ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

March 23, 2026
9:12 PM
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ ಸ್ವೀಕಾರ ದಿನದ ಅಂಗವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ‘ಜೀವನದಾನ’ ನೀಡಲಾಯಿತು.

ಪ್ರತಿಯೊಬ್ಬರ ಬದುಕಿಗೂ ಅಗತ್ಯವಾದದ್ದು ನೆಮ್ಮದಿ. ಆ ನೆಮ್ಮದಿಗಾಗಿ ಬದುಕಬೇಕು ಹೊರತು ಹಣ, ಕೀರ್ತಿ, ಅಧಿಕಾರಕ್ಕಾಗಿ ಅಲ್ಲ. ಹಣ-ಅಧಿಕಾರದಿಂದ ಎಂದಿಗೂ ನೆಮ್ಮದಿ ಸಿಗುವುದಿಲ್ಲ. ನಮ್ಮಲ್ಲಿರುವುದನ್ನು ಹಂಚಿದಾಗ ಮಾತ್ರ ನಿಜವಾದ ಶಾಂತಿ ಸಿಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿಮಠದಲ್ಲಿ ಭಾನುವಾರ ಶ್ರೀಗಳ ಸಂನ್ಯಾಸ ಸ್ವೀಕಾರ ದಿನದ ಅಂಗವಾಗಿ ಆಯೋಜಿಸಿದ್ದ ವಿಶೇಷ ‘ಜೀವನದಾನ’ ಕಾರ್ಯಕ್ರಮದಲ್ಲಿ ಜೀವನರಕ್ಷೆ ಅನುಗ್ರಹ ನೀಡಿ ಅವರು ಮಾತನಾಡಿದರು.

ದಾನದಲ್ಲಿ ಎರಡು ಕ್ರಮಗಳಿವೆ. ಒಂದು ತಪಸ್ವಿಗಳು ಅಥವಾ ಸಾಧಕರಿಗೆ ದಾನ ಮಾಡುವುದು; ಇನ್ನೊಂದು ಅಗತ್ಯವಿರುವವರಿಗೆ ನೆರವಾಗುವುದು. ಮೊದಲನೆಯದು ಇಂದಿನ ದಿನಮಾನದಲ್ಲಿ ಕಷ್ಟಕರವಾದರೂ ಎರಡನೆಯದು ಸುಲಭ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ವೈಭವವಾಗಿದ್ದು ಅದು ನಮಗೂ ಸಂತೋಷ ನೀಡುತ್ತದೆ ಎಂದು ಶ್ರೀಗಳು ಹೇಳಿದರು.

ಚಿನ್ನದ ಕಿರೀಟ, ಪಲ್ಲಕ್ಕಿ ಮೆರವಣಿಗೆ ಸಂತೋಷ ನೀಡುವುದಿಲ್ಲ. ಆದರೆ ಸಮಾಜವೇ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನೆರವಾಗಲು ಮುಂದಾದಾಗ ದೊರೆಯುವ ಸಂತೋಷಕ್ಕಿಂತ ದೊಡ್ಡದು ಬೇರೆ ಯಾವುದೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ತ್ಯಾಗದಲ್ಲಿ ನೆಮ್ಮದಿ – ಇಂದಿನ ಸಮಾಜಕ್ಕೆ ಪಾಠ :  ಹಿಂದಿನ ಕಾಲದಲ್ಲಿ ರಾಜಾದಿರಾಜರೂ ವಯಸ್ಸಾದಂತೆ ವನಪ್ರಸ್ಥಕ್ಕೆ ತೆರಳಿ ನಂತರ ಸಂನ್ಯಾಸ ಜೀವನ ನಡೆಸುತ್ತಿದ್ದರು. ತ್ಯಾಗದಲ್ಲೇ ನೆಮ್ಮದಿ ಇದೆ ಎಂಬುದನ್ನು ಅವರು ಅರಿತಿದ್ದರು. ಆದರೆ ಇಂದಿನ ಕಾಲದಲ್ಲಿ ಕೊನೆಯ ಉಸಿರಿನವರೆಗೂ ಅಧಿಕಾರದ ಆಸೆ ಮಾನವನ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು. “ಕೂಡುವ ಲೆಕ್ಕಕ್ಕಿಂತ ಕಳೆಯುವ ಲೆಕ್ಕದಲ್ಲಿರುವ ಸುಖವನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.

