ರಾಮಮಂದಿರ ಉದ್ಘಾಟನೆಯಂದು ಮನೆ ಮನೆಗಳಲ್ಲಿ ಹಾರಾಡಲಿದೆ ರಾಮನ ಧ್ವಜ | ಧಾರಾವಾಡದಲ್ಲಿ ತಯಾರಾಗುತ್ತಿದೆ 3 ಲಕ್ಷ ರಾಮ ಧ್ವಜ |

January 12, 2024
12:14 PM

ಜನವರಿ 22ರಂದು ಇಡೀ ದೇಶವೆಲ್ಲಾ ರಾಮನ ಪ್ರೀತಿಗೆ ಪಾತ್ರವಾಗಲಿದೆ. ಆ ದಿನವನ್ನು ಹಬ್ಬವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನಡೆದರೆ ಮನೆ ಮನೆಗಳಲ್ಲಿ ರಾಮನ ಧ್ವಜ (Ram Flag) ಹಾರಾಡಲಿದೆ. ಈ ಕಾರಣಕ್ಕೆ ವಿದ್ಯಾನಗರಿ ಧಾರವಾಡದಲ್ಲಿ (Dharawada) ರಾಮನ ಧ್ವಜದ ತಯಾರಿ‌ ಜೋರಾಗಿ ನಡೆಯುತ್ತಿದೆ.

Advertisement
Advertisement

ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್‌ ಅವರಿಗೆ ಈಗಾಗಲೇ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್‌ ಬಂದಿದೆ. ಕಳೆದ 15 ದಿನಗಳಿಂದ ಈ ಪ್ರತೀಶ್ ಅವರು ಧ್ವಜ ತಯಾರಿ ಮಾಡುತ್ತಿದ್ದಾರೆ. ಈಗಾಗಲೇ 1.5 ಲಕ್ಷ ಧ್ವಜ ರವಾನೆಯಾಗಿದೆ. ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಿರುವ ಜಾಧವ್‌ ಅವರಿಗೆ ಈ ಪುಣ್ಯ ಕಾರ್ಯಕ್ರಮದಿಂದ ಈ ಬಾರಿ ಆರ್ಡರ್ ಬಂದಿವೆ. ಕರ್ನಾಟಕ ಮಾತ್ರವಲ್ಲದೇ ಪಕ್ಕದ ಗೋವಾ, ತೆಲಂಗಾಣ ಹಾಗೂ ಆಂಧ್ರದಿಂದಲೂ ಬಂದಿದೆ.

Advertisement

4 ಗಾತ್ರದ ಧ್ವಜ ತಯಾರಿ ನಡೆದಿದ್ದು, ಸಣ್ಣ ಧ್ವಜದಿಂದ ಹಿಡಿದು 5 ಮೀಟರ್‌ವರೆಗೆ ಧ್ವಜ ಇವೆ.  5 ರೂ.ನಿಂದ ಹಿಡಿದು 350 ರೂ.ವರೆಗೆ ಧ್ವಜದ ಬೆಲೆ ಇವೆ.‌ ಸುಮಾರು 80 ಕಾರ್ಮಿಕರು ಕೆಲ ವಾರಗಳಿಂದ ಪ್ರತಿ ದಿನವೂ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಹಗಲು ಕೆಲಸ ಮಾಡಿದರೆ, ಪುರುಷರು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಒಬ್ಬರು 2 ಸಾವಿರಕ್ಕೂ ಹೆಚ್ಚು ಧ್ವಜ ತಯಾರಿ‌ ಮಾಡುತ್ತಿದ್ದಾರೆ. ಅಯೋಧ್ಯೆ ಕಾರ್ಯಕ್ರಮದಿಂದಾಗಿ ಎಷ್ಟೋ ಬಡವರಿಗೆ ಈಗ ಕೆಲಸ ಸಿಕ್ಕಂತಾಗಿದೆ.

  • ಅಂತರ್ಜಾಲ ಮಾಹಿತಿ

Rama flag will be hoisted in the houses of devotees during the Sri Rama Pratistha program in Ayodhya. Preparations for this are going on in Dharwad.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror