ದೇಶದ ಹೆಮ್ಮೆಯ ಉದ್ಯಮಿ, ಅಪ್ರತಿಮ ದೇಶ ಭಕ್ತ ರತನ್ ಟಾಟಾ ವಯೋಸಹಜ ಕಾಯಿಲೆಯಿಂದ ಬುಧವಾರ ರಾತ್ರಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ.
Advertisement
1937 ರಲ್ಲಿ ಮುಂಬೈನಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು ತಮ್ಮ 10 ನೇ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡರು. ಬಳಿಕ ಅಜ್ಜಿ ನವಾಜ್‌ಭಾಯಿ ಟಾಟಾ ಅವರ ಜೊತೆಯಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದರು. ಕಾರ್ನೆಲ್ ವಿವಿಯಿಂದ ವಾಸ್ತುಶಿಲ್ಪ ಪದವಿ ಪಡೆದಿದ್ದ ಅವರು, ಮುಂದೆ ಹಾರ್ವರ್ಡ್ ವಿವಿಯಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದರು. ತಮ್ಮ ಮುತ್ತಜ್ಜ ಜಮ್ಶೆಡ್‌ಜೀ ಟಾಟಾ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನ ಜವಾಬ್ದಾರಿಯನ್ನುರತನ್ ಟಾಟಾ ಅವರು 1991ರಲ್ಲಿ ವಹಿಸಿಕೊಂಡಿದ್ದರು. ಸುಮಾರು 100 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯನ್ನು ಅವರು 2012ರವರೆಗೆ ಸಮರ್ಥವಾಗಿ ಮುನ್ನಡೆಸಿದ್ದರು. 3800 ಕೋಟಿ ರೂ. ಆಸ್ತಿಯನ್ನು ಸಮರ್ಥವಾಗಿ ನಿಭಾಯಿಸಿ, ದೇಶ ಪರವಾದ ಚಿಂತನೆಯನ್ನು ಬೆಳೆಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement