ರಾಮ ನವಮಿ | ರಾಮ ಎಂದರೆ ಸರ್ವಸ್ವ | ರಾಮ ಎಂದರೆ ಆದರ್ಶ |

April 21, 2021
9:28 AM

ನಾವು ಮನಸಾ ಸ್ಮರಿಸುವುದು ರಾಮ ಎಂದೇ. ಬಾಲ್ಯದಲ್ಲಿ ‌ ಕೇಳಿದ ರಾಮ ನಾಮ ಮರೆಯುವುದುಂಟೇ. ದೀಪವಿಲ್ಲದೆ ಕತ್ತಲೆಯಲ್ಲಿ ನೆರಳಿನಾಟಕ್ಕೆ ಹೆದರಿದಾಗ ಅಜ್ಜಿ ಹೇಳಿಕೊಟ್ಟ ಧೈರ್ಯ ಮಂತ್ರ ರಾಮ. ಶಾಲೆಗೆ ಹೋಗುವಾಗ ಗುಡುಗು, ಸಿಡಿಲು, ಗಾಳಿ ಮಳೆ ಬಂದಾಗ ಜಪಿಸಲು ಅಮ್ಮ ಹೇಳಿಕೊಟ್ಟ ಶಕ್ತಿ ಮಂತ್ರ ರಾಮ ನಾಮ. ದೂರದೂರಿನಲಿ ವಿಧ್ಯಾಭ್ಯಾಸಕ್ಕೆ ತೆರಳುವಾಗ ಅಪ್ಪ ಹೇಳಿಕೊಟ್ಟ ಸೂತ್ರವೂ ರಾಮನಾಮವೇ.

ಬದುಕಿನ ಒಂದೊಂದು ಮೆಟ್ಟಿಲು ಹತ್ತುವಾಗಲೂ ಜೊತೆಗಿದ್ದು ಶಕ್ತಿ ನೀಡುವ ಒಂದು ಟ್ಯಾಬೆಲ್ಟ್ ಇದೆಯೆಂದರೆ ಅದು ರಾಮ ನಾಮವೇ. ನಮಗೆ ಅನಿರೀಕ್ಷಿತ ಆಘಾತವಾದಾಗ ಹೇಗೆ ಅಮ್ಮನನ್ನು ನೆನೆಯುತ್ತೇವೆಯೋ ಹಾಗೆ ರಾಮನಾಮವೂ ಜೊತೆಯಾಗುವುದು ಸಹಜವೆಂದರೆ ತಪ್ಪಲ್ಲ. ಅದು ನಮಲ್ಲಿ ರಕ್ತಗತವಾಗಿರುವಂತಹುದು.

ಮಕ್ಕಳು ಬಿದ್ದಾಗ ಸಾಮಾನ್ಯವಾಗಿ ಅಯ್ಯೋ ಎಂಬ ಶಬ್ದ ಬಂದುಬಿಡುತ್ತದೆ. ಹಾಗನ್ನಬಾರದು ರಾಮ ರಾಮ ಅನ್ನು ನೋವೇ ತಿಳಿದು., ಅಪಾಯವೂ ಆಗದು ಎಂಬುದು ಹಿರಿಯರ ಮಾತು. ಎಷ್ಟೋ ಬಾರಿ ನಿಜವೆನಿಸುತ್ತವೆ.

ರಾಮನೆಂದರೆ ನಮಗೆ ಒಂದು ಮೂರ್ತಿಯಲ್ಲ, ಪೂಜಿಸುವ ದೇವನಾಗಿ ಮಾತ್ರ ಉಳಿದಿಲ್ಲ. ರಾಮನೆಂದರೆ ನಮಗೆ ಸರ್ವಸ್ವ. ರಾಮ ಯಾವಾಗಲೂ ನಮ್ಮ ನೈತಿಕತೆಯ ಪ್ರತೀಕ. ರಾಮನವಮಿಯೆಂದರೆ ರಾಮ ಹುಟ್ಟಿದ ದಿನ. ಇದು ಯಾವಾಗಲೂ ಯುಗಾದಿ ಕಳೆದು ಎಂಟನೇಯ ದಿನ ಬರುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ.

ರಾಮನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.‌ ರಾಮನ ಬಾಲಲೀಲೆಯಾಗಿರಲಿ, ವಿದ್ಯಾಭ್ಯಾಸದ‌, ಸಂಧರ್ಭವಾಗಿರಲಿ ಹೋರಾಟದ ಬದುಕಾಗಿರಲಿ ಎಲ್ಲವೂ ಜನಸಾಮಾನ್ಯರು ಅನುಭವಿಸುವಂತದ್ದೇ ಆಗಿತ್ತು . ರಾಮ ಮನಸಿಗೆ ಹತ್ತಿರವಾಗುವುದು ಇದೇ ವಿಷಯಕ್ಕೆ. ರಾಮಾಯಣವನ್ನು ಎಲ್ಲಾ ವಯಸ್ಸಿನವರೂ ಓದಬಹುದು. ಹಿರಿಯರು ಯಾವತ್ತೂ ಹೇಳುತ್ತಾರೆ, ರಾಮಾಯಣ ಓದಿ ಕೆಟ್ಟವರಿಲ್ಲ, ಅಲ್ಲಿನ ಪ್ರತಿಯೊಂದು ವಿಷಯಗಳು ಸಾರ್ವಕಾಲಿಕ ಸತ್ಯ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ
March 12, 2025
10:13 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |
March 12, 2025
10:03 PM
by: ದ ರೂರಲ್ ಮಿರರ್.ಕಾಂ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ
ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಸಂಕಷ್ಟ | ಬೆಂಬಲ ಬೆಲೆ ಯೋಜನೆ ರಾಜ್ಯಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿ ಪತ್ರ | ಕೇಂದ್ರದ ಗಮನ ಸೆಳೆದ ಸಚಿವರು |
March 12, 2025
7:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror