ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗುರುರಾಜ್ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ತಕ್ಷಣವೇ ಶಿಕ್ಷಣ ಸಂಸ್ಥೆಯಿಂದ ವಜಾ ಮಾಡಬೇಕು ಹಾಗೂ ಅತ್ಯಾಚಾರದ ಆರೋಪ ಇರುವ ಶಿಕ್ಷಕ ಪವಿತ್ರ ಶಿಕ್ಷಣ ಸಂಸ್ಥೆಗೆ ಅಗತ್ಯವಿಲ್ಲ ಎಂದು ಸುಬ್ರಹ್ಮಣ್ಯದ ಜನರು ಹಾಗೂ ಹಿರಿಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಶಿಕ್ಷಕ ಗುರುರಾಜ್ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಜೆಕ್ಟ್ ಕೆಲಸ ಹಾಗೂ ಟ್ಯೂಷನ್ ನೆಪದಲ್ಲಿ ಮನೆಗೆ ಕರೆಯಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅತ್ಯಾಚಾರ ಮಾಡಿದ ಬಗ್ಗೆ ವಿದ್ಯಾರ್ಥನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಗುರುರಾಜ್ ವಿಕೃತಕಾಮಿ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಫೋಕ್ಸೋ ಕಾಯಿದೆಯನ್ವಯ ಅಪ್ತಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಕೇಸು ದಾಖಲಾಗಿತ್ತು.
ಪೊಲೀಸ್ ತನಿಖೆಯ ವೇಳೆ ಆರೋಪಿ ಶಿಕ್ಷಕ ವಿದ್ಯಾರ್ಥಿನಿಯನ್ನು ಪ್ರಾಜೆಕ್ಟ್ ಕೆಲಸ ಹಾಗೂ ಟ್ಯೂಷನ್ ನೆಪದಲ್ಲಿ ಮನೆಗೆ ಕರೆಯಿಸಿ ಪತ್ರ ಬರೆಸುವುದು , ಫೋಟೊ ತೆಗೆಸುವುದು ಸೇರಿದಂತೆ ಕೆಟ್ಟ ಕೆಲಸಗಳಿಗೆ ಪ್ರೇರೇಪಣೆ ನೀಡುತ್ತಿರುವುದು ಹಾಗೂ ಬ್ಲಾಕ್ ಮೇಲ್ ಮಾಡಿ ಹಣ ವಸೂಲು ಮಾಡುತ್ತಿರುವ ಸಂಗತಿಯೂ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಆರೋಪಿ ಶಿಕ್ಷಕ ಗುರುರಾಜ್ ಇದಲ್ಲದೆ ಅನೇಕ ಇತರ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಉದ್ಯೋಗ ಒದಗಿಸಿಕೊಡುವ ಜಾಲ ಸೇರಿದಂತೆ ಇತರ ವ್ಯವಹಾರ ನಡೆಸುತ್ತಿದ್ದುದು ಅಲ್ಲದೆ ತನ್ನ ಸಂಬಳಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಸ್ತಿಯನ್ನೂ ಹೊಂದಿದ್ದ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಹೀಗಾಗಿ ಇಂತಹ ಶಿಕ್ಷಕ ಪವಿತ್ರ ಕ್ಷೇತ್ರದ ಆಡಳಿತದಲ್ಲಿ ಇರುವ ಕಾಲೇಜಿನಿಂದ ವಜಾ ಮಾಡಬೇಕು ಎಂದು ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆ.11 ರಂದು ಕುಕ್ಕೆ ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜು ವಠಾರದಲ್ಲಿ ಈ ಪ್ರತಿಭಟನೆ ನಡೆಯಲಿದೆ.
ಈಗಾಗಲೇ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು ಹಿರಿಯ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದು ತಕ್ಷಣವೇ ಈ ಶಿಕ್ಷಕ ಹಾಗೂ ಇಂತಹ ಶಿಕ್ಷಕರನ್ನು ಪವಿತ್ರ ಕ್ಷೇತ್ರದ ಕಾಲೇಜಿನಲ್ಲಿ ಇರಿಸಿಕೊಳ್ಳಬಾರದು ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ಎಂಬ ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಧೈರ್ಯದಿಂದ ಶಿಕ್ಷಣದ ಕಾರಣಕ್ಕೆ ಪ್ರಾಜೆಕ್ಟ್ ಕೆಲಸ ಹಾಗೂ ಟ್ಯೂಷನ್ ಗೆ ಕಳುಹಿಸುತ್ತಿದ್ದರು. ಆದರೆ ಈಗ ಈ ಶಿಕ್ಷಕನ ನಿಜ ಬುದ್ಧಿ ಬಯಲಾಗಿದೆ. ಇಂತಹ ಅತ್ಯಾಚಾರಿ ಶಿಕ್ಷಕನ ಬಗ್ಗೆ ಸಮಗ್ರ ತನಿಖೆಯಾಗಬೇಕು, ಈತನ ಜೊತೆಗಾರರ ಬಗ್ಗೆ ಹಾಗೂ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಹಾಗೂ ಇಲಾಖೆಗಳು ಗಂಭೀರವಾಗಿ ಪಡೆಯದೇ ಇದ್ದರೆ ಮಹಿಳಾ ಸಂಘಟನೆಗಳಿಂದಲೂ ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…