ಸಜ್ಜನರ ಸಮಾಧಾನ, ಕ್ಷಮೆ, ಸರಳತೆಯನ್ನು ಎಂದೂ ಅವರ ಅಸಾಮಥ್ರ್ಯ, ದೌರ್ಲಲ್ಯ ಎಂದು ಭಾವಿಸಬಾರದು; ಏಕೆಂದರೆ ಅವರ ಸಿಟ್ಟು ಲೋಕದ ಪಾಲಿಗೆ ಅಷ್ಟೇ ಕಂಟಕ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅವರು ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ಸಾಗರಸೇತು’ ರಾಮಕಥಾ ಸರಣಿಯ ಮಂಗಲ ಪ್ರವಚನ ಅನುಗ್ರಹಿಸಿದ ಅವರು, ಸಿಟ್ಟು ನಮ್ಮ ವಿವೇಕವನ್ನು ಹಾಳು ಮಾಡುತ್ತದೆ. ಸಿಟ್ಟು ಶಿವನ ಸೃಷ್ಟಿ. ಅದು ನಮ್ಮ ಕೈಯಲ್ಲಿದ್ದರೆ ಗುಣ. ಆದರೆ ಸಿಟ್ಟಿನ ಕೈಯಲ್ಲಿ ನಾವಿದ್ದರೆ ಅದು ದೋಷವಾಗುತ್ತದೆ. ರಾಮ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾದಾಗ ಒಂದು ಯೋಜನದಷ್ಟು ಹಿಂದೆ ಸರಿದು ಸಮುದ್ರರಾಜ ಎದ್ದು ಬಂದಾಗ, ರಾಮನ ಸಿಟ್ಟಿನ ನಡುವೆಯೂ ವಿವೇಕ, ದಯೆ, ಕಾರುಣ್ಯ ಪ್ರಕಟವಾಯಿತು ಎಂದು ಬಣ್ಣಿಸಿದರು.
ರಾಮನ ಮಹತ್ಕಾರ್ಯಕ್ಕಾಗಿ ಸಮುದ್ರ ತನ್ನ ಸಹಜ ಸ್ವಭಾವವಾದ ಅಗಾಧತೆಯನ್ನೂ ಕೈಬಿಡುವಂತಾಗುತ್ತದೆ. ಶರಣಾಗತರ ಪರಿಪಾಲನೆ ರಾಮನ ಧರ್ಮ. ಇದರಿಂದ ಗುರಿ ಇಟ್ಟ ಬ್ರಹ್ಮಾಸ್ತ್ರವನ್ನೂ ಸಮುದ್ರನ ಮೇಲೆ ಪ್ರಯೋಗಿಸದೇ ಸಮುದ್ರರಾಜನ ಮನವಿಯಂತೆ ದಸ್ವಿಗಳ ಮೇಲೆ ಪ್ರಯೋಗಿಸಿದ್ದು, ರಾಮನ ಕ್ಷಮಾಗುಣಕ್ಕೆ ಸಾಕ್ಷಿ ಎಂದು ಹೇಳಿದರು. ಸಜ್ಜನರ ಸಮಾಧಾನ, ಕ್ಷಮೆ, ಸರಳತೆ, ಹಿತವಚನ ದುಷ್ಟರ ಮುಂದೆ ಅಸಾಮಥ್ರ್ಯ, ದೌರ್ಲಬ್ಯ ಎನಿಸಿಕೊಳ್ಳುತ್ತದೆ. ಒಳ್ಳೆಯತನಕ್ಕೆ ಲೋಕ ಬೆಲೆ ಕೊಡುವುದಿಲ್ಲ. ಸಾಮ, ದಾನ, ಬೇಧ, ದಂಡದಲ್ಲಿ ದಂಡವೇ ಒಳ್ಳೆಯದು ಎಂದು ಕೆಲವೊಮ್ಮೆ ದೇವರಿಗೂ ಅನಿಸುತ್ತದೆ ಎಂದು ಸಮುದ್ರರಾಜನ ಮೇಲೆ ರಾಮನಿಗೆ ಕೋಪ ಪ್ರಕಟವಾದ ಸಂದರ್ಭವನ್ನು ಉದಾಹರಿಸಿದರು. ಸಾಗರದ ಉಪಾಸನೆ ಮಾಡಿ ಸಾಮದಿಂದ ಲಂಕೆಗೆ ದಾರಿ ಕೊಡುವಂತೆ ಮನವಿ ಮಾಡೋಣ ಎನ್ನುವುದು ವಿಭೀಷಣನ ಸಲಹೆ. ಅದರಂತೆ ದರ್ಬೆಯಲ್ಲಿ ಪವಡಿಸಿದ ಪ್ರಭು ರಾಮಚಂದ್ರ ಉಪಾಸನೆ ಮಾಡುವ ಜಾಗೃತ ಸ್ಥಿತಿಯಲ್ಲಿದ್ದಾನೆ. ಸಾಗರ ತರಣ ಅಥವಾ ಇಲ್ಲಿಯೇ ಮರಣ ಎಂಬ ದೃಢಸಂಕಲ್ಪದಿಂದ ಶ್ರೀರಾಮ ಪವಡಿಸಿದ್ದ. ಒಂದೇ ಗುರಿ, ಒಂದೇ ಸಂಕಲ್ಪ ಎನ್ನುವುದು ರಾಮನ ವಿಶೇಷ. ಸಂಪೂರ್ಣ ಮನಸ್ಸು ಶರೀರವನ್ನು ಸಂಯಮದಿಂದ ಇರಿಸಿ ಪವಡಿಸಿದ. ಮೂರು ರಾತ್ರಿ ಹೀಗೆಯೇ ಕಳೆಯಿತು. ಆದರೂ ಸಮುದ್ರ ಮಂದ ಬುದ್ಧಿಯಿಂದಾಗಿ ದರ್ಶನ ನೀಡಲಿಲ್ಲ ಎಂದು ಕಥಾ ಸಾರ ವಿವರಿಸಿದರು. ಆತ್ಮಪ್ರಶಂಸೆ ಮಾಡಿಕೊಳ್ಳುವುದು ಲೋಕದಲ್ಲಿ ಕೆಲವರ ಚಪಲತೆ. ದುಷ್ಟರು, ದೃಷ್ಟರಿಗೆ ಲೋಕ ಮರ್ಯಾದೆ ನೀಡುತ್ತದೆ.ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…