ಮಣ್ಣಿನಲ್ಲಿ ಬೆರೆಸುವ ಮೂಲಕ ಬೆಳೆಗಳಿಗೆ ಉತ್ತಮ ಗೊಬ್ಬರ ನೀಡಬಹುದು

ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳ ಹಿಂದಿನಿಂದಲೂ ಬಂದ ಪದ್ಧತಿ. ನಮ್ಮ ಹಿರಿಯರು ಹಸಿರೆಲೆ ಗೊಬ್ಬರ ಬಳಸಿಯೇ ಕೃಷಿಯನ್ನು ಮಾಡುತ್ತಿದ್ದರು. ಇದು ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಹೆಚ್ಚಿನ ಸ್ಥಾನವನ್ನು ಪಡೆದಿದೆ. ಹಸಿರೆಲೆ ಗೊಬ್ಬರವು ಭೂಮಿಗೆ ಮತ್ತು ಬೆಳೆಗೆ ಅವಶ್ಯವಿರುವ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನಲ್ಲದೆ ಇತರ ಲಘು ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ರೈತರು ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು  ಹಸಿರೆಲೆ ಗೊಬ್ಬರ ಬಳಸಿ ಹೆಚ್ಚಿಸಿಕೊಳ್ಳಬಹುದು.

Advertisement
Advertisement
Advertisement
Advertisement

ಹಸಿರೆಲೆ ಗೊಬ್ಬರ ಬೇಸಾಯ ಅಂದರೆ ಬಲಿಯದ ಸಸ್ಯಗಳು, ಸಸ್ಯದ ಎಲೆಗಳು ಮತ್ತು ಉಳಿದ ಎಳೆಯ ಸಸ್ಯ ಭಾಗಗಳನ್ನು ಉಳುಮೆ ಮಾಡುವ ಮೂಲಕ ಮಣ್ಣಿನಲ್ಲಿ ಬೆರೆಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವದಾಗಿದೆ.

