ಭಾರತಕ್ಕೆ ಯಾರಾದರು ಕಿರುಕುಳ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ | ರಕ್ಷಣಾ ಸಚಿವ ರಾಜನಾಥ ಸಿಂಗ್‌ |

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಲಶಾಲಿ ದೇಶವಾಗಿದೆ. ನಾವು ಶಾಂತಿ ಪ್ರಿಯರು. ಹಾಗೆಂದು ‘ಭಾರತವನ್ನು ಯಾರಾದರು ಸುಮ್ಮನೆ ಕಿರುಕುಳ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ’, ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ‌

Advertisement
Advertisement

ಅವರು ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಮಾತನಾಡುತ್ತಿದ್ದರು. ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದ ರಾಜನಾಥ್‌ ಸಿಂಗ್‌, ರಷ್ಯಾ ಹಾಗೂ ಉಕ್ರೇನನ ನಡುವೆ ಯುದ್ಧದ ಹಿನ್ನಲೆಯಲ್ಲಿ ಅಮೇರಿಕಾವು ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ. ಈ ಕುರಿತು ಅಮೇರಿಕಾದ ಹೆಸರು ತೆಗೆದುಕೊಳ್ಳದೆ ರಾಜನಾಥ ಸಿಂಗ್‌ ಅವರು ‘ಭಾರತಕ್ಕೆ ಒಂದು ದೇಶದೊಂದಿಗೆ ಒಳ್ಳೆಯ ಸಂಬಂಧವಿದೆ, ಅದರ ಅರ್ಥ ಮತ್ತೊಂದು ದೇಶಕ್ಕೆ ಕೆಡುಕಾಗಲಿ, ಎಂದಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಬಂಧ ಬೆಳಸುವಾಗ ಎರಡೂ ದೇಶಗಳಿಗೂ ಅದರಿಂದ ಪ್ರಯೋಜನವಾಗಲಿ, ಎಂಬ ಧೋರಣೆಯ ಮೇಲೆ ಭಾರತವು ಯಾವಾಗಲೂ ವಿಶ್ವಾಸವಿಡುತ್ತದೆ’, ಎಂದು ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಭಾರತಕ್ಕೆ ಯಾರಾದರು ಕಿರುಕುಳ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ | ರಕ್ಷಣಾ ಸಚಿವ ರಾಜನಾಥ ಸಿಂಗ್‌ |"

Leave a comment

Your email address will not be published.


*