ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬುಧವಾರ ನಿಗದಿಯಾಗದ ಸಭೆಯಲ್ಲಿ ಹಣಕಾಸು ನೀತಿ ಸಮಿತಿ (MPC) ಒಮ್ಮತದಿಂದ 40 ಬಿಪಿಎಸ್ ದರಗಳನ್ನು ಹೆಚ್ಚಿಸಿದೆ ಎಂದು ಹೇಳಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿರುವ ಆರ್‌ಬಿಐ ಗವರ್ನರ್, ಮೇ 2 ಮತ್ತು ಮೇ 4ರ ನಡುವೆ ಎಂಪಿಸಿ ಆಫ್-ಸೈಕಲ್ ಸಭೆಯನ್ನ ನಡೆಸಿತು.
ಆರ್‌ಬಿಐ ತನ್ನ ಏಪ್ರಿಲ್ ಹಣಕಾಸು ನೀತಿಯಲ್ಲಿ ತನ್ನ ಬೆಂಚ್ಮಾರ್ಕ್ ಸಾಲದ ದರವನ್ನ ದಾಖಲೆಯ ಕಡಿಮೆ ಮಟ್ಟದಲ್ಲಿ ಇರಿಸಿತ್ತು, ರೆಪೊ ದರವನ್ನು 4%ಕ್ಕೆ ಬದಲಾಯಿಸದೆ ಇರಿಸಿತ್ತು. ಎಂಪಿಸಿ ತನ್ನ ಹೊಂದಾಣಿಕೆಯ ನಿಲುವನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿತ್ತು. ಆದ್ರೆ, ‘ಹಣದುಬ್ಬರವು ಬೆಳವಣಿಗೆಯನ್ನು ಬೆಂಬಲಿಸುವ ಗುರಿಯೊಳಗೆ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಹೊಂದಾಣಿಕೆಯನ್ನು ಹಿಂತೆಗೆದುಕೊಳ್ಳುವುದರ ಬಗ್ಗೆ ಗಮನ ಹರಿಸಲು ಸರ್ವಾನುಮತದಿಂದ ಮತ ಚಲಾಯಿಸಿತ್ತು.
MPC votes unannimously to increase policy repo rates by 40 bps with immediate effect: RBI Governor Shaktikanta Das pic.twitter.com/JWM6ZwKTo3
— ANI (@ANI) May 4, 2022
Advertisement
ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ 17 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದು, ಆಹಾರ ಮತ್ತು ತಯಾರಾದ ವಸ್ತುಗಳ ಬೆಲೆಗಳಲ್ಲಿ ನಿರೀಕ್ಷೆಗಿಂತ ಏರಿಕೆ ಕಂಡುಬಂದಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.