Advertisement
  • ಒಂದು ಎಕರೆ ಪ್ರದೇಶ ಅಂದರೆ 200*220 ಅಡಿ, ಸುಮಾರು 800 ಅಡಿ ಉದ್ದಳತೆಯ ಬೇಲಿ/ ಬದುವಿನ ಅಂಚಿ#Bordersನಲ್ಲಿ ಪ್ರತಿ ಅಡಿಗೆ ಒಂದರಂತೆ ಕನಿಷ್ಠ 800-1000 ಸಂಖ್ಯೆಯ ಗೊಬ್ಬರದ ಗಿಡ/ಕಡ್ಡಿ ನೆಡಿ.
  • ಒಂದು ಗಿಡದಿಂದ ಪ್ರತಿ ವರ್ಷ 15 ರಿಂದ 20 ಕೆಜಿ ಹಸಿರೆಲೆಯಿಂದ ಪ್ರತಿ ಎಕರೆಗೆ 10 ರಿಂದ 15 ಟನ್ ಹಸಿರು ಗೊಬ್ಬರ ಪ್ರತಿ ವರ್ಷ ಪುಕ್ಕಟೆಯಾಗಿ ದೊರಕುತ್ತದೆ. ಈ ಗಿಡ ಹಸಿರೆಲೆ ಜೊತೆಗೆ ವಾತಾವರಣದಲ್ಲಿನ ಸಾರಾಜನಕವನ್ನು ಹೀರಿ ಭೂಮಿಗೆ ನೀಡುತ್ತದೆ.
  • ಇದು ವಾತವರಣದಲ್ಲಿನ ಸಾರಜನಕ ಸ್ಥಿರೀಕರಣ #Nitrogen Fixation ಮಾಡಿ ಭೂಮಿಗೆ ಸೇರಿಸುತ್ತದೆ. ಪ್ರತಿ ವರ್ಷ ಉಳುಮೆ ಮಾಡಿ ದ್ವಿದಳ ಹಾಕುವ ಖರ್ಚು ಉಳಿತಾಯವಾಗಲಿದೆ.
  • ಪ್ರತಿ ಎಕ್ರೆಗೆ 10 ರಿಂದ 15 ಟನ್ ಹಸಿರೆಲೆ   ಸೇರಿಸುವುದರಿಂದ ಒಂದು ಎಕರೆಗೆ ಸುಮಾರು 30 ಕೆಜಿ ಸಾರಾಜನಕ ಸೇರಿಸಬಹುದು, ಮಣ್ಣಿನ ಫಲವತ್ತತೆ ಹೆಚ್ಚುತ್ತದೆ,ಸಾವಯವ ಇಂಗಾಲ ಜಾಸ್ತಿಯಾಗಿ ನೀರು ಹಿಡಿದಿಡುವ ಶಕ್ತಿ ಹೆಚ್ಚುತ್ತದೆ, ಬೆಳೆಗೆ ಬೇಕಾದ ಎಲ್ಲಾ ಪೋಷಕಾಂಶ ದೊರಕುತ್ತದೆ. ಯಾವುದೇ ರಾಸಾಯನಿಕ ಗೊಬ್ಬರದಿಂದಲೂ ಈ ಪ್ರಮಾಣದ NPK ಮತ್ತು micronutrients ಕೊ￰ಡಲಾಗುವುದಿಲ್ಲ.
  • ಒಂದು ಬಾರಿ ಕಡ್ಡಿ/ಬೀಜ ನೆಟ್ಟು 03 ತಿಂಗಳು ಕನಿಷ್ಠ ಮುತುವರ್ಜಿ ವಹಿಸಿದರೆ, ಯಾವುದೇ ಆರೈಕೆ, ನೀರು ಬೇಡದೇ ನಿರಂತರವಾಗಿ ಪ್ರತಿ ವರ್ಷ ಹಸಿರೆಲೆ ಸೊಪ್ಪು ಪಡೆಯಬಹುದು.
  • ಎಲ್ಲಾ ರೈತರು ಗ್ಲಿರಿಸಿಡಿಯಾ ಬೆಳಸಿ ಗೊಬ್ಬರದ ಸ್ವಾಲಂಬನೆ ಸಾಧಿಸಿ ರಾಸಾಯನಿಕ ಗೊಬ್ಬರಕ್ಕೆ ವಿನಿಯೋಗಿಸುವ ದುಡ್ಡು ಉಳಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು.
  • ಮರೆಯದೆ ಎಲ್ಲಾ ರೈತರು ‘ಗೊಬ್ಬರ ಗಿಡ’  ನೆಡುವ ಆಂದೋಲನ ಮಾಡೋಣ, ಮಣ್ಣು ರಕ್ಷಣೆಗೆ ಪಣ ತೊಡೋಣ.
  • ತಡ ಮಾಡದೇ ಇಂದೇ ಕಾರ್ಯಪ್ರವೃತ್ತರಾಗಿ, ಗ್ಲಿರಿಸಿಡಿಯಾ ಗಿಡ ನಿಮ್ಮ ಸಮೀಪದಲ್ಲಿದರೆ ಹೆಬ್ಬೆಟ್ಟಿನ ಗಾತ್ರದ 03 ಅಡಿ ಕಡ್ಡಿ ಕತ್ತರಿಸಿ ನೆಡುವುದು, ಬೀಜ ಸಹ ನೆಟ್ಟು ಬೆಳಸಬಹುದು.

ಗೊಬ್ಬರದ (Gliricidia)ಗಿಡದ ಬೀಜಕ್ಕಾಗಿ ಸಂಪರ್ಕಿಸಿರಿ

ಕೃಷಿಕ ಅಗೋ ಫಾರ್ಮ್ ಡೆವೆಲಪರ್ಸ್, ಗದಗ,  ಮೊ : 9481448990 , 9741108500

Advertisement

-ವಾಟ್ಸ್ ಅಪ್ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror