ಸುದ್ದಿಗಳು

#RakshaBandhan |ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ರಕ್ಷಾಬಂಧನ ಆಚರಣೆ | ಭಾರತೀಯ ಸಂಪ್ರದಾಯಗಳಲ್ಲಿ ಅಗಾಧವಾದ ವಿಚಾರಗಳಿವೆ | ಶ್ರೀಕೃಷ್ಣ ಉಪಾಧ್ಯಾಯ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತೀಯ ಆಚರಣೆ, ಸಂಸ್ಕೃತಿಗಳ ಹಿಂದೆ ಉದಾತ್ತವಾದ ವಿಚಾರಧಾರೆಗಳು ಹುದುಗಿಕೊಂಡಿವೆ. ನಮ್ಮ ಪ್ರತಿಯೊಂದು ಸಂಪ್ರದಾಯದ ಬಗೆಗೂ ಸಹಸ್ರಾರು ಪುಟಗಳಷ್ಟು ಅಧ್ಯಯನ ನಡೆಸಬಹುದಾದ ಅವಕಾಶಗಳಿವೆ. ರಕ್ಷಾ ಬಂಧನ ಆಚರಣೆಯೂ ಇದಕ್ಕೆ ಹೊರತಾಗಿಲ್ಲ. ಭ್ರಾತೃತ್ವದ ಭಾವತೀವ್ರತೆಯನ್ನು ಹೊರಹೊಮ್ಮಿಸುವ ಹಾಗೂ ತಂಗಿಯ ರಕ್ಷಣೆಯ ಹೊಣೆಯನ್ನು ಅಣ್ಣನಾದವನು ತನ್ನದಾಗಿಸುವ ಪವಿತ್ರ ಗುರುತಾಗಿ ರಕ್ಷಾಬಂಧನ ಆಚರಿಸಲ್ಪಡುತ್ತದೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

Advertisement

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬುಧವಾರ ಆಯೋಜಿಸಲಾದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಒಂದಾಗಿದ್ದ ಭಾರತವನ್ನು ಒಡೆದಾಳುವ ನೀತಿಯ ಮುಖಾಂತರ ತಮ್ಮ ಕಪಿಮುಷ್ಟಿಗೆ ಒಳಪಡಿಸಿದ್ದ ಬ್ರಿಟಿಷರಿಂದಾಗಿ ಮನಸ್ಸು ಮನಸ್ಸುಗಳು ದೂರಾಗುವ ಪರಿಸ್ಥಿತಿ ಭಾರತದಲ್ಲಿ ಬರುವಂತಾಯಿತು. ಇಂತಹ ಸಂದರ್ಭದಲ್ಲಿ ದೇಶವನ್ನು ತಾಯಿ ಎಂಬ ನೆಲೆಯಲ್ಲಿ ಗುರುತಿಸಿ ‘ಭಾರತ ಮಾತೆ’ ಎಂದು ಕರೆಯಲಾಯಿತು. ಇದರಿಂದಾಗಿ ಭ್ರಾತೃತ್ವದ ಭಾವವನ್ನು ದೇಶದ ಒಳಗಡೆ ಹರಿಸುವುದಕ್ಕೆ ಸಾಧ್ಯವಾಯಿತು. ಒಂದೇ ತಾಯಿಯ ಮಕ್ಕಳಲ್ಲದಿದ್ದರೂ ಭ್ರಾತೃತ್ವವನ್ನು ಸಾಧಿಸುವ ಸಾಧ್ಯತೆಯನ್ನು ರಕ್ಷಾಬಂಧನ ಅನಾವರಣಗೊಳಿಸಿದೆ ಎಂದು ನುಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರಸ್ಪರ ರಕ್ಷೆಯನ್ನು ಕಟ್ಟಿ ರಕ್ಷಾಬಂಧನವನ್ನು ಆಚರಿಸಿದರು.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರ

ಅಜ್ಜಾವರ ಪಂಚಾಯತ್ ಸಭಾಂಗಣದಲ್ಲಿ ಮಲ್ಲಿಗೆ ಕೃಷಿ ತರಬೇತಿ ನಡೆಯಿತು.

4 hours ago

ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣ ಪತ್ತೆ | ಹೆಚ್ಚುತ್ತಿರುವ ಬರ್ಮಾ ಅಡಿಕೆ ಸಾಗಾಟ |

ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…

6 hours ago

ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ

ಕಡಬ ತಾಲೂಕಿನ ಯೇನೆಕಲ್ಲು ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿದೆ. ಈ ಸಂದರ್ಭಹವ್ಯಾಸಿ…

7 hours ago

2030ರ ವೇಳೆಗೆ 170 ಮಿಲಿಯನ್ ಉದ್ಯೋಗ ಸೃಷ್ಟಿ | ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರ

ನವೀಕರಿಸಬಹುದಾದ  ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿದ್ದು, ಹಸಿರು ಪರಿವರ್ತನೆಯಂತಹ  ಕ್ಷೇತ್ರದಲ್ಲಿ…

11 hours ago

ಹವಾಮಾನ ವರದಿ | 31-03-2025 | ಎ.1 ರಿಂದ ವಿವಿದೆಡೆ ಮಳೆ ಆರಂಭದ ಸಾಧ್ಯತೆ |

ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…

15 hours ago