ಜನವರಿ 22ರಂದು ಇಡೀ ದೇಶವೆಲ್ಲಾ ರಾಮನ ಪ್ರೀತಿಗೆ ಪಾತ್ರವಾಗಲಿದೆ. ಆ ದಿನವನ್ನು ಹಬ್ಬವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನಡೆದರೆ ಮನೆ ಮನೆಗಳಲ್ಲಿ ರಾಮನ ಧ್ವಜ (Ram Flag) ಹಾರಾಡಲಿದೆ. ಈ ಕಾರಣಕ್ಕೆ ವಿದ್ಯಾನಗರಿ ಧಾರವಾಡದಲ್ಲಿ (Dharawada) ರಾಮನ ಧ್ವಜದ ತಯಾರಿ ಜೋರಾಗಿ ನಡೆಯುತ್ತಿದೆ.
ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್ ಅವರಿಗೆ ಈಗಾಗಲೇ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್ ಬಂದಿದೆ. ಕಳೆದ 15 ದಿನಗಳಿಂದ ಈ ಪ್ರತೀಶ್ ಅವರು ಧ್ವಜ ತಯಾರಿ ಮಾಡುತ್ತಿದ್ದಾರೆ. ಈಗಾಗಲೇ 1.5 ಲಕ್ಷ ಧ್ವಜ ರವಾನೆಯಾಗಿದೆ. ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಿರುವ ಜಾಧವ್ ಅವರಿಗೆ ಈ ಪುಣ್ಯ ಕಾರ್ಯಕ್ರಮದಿಂದ ಈ ಬಾರಿ ಆರ್ಡರ್ ಬಂದಿವೆ. ಕರ್ನಾಟಕ ಮಾತ್ರವಲ್ಲದೇ ಪಕ್ಕದ ಗೋವಾ, ತೆಲಂಗಾಣ ಹಾಗೂ ಆಂಧ್ರದಿಂದಲೂ ಬಂದಿದೆ.
4 ಗಾತ್ರದ ಧ್ವಜ ತಯಾರಿ ನಡೆದಿದ್ದು, ಸಣ್ಣ ಧ್ವಜದಿಂದ ಹಿಡಿದು 5 ಮೀಟರ್‌ವರೆಗೆ ಧ್ವಜ ಇವೆ. 5 ರೂ.ನಿಂದ ಹಿಡಿದು 350 ರೂ.ವರೆಗೆ ಧ್ವಜದ ಬೆಲೆ ಇವೆ. ಸುಮಾರು 80 ಕಾರ್ಮಿಕರು ಕೆಲ ವಾರಗಳಿಂದ ಪ್ರತಿ ದಿನವೂ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಹಗಲು ಕೆಲಸ ಮಾಡಿದರೆ, ಪುರುಷರು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಒಬ್ಬರು 2 ಸಾವಿರಕ್ಕೂ ಹೆಚ್ಚು ಧ್ವಜ ತಯಾರಿ ಮಾಡುತ್ತಿದ್ದಾರೆ. ಅಯೋಧ್ಯೆ ಕಾರ್ಯಕ್ರಮದಿಂದಾಗಿ ಎಷ್ಟೋ ಬಡವರಿಗೆ ಈಗ ಕೆಲಸ ಸಿಕ್ಕಂತಾಗಿದೆ.
- ಅಂತರ್ಜಾಲ ಮಾಹಿತಿ
Rama flag will be hoisted in the houses of devotees during the Sri Rama Pratistha program in Ayodhya. Preparations for this are going on in Dharwad.