ಅನೇಕ ಬಾರಿ ರಸ್ತೆ ಬದಿ ತಿರುಗಾಡುವ ವ್ಯಕ್ತಿಗಳನ್ನು ಬಡಿದು ಓಡಿಸುವವರೇ ಹೆಚ್ಚು. ಸಾಮಾಜಿಕ ಕಾಳಜಿಯುಳ್ಳ ಕೆಲವರು ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಹೀಗೆ ಚಿಕಿತ್ಸೆ ಪಡೆದವರು ಮರಳಿ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಇಂತಹದೊಂದು ಕೆಲಸವನ್ನು ದೈಗೊಳಿಯ ಸಾಯಿನಿಕೇತನ ಸೇವಾಶ್ರಮ ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದೆ. ಇದೀಗ ಬಿಹಾರದ ಮಹಿಳೆಯೊಬ್ಬರು ವರ್ಷದ ಬಳಿಕ ಮತ್ತೆ ತನ್ನ ಮನೆಗೆ ಸೇರಿದ್ದಾರೆ.…..ಮುಂದೆ ಓದಿ….
ಕಳೆದ ವರ್ಷ ಆಗಸ್ಟ್ ಮೊದಲ ವಾರ ಅಂಬಲ್ಪಾಡಿಯ ವಿಶು ಶೆಟ್ಟಿ ಅವರು ಮಾನಸಿಕ ಅಸ್ವಸ್ಥತೆಯಿಂದ ಉಡುಪಿಯ ಬೀದಿಯಲ್ಲಿ ತಿರುಗಾಡುತ್ತಿದ್ದ ರಮಾದೇವಿ ಎನ್ನುವ ಮಹಿಳೆಯನ್ನು ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿ ನಿಕೇತನ ಸೇವಾಶ್ರಮಕ್ಕೆ ದಾಖಲಿಸಿದ್ದರು. ಆಶ್ರಮದಲ್ಲಿ ರಮಾದೇವಿ ಆಶ್ರಮದ ದೈನಂದಿನ ಚಟುವಟಿಕೆಗಳಾದ ಯೋಗ, ಧ್ಯಾನ, ಕೃಷಿ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ಆಪ್ತ ಸಮಾಲೋಚನೆ, ವೈದ್ಯರ ಚಿಕಿತ್ಸೆ ಮುಂತಾದ ಚಟುವಟಿಕೆಗಳಲ್ಲಿ ಉಳಿದ ಎಲ್ಲಾ ಮಂದಿ ಭಾಗವಹಿಸುವಂತೆ ಆಶ್ರಮದ ಪ್ರಮುಖರಾದ ಡಾ.ಉದಯಕುಮಾರ್ ನೂಜಿ ಹಾಗೂ ಡಾ. ಶಾರದಾ ಅವರು ವ್ಯವಸ್ಥೆ ಮಾಡಿದ್ದರು.
ಸಾಯಿ ನಿಕೇತನ ಆಶ್ರಮದಲ್ಲಿ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದರಿಂದ ರಮಾದೇವಿಯವರು ತನ್ನ ವಿಳಾಸವನ್ನು ತಿಳಿಸಲು ಶಕ್ತರಾಗಿದ್ದರು. ನಂತರ ಮುಂಬೈ ನ ಶ್ರದ್ಧಾ ಪುನರ್ವಸತಿ ಕೇಂದ್ರದ ನೆರವಿನಿಂದ ರಮಾದೇವಿಯನ್ನು ಬಿಹಾರ್ ರಾಜ್ಯದ, ಕತಿಹಾರ್ ಜಿಲ್ಲೆಯ, ಮಾಲಿಕ್ಪೂರ್ ಊರಿಗೆ ಸುರಕ್ಷಿತವಾಗಿ ತಲುಪಿಸಲಾಯಿತು. ರಮಾದೇವಿ ಅವರನ್ನು ಅವರ ಮಗ, ಮಗಳು ಮತ್ತು ಕುಟುಂಬದ ಸದಸ್ಯರು ಮರಳಿ ಭೇಟಿಯಾದ ಕ್ಷಣಗಳು ಅತ್ಯಂತ ಭಾವುಕತೆಯಿಂದ ಕೂಡಿತ್ತು. ರಮಾದೇವಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅವರ ಮನೆಯವರು ಸಾಯಿ ನಿಕೇತನ ಸೇವಾಶ್ರಮಕ್ಕೆ ಮತ್ತು ಮುಂಬೈ ನ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಯಾವುದೋ ಕಾರಣಕ್ಕೆ ಮಾನಸಿಕವಾದ ತೊಂದರೆಗೆ ಒಳಗಾಗಿ ರೈಲಿನ ಮೂಲಕ ಬರುವ ಅನೇಕರು ದಿಕ್ಕು ತಪ್ಪಿ ಅಲೆದಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾದರೆ ವ್ಯಕ್ತಿಗಳು ಮರಳಿ ಹೊಸ ಬದುಕು ಪಡೆಯಲು ಸಾಧ್ಯವಾಗುತ್ತದೆ. ಇಂತಹ ಮರು ಜನ್ಮ ನೀಡುವ ಕೆಲಸ ಮಾಡುತ್ತಿರುವ ಸಾಯುನಿಕೇತನ ಸೇವಾಶ್ರಮದ ಕೆಲಸಗಳು ಮಾದರಿಯಾಗಿವೆ. ಈ ಸೇವಾಶ್ರಮವು ಅನಾಥರನ್ನು, ಮಾನಸಿಕ ವಿಕಲಚೇತನರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಈಗಾಗಲೇ ನೂರಕ್ಕೂ ಅಧಿಕ ಮಂದಿ ಇಲ್ಲಿದ್ದಾರೆ. (ವಿಡಿಯೋ ಇಲ್ಲಿದೆ…)
https://www.facebook.com/reel/954182929682682
In the first week of August of the previous year, a woman named Ramadevi, who was wandering the streets of Udupi due to mental illness, was admitted to Sai Niketan Sevashram in Daigoli, located in the Kasaragod district. Following her treatment at the ashram, she was subsequently sent back to her home in Bihar later in the year.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…