ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಆಫ್ ಲೈನ್ ಡಿಜಿಟಲ್ ಪಾವತಿಗೆ ಒಂದು ಫ್ರೇಮ್ ವರ್ಕ್ ಬಿಡುಗಡೆ ಮಾಡಿದೆ. ಇದರಿಂದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಒಟ್ಟಾರೆ 2000 ರೂಪಾಯಿಗಳ ಮಿತಿಗೆ ಒಳಪಟ್ಟು, ಪ್ರತಿ ವಹಿವಾಡಿಗೆ 200 ರೂ.ಗಳವರೆಗೆ ಆಫ್ ಲೈನ್ ಮೂಲಕ ಹಣ ಪಾವತಿಸಬಹುದು.
Advertisement
ಆಫ್ ಲೈನ್ ವಹಿವಾಟುಗಳು ಕಳಪೆ ಅಥವಾ ದುರ್ಬಲ ಇಂಟರ್‌ನೆಟ್‌ಗಳನ್ನು ಹೊಂದಿರುವ ಪ್ರದೇಶಗಳಲ್ಲಿ ವಿಶೇಷವಾಗಿ ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟಿಗೆ ಒತ್ತು ನೀಡುವ ನಿರೀಕ್ಷೆಯಿದೆ. ಹೊಸ ಚೌಕಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಅನ್ವಯಿಸುತ್ತದೆ ಎಂದು ಆರ್.ಬಿ.ಐ ತಿಳಿಸಿದೆ.
Advertisement
ಫ್ರೇಮ್ ವರ್ಕ್ ಪ್ರಕಾರ, ಆಫ್ ಲೈನ್ ಡಿಜಿಟಲ್ ಪಾವತಿ ಎಂದರೆ ಇಂಟರ್‌ನೆಟ್ ಅಥವಾ ಟೆಲಿಕಾಂ ಸಂಪರ್ಕದ ಅಗತ್ಯವಿಲ್ಲದ ವಹಿವಾಟುಗಳಾಗಿದೆ ಎಂದು ಆರ್ ಬಿ ಐ ಮುಖ್ಯ ಜನರಲ್ ಯೋಗೇಶ್ ದಯಾಳ್ ಮಾಹಿತಿ ನೀಡಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement