ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?

August 2, 2024
2:13 PM

ಪಡಿತರ ಚೀಟಿ(Ration Card) ನಾಗರೀಕನಿಗೆ(Citizen) ತನ್ನ ಅಸ್ತಿತ್ವ ಹಾಗೂ ಸರ್ಕಾರದ ಸೌಲಭ್ಯಗಳನ್ನು(Govt Fecility)ಪಡೆಯಲಿರುವ ಮಾನ ದಂಡ. ಆದರೆ  ರಾಜ್ಯದಲ್ಲಿ ಅದೆಷ್ಟೋ ಮಂದಿ ನಕಲಿ ದಾಖಲೆಗಳನ್ನು(Fake documents) ಸೃಷ್ಟಿಸಿ  ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿರುತ್ತಾರೆ. ಪಡಿತರ ಚೀಟಿ ಪಡೆದವರಲ್ಲಿ ಬಹುತೇಕರು ಬಡತನ ರೇಖೆಗಿಂತ ಮೇಲಿದ್ದವರು, ಇಲ್ಲ ನಕಲಿ ದಾಖಲಾತಿ ಸೃಷ್ಟಿಸಿ ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಾವು ಪಡೆಯುತ್ತಾರೆ. ಈ ರೀತಿ ಗೋಲ್ ಮಾಲ್ ಮಾಡಿ ಪಡೆದ 12 ಲಕ್ಷ ರೇಷನ್ ಕಾರ್ಡ್ ಗಳನ್ನು ರಾಜ್ಯ ಸರ್ಕಾರ(state govt) ರದ್ದು‌(Cancel) ಮಾಡಿದೆ. ಇನ್ನಾದರು ಬಡವರ ಹೊಟ್ಟೆಗೆ ಹೊಡೆದು ತಿನ್ನುವುದನ್ನು ನಿಲ್ಲಿಸಿ. ರಾಜ ಸರ್ಕಾರವು ಅನರ್ಹ ಬಿಪಿಎಲ್(BPL) ರೇಷನ್ ಕಾರ್ಡ್ ರದ್ದು ಮಾಡುವಂತ ಕಾರ್ಯವನ್ನು ಈಗಾಗಲೇ ಪ್ರಾರಂಭ ಮಾಡಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ(Department of Food and Civil Supplies) ಈ ಕಾರ್ಯಕ್ಕೆ ಮುಂದಾಗಿದೆ.

ಈ ಮೊದಲು ಮತ್ತು ಪ್ರಸಕ್ತದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಒಟ್ಟು 14 ಮಾನದಂಡಗಳಿದ್ದು, ಅದರಂತೆ ಗ್ರಾಹಕರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಆದರೆ ಇದುವರೆಗೂ 10 ಲಕ್ಷಕ್ಕಿಂತಲೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ಅನರ್ಹವಾಗಿದ್ದು ಯಾವುದೇ ಮಾನದಂಡಗಳನ್ನು ಸರಿಯಾಗಿ ಪಾಲಿಸದೆ ರೇಷನ್ ಕಾರ್ಡಿನ ಎಲ್ಲಾ ಅನುಕೂಲಗಳನ್ನು ಪಡೆಯುತ್ತಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮೀಸಲಾಗಿರುವ ಬಿಪಿಎಲ್ ರೇಷನ್ ಕಾರ್ಡ್ ಈಗ ದುರ್ಬಳಕೆ ಆಗುತ್ತಿದ್ದು, ಇವಳ ಎಕರೆಗಿಂತಲೂ ಮೇಲೆ ಇರುವಂತಹ ರೈತರು ಸಹ ಕಾರ್ಡುಗಳನ್ನು ಹೊಂದಿದ್ದಾರೆ, ಅಲ್ಲದೆ 100 ಸಿಸಿ ಗಿಂತ ಹೆಚ್ಚಿನ ಇಂಧನ ಯುಕ್ತ ವಾಹನಗಳು ಮನೆಯಲ್ಲಿ ಇದ್ದಲ್ಲಿ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯುವುದಿಲ್ಲ. ಹೀಗಿದ್ದರೂ ಸಹ ಇಂಥವರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡು ಸರ್ಕಾರದ ಎಲ್ಲಾ ಸವಲತ್ತುಗಳನ್ನು ದೋಚುತ್ತಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಡಲೆ ಬೀಜ ತಿನ್ನುವಾಗ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ..!
January 6, 2026
10:41 PM
by: ರೂರಲ್‌ ಮಿರರ್ ಸುದ್ದಿಜಾಲ
ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು
January 6, 2026
10:12 PM
by: ರೂರಲ್‌ ಮಿರರ್ ಸುದ್ದಿಜಾಲ
ಮಾತೃ ವಂದನಾ ಯೋಜನೆ – ಗರ್ಭಿಣಿಯರಿಗೆ 6000 ಜಮೆ
January 6, 2026
10:10 PM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಪ್ರತ್ಯೇಕಿಸಲು ಎಐ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆ
January 6, 2026
9:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror