ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |

January 24, 2025
11:33 AM
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ ಬಳಿಕ ಮತ್ತೆ ಮನೆಗೆ ತಲಪುತ್ತಿದ್ದಾರೆ. ದೈಗೋಳಿಯ ಸಾಯಿನಿಕೇತನ ಸೇವಾಶ್ರಮದ ಕಾರ್ಯವು ಮಾದರಿಯಾಗಿದೆ.

ಅನೇಕ ಬಾರಿ ರಸ್ತೆ ಬದಿ ತಿರುಗಾಡುವ ವ್ಯಕ್ತಿಗಳನ್ನು ಬಡಿದು ಓಡಿಸುವವರೇ ಹೆಚ್ಚು. ಸಾಮಾಜಿಕ ಕಾಳಜಿಯುಳ್ಳ ಕೆಲವರು ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಹೀಗೆ ಚಿಕಿತ್ಸೆ ಪಡೆದವರು ಮರಳಿ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಇಂತಹದೊಂದು ಕೆಲಸವನ್ನು ದೈಗೊಳಿಯ ಸಾಯಿನಿಕೇತನ ಸೇವಾಶ್ರಮ ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದೆ. ಇದೀಗ ಬಿಹಾರದ ಮಹಿಳೆಯೊಬ್ಬರು ವರ್ಷದ ಬಳಿಕ ಮತ್ತೆ ತನ್ನ ಮನೆಗೆ ಸೇರಿದ್ದಾರೆ.…..ಮುಂದೆ ಓದಿ….

Advertisement

ಕಳೆದ ವರ್ಷ ಆಗಸ್ಟ್ ಮೊದಲ ವಾರ ಅಂಬಲ್ಪಾಡಿಯ ವಿಶು ಶೆಟ್ಟಿ  ಅವರು ಮಾನಸಿಕ ಅಸ್ವಸ್ಥತೆಯಿಂದ ಉಡುಪಿಯ ಬೀದಿಯಲ್ಲಿ ತಿರುಗಾಡುತ್ತಿದ್ದ ರಮಾದೇವಿ ಎನ್ನುವ ಮಹಿಳೆಯನ್ನು ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿ ನಿಕೇತನ ಸೇವಾಶ್ರಮಕ್ಕೆ ದಾಖಲಿಸಿದ್ದರು.  ಆಶ್ರಮದಲ್ಲಿ ರಮಾದೇವಿ ಆಶ್ರಮದ ದೈನಂದಿನ ಚಟುವಟಿಕೆಗಳಾದ ಯೋಗ, ಧ್ಯಾನ, ಕೃಷಿ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ಆಪ್ತ ಸಮಾಲೋಚನೆ, ವೈದ್ಯರ ಚಿಕಿತ್ಸೆ ಮುಂತಾದ ಚಟುವಟಿಕೆಗಳಲ್ಲಿ ಉಳಿದ ಎಲ್ಲಾ ಮಂದಿ ಭಾಗವಹಿಸುವಂತೆ ಆಶ್ರಮದ ಪ್ರಮುಖರಾದ ಡಾ.ಉದಯಕುಮಾರ್‌ ನೂಜಿ ಹಾಗೂ ಡಾ. ಶಾರದಾ ಅವರು ವ್ಯವಸ್ಥೆ ಮಾಡಿದ್ದರು.

ಸಾಯಿ ನಿಕೇತನ ಆಶ್ರಮದಲ್ಲಿ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದರಿಂದ ರಮಾದೇವಿಯವರು ತನ್ನ ವಿಳಾಸವನ್ನು ತಿಳಿಸಲು ಶಕ್ತರಾಗಿದ್ದರು. ನಂತರ ಮುಂಬೈ ನ ಶ್ರದ್ಧಾ ಪುನರ್ವಸತಿ ಕೇಂದ್ರದ ನೆರವಿನಿಂದ ರಮಾದೇವಿಯನ್ನು ಬಿಹಾರ್ ರಾಜ್ಯದ, ಕತಿಹಾರ್ ಜಿಲ್ಲೆಯ, ಮಾಲಿಕ್ಪೂರ್ ಊರಿಗೆ ಸುರಕ್ಷಿತವಾಗಿ ತಲುಪಿಸಲಾಯಿತು.  ರಮಾದೇವಿ ಅವರನ್ನು ಅವರ ಮಗ, ಮಗಳು ಮತ್ತು ಕುಟುಂಬದ ಸದಸ್ಯರು ಮರಳಿ ಭೇಟಿಯಾದ ಕ್ಷಣಗಳು ಅತ್ಯಂತ ಭಾವುಕತೆಯಿಂದ ಕೂಡಿತ್ತು. ರಮಾದೇವಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅವರ ಮನೆಯವರು ಸಾಯಿ ನಿಕೇತನ ಸೇವಾಶ್ರಮಕ್ಕೆ ಮತ್ತು ಮುಂಬೈ ನ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಯಾವುದೋ ಕಾರಣಕ್ಕೆ ಮಾನಸಿಕವಾದ ತೊಂದರೆಗೆ ಒಳಗಾಗಿ ರೈಲಿನ ಮೂಲಕ ಬರುವ ಅನೇಕರು ದಿಕ್ಕು ತಪ್ಪಿ ಅಲೆದಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾದರೆ ವ್ಯಕ್ತಿಗಳು ಮರಳಿ ಹೊಸ ಬದುಕು ಪಡೆಯಲು ಸಾಧ್ಯವಾಗುತ್ತದೆ. ಇಂತಹ ಮರು ಜನ್ಮ ನೀಡುವ ಕೆಲಸ ಮಾಡುತ್ತಿರುವ ಸಾಯುನಿಕೇತನ ಸೇವಾಶ್ರಮದ ಕೆಲಸಗಳು ಮಾದರಿಯಾಗಿವೆ. ಈ ಸೇವಾಶ್ರಮವು ಅನಾಥರನ್ನು, ಮಾನಸಿಕ ವಿಕಲಚೇತನರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಈಗಾಗಲೇ ನೂರಕ್ಕೂ ಅಧಿಕ ಮಂದಿ ಇಲ್ಲಿದ್ದಾರೆ. (ವಿಡಿಯೋ ಇಲ್ಲಿದೆ…)

https://www.facebook.com/reel/954182929682682

In the first week of August of the previous year, a woman named Ramadevi, who was wandering the streets of Udupi due to mental illness, was admitted to Sai Niketan Sevashram in Daigoli, located in the Kasaragod district. Following her treatment at the ashram, she was subsequently sent back to her home in Bihar later in the year.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ
April 25, 2025
7:42 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ
ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |
April 25, 2025
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group