ಮುಳ್ಳಿನಿಂದ ಶಾಲು ಬಿಡಿಸಿ ಹೊದೆಸಿ ‘ಜೀವನರಕ್ಷೆ’ :  ಕಾರ್ಯಕ್ರಮದ ಪ್ರಮುಖ ಕ್ಷಣದಲ್ಲಿ ಮುಳ್ಳಿನ ಗಿಡದಿಂದ ಶಾಲನ್ನು ಬಿಡಿಸಿ ಅದನ್ನು ಶ್ರೀರಕ್ಷೆಯಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಹೊದೆಸುವ ಮೂಲಕ ಜೀವನದಾನ ನೀಡಲಾಯಿತು.

ಹೊಸನಗರದ ಸಂಪೇಕಟ್ಟೆಯ ಮತ್ತೀಕೈ ಗ್ರಾಮದ ರಾಮಚಂದ್ರ ಭಟ್ ಅವರ ಕುಟುಂಬಕ್ಕೆ ಈ ಅನುಗ್ರಹ ದೊರೆಯಿತು. 88 ವರ್ಷದ ರಾಮಚಂದ್ರ ಭಟ್ ಅಡುಗೆ ಮಾಡಿ ಜೀವನ ಸಾಗಿಸುತ್ತಿದ್ದು, ದುಡಿಯುತ್ತಿದ್ದ ಮಗನನ್ನು ಕಳೆದುಕೊಂಡ ಕಾರಣ ಕುಟುಂಬ ಸಂಕಷ್ಟದಲ್ಲಿತ್ತು. ಜೀವನದಾನ ಪಡೆದ ಕುಟುಂಬದ ಎಲ್ಲಾ ಅಗತ್ಯಗಳನ್ನು ಶ್ರೀಮಠವೇ ಜೀವನಪರ್ಯಂತ ನೋಡಿಕೊಳ್ಳಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಶಂಕರ ಪಂಚಮಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜೀವನದಾನ ಟ್ರಸ್ಟಿನ ಡಾ. ಶಾರದಾ ಜಯಗೋವಿಂದ, ಮಂಜಪ್ಪ ಗುಂಡಿ, ಆರ್.ಜಿ. ಹೆಗಡೆ ಹೊಸಾಕುಳಿ, ಚಂದ್ರಮತಿ ಹರಗಿ, ರಾಜಲಕ್ಷ್ಮೀ ಹೆಗಡೆ ಹೊಸ್ಮನೆ, ಮಹೇಶ್ ಚಟ್ನಳ್ಳಿ, ಶಾಂತಾರಾಮ ಹಿರೇಮನೆ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಏನಿದು ‘ಜೀವನದಾನ’? :  ಸಂನ್ಯಾಸ ಸ್ವೀಕರಿಸಿದ ಶುಭ ನೆನಪಿಗಾಗಿ ಪ್ರತಿವರ್ಷ ದೀನ-ದುಃಖಿತರಿಗೆ ಅಭಯ ನೀಡಿ ಅವರ ಜೀವನಕ್ಕೆ ನೆರವಾಗುವ ಜೀವಕಾರುಣ್ಯದ ಕಾರ್ಯಕ್ರಮವೇ ಜೀವನದಾನ. ಜನ್ಮದಿನವನ್ನು ಕೆಲವರು ದೀಪ ಆರಿಸಿ ಆಚರಿಸಿದರೆ, ಕೆಲವರು ದೀಪ ಬೆಳಗಿಸಿ ಆಚರಿಸುತ್ತಾರೆ. ಆದರೆ ಶ್ರೀಗಳು ಸಂನ್ಯಾಸ ಸ್ವೀಕಾರದ ದಿನದಂದು ಕಷ್ಟದಲ್ಲಿರುವವರ ಬಾಳಿಗೆ ಬೆಳಕಾಗುವ ಮೂಲಕ ಅದನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

Jagadguru Sri Raghaveshwara Bharati Swamiji emphasized that true peace comes from sharing and helping those in need rather than pursuing wealth or power. During the annual “Jeevanadana” programme marking his sanyasa day, a distressed elderly family was granted lifetime support by the Math.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು
ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!
March 23, 2026
7:25 AM
by: ದ ರೂರಲ್ ಮಿರರ್.ಕಾಂ
ಮಾರ್ಚ್‌ನಲ್ಲಿ‌ ಮಳೆ ಶಾಕ್….! ರೈತರಿಗೆ ನಷ್ಟದ ಭೀತಿ
March 23, 2026
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror