ಕರ್ನಾಟಕ ರಾಜ್ಯ ಸ್ಕೂಲ್ ಚಾಂಪಿಯನ್ ಶಿಪ್2023 ರಲ್ಲಿ 15ರ ವಯೋಮಾನದ ಮುಕ್ತ ವಿಭಾಗದಲ್ಲಿ ರವೀಶ್ ಕೋಟೆ ಇವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರು 25 ಅಗಸ್ಟ್ ರಿಂದ 27ರ ವರೆಗೆ ಮೈಸೂರಿನಲ್ಲಿ ನಡೆದ ಪಂದ್ಯಾಟದಲ್ಲಿ ಆರು ಸುತ್ತಿನಲ್ಲಿ 5.5 ಅಂಕ ಗಳಿಸಿರುತ್ತಾರೆ. ಮುಂದಿನ ಜನವರಿ ತಿಂಗಳಲ್ಲಿ ಬಿಹಾರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿದಾರೆ. ಇವರು ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದು, ಜೀನಿಯಸ್ ಚೆಸ್ ಸ್ಕೂಲ್ ನ ಸತ್ಯ ಪ್ರಸಾದ್ ಕೋಟೆಯವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಸದ್ಯ ಇವರ Fide rating 1500 (classical)ಇದ್ದು, ಮೂರನೇಯ ತರಗತಿಯಿಂದ ಚೆಸ್ ಆಡಲು ಆರಂಭಿಸಿದ್ದರು. ಪುತ್ತೂರು ಜೀನಿಯಸ್ ಚೆಸ್ ಶಾಲೆಯಲ್ಲಿ ಸತ್ಯ ಪ್ರಸಾದ್ ಕೋಟೆ ಯವರಿಂದ ತರಬೇತಿ ಪಡೆಯುತ್ತಿದ್ದು ಜಿಲ್ಲಾ ಮಟ್ಟ ರಾಜ್ಯ ಮಟ್ಟದ ಹಾಗೂ ವಿವಿಧ ರಾಜ್ಯಗಳಲ್ಲಿ ರಾಷ್ಟ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಬಹುಮಾನಗಳನ್ನು ಪಡಕೊಂಡಿರುತ್ತಾರೆ. ಇವರ ಚೆಸ್ ಆಟಕ್ಕೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಂಶುಪಾಲರ ಹಾಗೂ ಅದ್ಯಾಪಕರ ಪ್ರೋತ್ಸಾಹ ತುಂಬಾ ಉತ್ತೇಜನಕವಾಗಿರುವುದು ಸಹಕಾರಿಯಾಗಿದೆ. ಚೆಸ್ ನ ಮೂರೂ ವಿಭಾಗಗಳಲ್ಲಿ Classical, Rapid ಹಾಗೂ Blitz ನಲ್ಲಿ ಆಡಬಲ್ಲವರಾಗಿದ್ದು ಎಲ್ಲಾ ವಿಭಾಗಗಳಲ್ಲಿ Fide rating ಹೊಂದಿರುತ್ತಾರೆ.
ಇವರು ಸುಳ್ಯ ತಾಲೂಕಿನ ಎಣ್ಮೂರಿನ ಅಲೆಂಗಾರದಲ್ಲಿರುವ ರಮೇಶ್ ಕೋಟೆ ಹಾಗೂ ಶುಭಮಂಗಳ ಅವರ ಪುತ್ರ.