ನಾವು ಮನಸಾ ಸ್ಮರಿಸುವುದು ರಾಮ ಎಂದೇ. ಬಾಲ್ಯದಲ್ಲಿ ಕೇಳಿದ ರಾಮ ನಾಮ ಮರೆಯುವುದುಂಟೇ. ದೀಪವಿಲ್ಲದೆ ಕತ್ತಲೆಯಲ್ಲಿ ನೆರಳಿನಾಟಕ್ಕೆ ಹೆದರಿದಾಗ ಅಜ್ಜಿ ಹೇಳಿಕೊಟ್ಟ ಧೈರ್ಯ ಮಂತ್ರ ರಾಮ. ಶಾಲೆಗೆ ಹೋಗುವಾಗ ಗುಡುಗು, ಸಿಡಿಲು, ಗಾಳಿ ಮಳೆ ಬಂದಾಗ ಜಪಿಸಲು ಅಮ್ಮ ಹೇಳಿಕೊಟ್ಟ ಶಕ್ತಿ ಮಂತ್ರ ರಾಮ ನಾಮ. ದೂರದೂರಿನಲಿ ವಿಧ್ಯಾಭ್ಯಾಸಕ್ಕೆ ತೆರಳುವಾಗ ಅಪ್ಪ ಹೇಳಿಕೊಟ್ಟ ಸೂತ್ರವೂ ರಾಮನಾಮವೇ.
ಬದುಕಿನ ಒಂದೊಂದು ಮೆಟ್ಟಿಲು ಹತ್ತುವಾಗಲೂ ಜೊತೆಗಿದ್ದು ಶಕ್ತಿ ನೀಡುವ ಒಂದು ಟ್ಯಾಬೆಲ್ಟ್ ಇದೆಯೆಂದರೆ ಅದು ರಾಮ ನಾಮವೇ. ನಮಗೆ ಅನಿರೀಕ್ಷಿತ ಆಘಾತವಾದಾಗ ಹೇಗೆ ಅಮ್ಮನನ್ನು ನೆನೆಯುತ್ತೇವೆಯೋ ಹಾಗೆ ರಾಮನಾಮವೂ ಜೊತೆಯಾಗುವುದು ಸಹಜವೆಂದರೆ ತಪ್ಪಲ್ಲ. ಅದು ನಮಲ್ಲಿ ರಕ್ತಗತವಾಗಿರುವಂತಹುದು.
ಮಕ್ಕಳು ಬಿದ್ದಾಗ ಸಾಮಾನ್ಯವಾಗಿ ಅಯ್ಯೋ ಎಂಬ ಶಬ್ದ ಬಂದುಬಿಡುತ್ತದೆ. ಹಾಗನ್ನಬಾರದು ರಾಮ ರಾಮ ಅನ್ನು ನೋವೇ ತಿಳಿದು., ಅಪಾಯವೂ ಆಗದು ಎಂಬುದು ಹಿರಿಯರ ಮಾತು. ಎಷ್ಟೋ ಬಾರಿ ನಿಜವೆನಿಸುತ್ತವೆ.
ರಾಮನೆಂದರೆ ನಮಗೆ ಒಂದು ಮೂರ್ತಿಯಲ್ಲ, ಪೂಜಿಸುವ ದೇವನಾಗಿ ಮಾತ್ರ ಉಳಿದಿಲ್ಲ. ರಾಮನೆಂದರೆ ನಮಗೆ ಸರ್ವಸ್ವ. ರಾಮ ಯಾವಾಗಲೂ ನಮ್ಮ ನೈತಿಕತೆಯ ಪ್ರತೀಕ. ರಾಮನವಮಿಯೆಂದರೆ ರಾಮ ಹುಟ್ಟಿದ ದಿನ. ಇದು ಯಾವಾಗಲೂ ಯುಗಾದಿ ಕಳೆದು ಎಂಟನೇಯ ದಿನ ಬರುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ.
Advertisement
ರಾಮನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ರಾಮನ ಬಾಲಲೀಲೆಯಾಗಿರಲಿ, ವಿದ್ಯಾಭ್ಯಾಸದ, ಸಂಧರ್ಭವಾಗಿರಲಿ ಹೋರಾಟದ ಬದುಕಾಗಿರಲಿ ಎಲ್ಲವೂ ಜನಸಾಮಾನ್ಯರು ಅನುಭವಿಸುವಂತದ್ದೇ ಆಗಿತ್ತು . ರಾಮ ಮನಸಿಗೆ ಹತ್ತಿರವಾಗುವುದು ಇದೇ ವಿಷಯಕ್ಕೆ. ರಾಮಾಯಣವನ್ನು ಎಲ್ಲಾ ವಯಸ್ಸಿನವರೂ ಓದಬಹುದು. ಹಿರಿಯರು ಯಾವತ್ತೂ ಹೇಳುತ್ತಾರೆ, ರಾಮಾಯಣ ಓದಿ ಕೆಟ್ಟವರಿಲ್ಲ, ಅಲ್ಲಿನ ಪ್ರತಿಯೊಂದು ವಿಷಯಗಳು ಸಾರ್ವಕಾಲಿಕ ಸತ್ಯ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…