ಜೀವನವೊಂದು ನಾಟಕ ರಂಗ, ಇಲ್ಲಿ ನಿಮಿಷಕ್ಕೊಮ್ಮೆ ವೇಷ ಬದಲಿಸಿ ಬದುಕಬೇಕಾಗುತ್ತದೆ. ಆದರೆ ಅದು ನಮ್ಮ ಜೀವನಕ್ಕೋಸ್ಕರ. ಆದ್ರೆ ಇಲ್ಲೊಬ್ರು ಬೇರಯವರ ಜೀವನಕ್ಕೆ ಬೆಳಕಾಗಲು ಬೇರೆ ಬೇರೆ ವೇಷ ತೊಟ್ಟು ತಮ್ಮ ಜೀವನವನ್ನು ನಿರ್ಗತಿಕರ ಜೀವನಕ್ಕಾಗಿ ಮುಡಿಪಾಗಿಟ್ಟಿದ್ದಾರೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ರವಿ ಕಟಪಾಡಿ Ravi Katapadi ಅವರು ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಗೆವಿಭಿನ್ನ ವೇಷಗಳನ್ನು ತೊಡುತ್ತಾರೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ವಿಭಿನ್ನ ವೇಷಭೂಷಣ ತೊಟ್ಟು ಅಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸ ದಿನ ಒಂದು ಉದ್ದೇಶ ಇಟ್ಟುಕೊಂಡು ಜನರ ಮಧ್ಯೆ ಹೋಗುತ್ತಾರೆ. ರವಿ ಹಾಕುವ ವೇಷ ಸ್ವಂತಕ್ಕಲ್ಲ, ಪರರ ಹಿತಕ್ಕಾಗಿ ಹಾಗೂ ಕಷ್ಟದ ಪರಿಹಾರಕ್ಕಾಗಿ ಆಗಿರುತ್ತದೆ.
ರವಿ ಈವರೆಗೆ ಏಳು ವಿಭಿನ್ನ ವೇಷಗಳನ್ನು ತೊಟ್ಟಿದ್ದು ಒಂದು ಕೋಟಿ ಹದಿಮೂರು ಲಕ್ಷ 70 ಸಾವಿರ ರುಪಾಯಿ ಜನರಿಂದ ಸಂಗ್ರಹಿಸಿದ್ದಾರೆ. ಒಂದು ರೂಪಾಯಿ ಸ್ವಂತ ಖರ್ಚಿಗೆ ಇಟ್ಟುಕೊಳ್ಳದ ರವಿ, ಎಲ್ಲವನ್ನೂ 113 ಅನಾರೋಗ್ಯ ಪೀಡಿತ ಕುಟುಂಬಗಳಿಗೆ ದಾನ ಮಾಡಿದ್ದಾರೆ. ಈ ಬಾರಿ ಮತ್ತೊಂದು ವಿಭಿನ್ನ ವೇಷದ ಮುಂದೆ ಪ್ರತ್ಯಕ್ಷ ಆಗಲಿದ್ದಾರೆ.
ಸಮಾಜ ಸೇವೆ ಮಾಡಿ ನೊಂದವರ ಮುಖದಲ್ಲಿ ನಗು ಮೂಡಿಸಿದ ರವಿ ಮನಸ್ಸಿಗೆ ಈ ಬಾರಿ ನೋವಾಗಿದೆ. ವೇಷ ಹಾಕಿ ಸಂಗ್ರಹಿಸಿದ ಹಣದಿಂದ ಕೋಟಿ ರೂಪಾಯಿಯ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂದು ಕೆಲವರು ಕುಹಕವಾಡಿದ್ದಾರೆ. ಈ ಬಾರಿ ನಾನು ವೇಷ ಹಾಕುವುದಿಲ್ಲ ಎಂದು ರವಿ ನಿರ್ಧರಿಸಿದ್ದರು. ರವಿ ಫ್ರೆಂಡ್ಸ್ ಮೀಟಿಂಗ್ ಮಾಡಿ ಊರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮ ಕೆಲಸ ನಾವು ಮಾಡೋಣ ಎಂದು ಈ ಬಾರಿಯೂ ವೇಷ ಹಾಕಲು ನಿರ್ಧರಿಸಿದ್ದಾರೆ.
ನಮ್ಮ ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಸೀ ಫೋಕ್ ಎಂಬ ಹಾಲಿವುಡ್ ಮೂವಿಯ ಒಂದು ಫಿಕ್ಷನ್ ಪಾತ್ರವನ್ನು ಹೋಲುವ ವೇಷ ಹಾಕಲಿದ್ದಾರೆ. ಕುಂದಾಪುರ ಮೂಲದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಮಗುವಿಗೆ ರವಿ ಸಹಾಯ ಮಾಡುವ ಮಾತು ನೀಡಿದ್ದಾರೆ. ಚಿಕಿತ್ಸೆಗೆ 15 ಲಕ್ಷ ರೂಪಾಯಿ ಬೇಕಾಗಿದ್ದು, ರವಿ ತನ್ನ ಕೈಲಾದ ಸಹಾಯ ಮಾಡಲಿದ್ದಾರೆ.
Source : Agencies
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …