ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಆರ್ಥಿಕ ವರ್ಷ 22 ರ 30,307 ಕೋಟಿ ರೂಪಾಯಿ ಲಾಭಾಂಶ ಪ್ರಕಟ ಮಾಡಿದ್ದು ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಲಾಭಾಂಶ ಇದಾಗಿದೆ. ಇದು ಹತ್ತು ವರ್ಷಗಳಲ್ಲಿನ ಅತ್ಯಂತ ಕಡಿಮೆ ಲಾಭಾಂಶವಾಗಿದೆ. ಕಳೆದ ವರ್ಷದ 99,122 ಕೋಟಿ ರೂಪಾಯಿಗಳ ಲಾಭಾಂಶ ಪ್ರಕಟವಾಗಿತ್ತು. ಸುಮಾರು 70% ಇಳಿಕೆಯಾಗಿದೆ.
ಈ ವರ್ಷ ಹೆಚ್ಚುವರಿ ಕಡಿಮೆಯಾಗಲು ಹಲವು ಅಂಶಗಳು ಕಾರಣವಾಗಿವೆ. ಆರ್‌ಬಿಐಗೆ ಪ್ರಮುಖ ವೆಚ್ಚವೆಂದರೆ ಲಿಕ್ವಿಡಿಟಿ ಹೊಂದಾಣಿಕೆ ಸೌಲಭ್ಯದ ಅಡಿಯಲ್ಲಿ ಬ್ಯಾಂಕ್‌ಗಳು ನಿಲುಗಡೆ ಮಾಡಿದ ಹಣಕ್ಕೆ ಪಾವತಿಸುವ ಬಡ್ಡಿ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಇತ್ಯಾದಿಗಳು ಕಾರಣವಾಗಿದೆ ಎಂದು ತಿಳಿಸಿದೆ. ಬಡ್ಡಿದರಗಳ ಏರಿಕೆಯಿಂದಾಗಿ ಸಾಲ ಭದ್ರತೆಗಳ ಮೌಲ್ಯವು ಕುಸಿದಿರುವುದರಿಂದ ಆರ್‌ಬಿಐಗೆ ಹಲವು ಸಂಕಷ್ಟವಾಗಿತ್ತು. ಮಾರುಕಟ್ಟೆಯಲ್ಲಿನ ಅಸ್ಥಿರತೆ ತಡೆಯಲು ಇದು 40 ಶತಕೋಟಿಗಿಂತ ಹೆಚ್ಚಿನ ಮೀಸಲು ಹಣವನ್ನು ಖರ್ಚು ಮಾಡಬೇಕಾಗಿತ್ತು ಹಾಗೂ ಮೀಸಲು ಹಣವನ್ನು ಮರುಪೂರಣಗೊಳಿಸಲು ಹೆಚ್ಚಿನ ಹಣವನ್ನು ಮೀಸಲಿಡಬೇಕಾಗುತ್ತದೆ. ಇದೆಲ್ಲವೂ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ.