#EmergencyAlertSystem | ನಿಮ್ಮ ಮೊಬೈಲ್‌ಗೂ ಈ ಎಚ್ಚರಿಕೆ ಸಂದೇಶ ಬಂದಿದೆಯಾ? | ಏನಿದು ತುರ್ತು ಎಚ್ಚರಿಕೆ..? |

October 10, 2023
10:35 PM
ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್  ಮೂಲಕ ತುರ್ತು ಎಚ್ಚರಿಕೆಯ ಸಂದೇಶ ರವಾನಿಸುವ ವ್ಯವಸ್ಥೆಯೊಂದರ ಟೆಸ್ಟಿಂಗ್‌ ನಡೆಯುತ್ತಿದೆ.

ನಿಮ್ಮ ಮೊಬೈಲ್‌ಗೆ ಒಂದು ಎಚ್ಚರಿಕೆಗೆ ಮೆಸೇಜ್‌ ಬಂದಿದೆಯೇ..? ಸರ್ಕಾರದಿಂದ ಬಂದಿರುವ ಈ ಎಮರ್ಜೆನ್ಸಿ ಎಲರ್ಟ್‌ ಮೆಸೇಜ್‌ನಿಂದ ಅನೇಕರು ಆತಂಕ ಪಟ್ಟಿದ್ದರು. ಆದರೆ ಅಂತಹ ಯಾವ ಆತಂಕದ ಅಗತ್ಯವಿಲ್ಲ, ಭಾರತದಲ್ಲಿನ ಅನೇಕ ಮೊಬೈಲ್‌ ಬಳಕೆದಾರರಿಗೆ ಸರ್ಕಾರದಿಂದ ಎಮರ್ಜೆನ್ಸಿ ಆಲರ್ಟ್‌ ಸಂದೇಶವನ್ನು ಕಳುಹಿಸಲಾಗಿದೆ.ಇದು ತುರ್ತು ಸಂದೇಶದ ಪ್ರಾಯೋಗಿಕ ಪರೀಕ್ಷೆ ನಡೆಸಲಾದ ವ್ಯವಸ್ಥೆಯಾಗಿದೆ.

Advertisement

ಇಂದು ಮಧ್ಯಾಹ್ನದ ಸುಮಾರಿಗೆ ಇಂಗ್ಲಿಷ್‌ನಲ್ಲಿ ಹಾಗೂ ಸಂಜೆಯ ವೇಳೆ ಕನ್ನಡ ಭಾಷೆಯಲ್ಲಿ ಎಮರ್ಜೆನ್ಸಿ ಟೋನ್‌ನೊಂದಿಗೆ ಅನೇಕರಿಗೆ ಈ ತುರ್ತು ಫ್ಲಾಶ್ ಸಂದೇಶ ಬಂದಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಸಂದೇಶವನ್ನು ಕಳುಹಿಸಿದೆ. ಈ ಎಚ್ಚರಿಕೆಯು ದೇಶದ ಹೊಸ ಎಮರ್ಜೆನ್ಸಿ ಆಲರ್ಟ್‌ ಸಿಸ್ಟಂನ ಟೆಸ್ಟಿಂಗ್‌ ಪ್ರಕ್ರಿಯೆ ಆಗಿದೆ ಎಂದು ಹೇಳಲಾಗಿದೆ.

ವಿಪತ್ತುಗಳ ಸಮಯದಲ್ಲಿ ತುರ್ತು ಸಂವಹನವನ್ನು ಹೆಚ್ಚಿಸುವ ಅವರ ಪ್ರಯತ್ನಗಳ ಭಾಗವಾಗಿ ಹಲವಾರು ಮೊಬೈಲ್ ಬಳಕೆದಾರರು  ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ  ಕಳುಹಿಸಿದ “ತುರ್ತು ಎಚ್ಚರಿಕೆ” ಯನ್ನು ಸ್ವೀಕರಿಸಿದ್ದಾರೆ. ಈ ಉಪಕ್ರಮವನ್ನು ಸರ್ಕಾರವು ಜುಲೈನಲ್ಲಿ ಪ್ರಾರಂಭಿಸಿತು ಮತ್ತು ಇದೇ ರೀತಿಯ ಪರೀಕ್ಷಾ ಪ್ರಸಾರವನ್ನು ಕಳೆದ ತಿಂಗಳು ಸೆಪ್ಟೆಂಬರ್ 15 ರಂದು ನಡೆಸಲಾಯಿತು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಈ ಎಚ್ಚರಿಕೆಯು ತುರ್ತು ಸಮಯದಲ್ಲಿ ಎಚ್ಚರಿಕೆ ವ್ಯವಸ್ಥೆ ಪರಿಣಾಮಕಾಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಮತ್ತು ಇದರಲ್ಲಿರುವ ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ನಡೆಸಿದ ಪರೀಕ್ಷೆಯ ಭಾಗವಾಗಿದೆ. ‌

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್  ಮೂಲಕ ಕಳುಹಿಸಲಾದ  ಪರೀಕ್ಷಾ ಸಂದೇಶವಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ . ಇದರಿಂದ ಆಗಾಗ ಸಿಸ್ಟಮ್ ಸರಿಯಿದೆಯೋ ಇಲ್ಲವೋ ಅನ್ನೊದನ್ನ ಪರೀಕ್ಷಿಸುವುದು ಅನಿವಾರ್ಯವಿದೆ. ಒಂದು ವೇಳೆ ಸಂದೇಶ ತಲುಪದ ಪ್ರದೇಶಗಳು ಕಂಡು ಬಂದರೆ ಅಂತಹ ಪ್ರದೇಶಗಳನ್ನು ಗುರುತಿಸಲು ಇಲಾಖೆಗೆ ಸಹಾಯವಾಗಲಿದೆ.ಈ ವ್ಯವಸ್ಥೆ ದುರಂತದ ಸಮಯದಲ್ಲಿ ಮೊಬೈಲ್ ಫೋನ್ ಸ್ಕ್ರೀನ್‌ಗಳಿಗೆ ಡೈರೆಕ್ಟ್‌ ಫ್ಲ್ಯಾಶ್‌ ಮೆಸೇಜ್‌ಗಳನ್ನು ಕಳುಹಿಸುವುದಕ್ಕೆ ಇದನ್ನು ಬಳಸುತ್ತಿದೆ.

ಇಂತಹ ಸಂದೇಶಗಳು ಏಕೆ?: ದೂರಸಂಪರ್ಕ ಇಲಾಖೆ , ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ “ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್” ಅನುಷ್ಠಾನವನ್ನು ಘೋಷಿಸಿದೆ. ಈ ವ್ಯವಸ್ಥೆಯು ಸುನಾಮಿಗಳು, ಹಠಾತ್ ಪ್ರವಾಹಗಳು, ಭೂಕಂಪಗಳು, ಭೂಕುಸಿತಗಳು,ತೀವ್ರ ಹವಾಮಾನ ಎಚ್ಚರಿಕೆಗಳು, ಸಾರ್ವಜನಿಕ ಸುರಕ್ಷತಾ ಸಂದೇಶಗಳು, ಸ್ಥಳಾಂತರಿಸುವ ಸೂಚನೆಗಳು , ವಿಪತ್ತು ಸನ್ನಿವೇಶಗಳ ಸಮಯದಲ್ಲಿ ನಾಗರಿಕರಿಗೆ  ಎಚ್ಚರಿಕೆಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಈ ಪ್ರಯತ್ನವನ್ನು ಪ್ರಾರಂಭಿಸಿದೆ.

ಈ ವರ್ಷ ಜುಲೈನಲ್ಲಿ ದೂರಸಂಪರ್ಕ ಸಂವಹನ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯು, ಭಾರತದ ನಾಗರಿಕರು ಮತ್ತು ಸಮುದಾಯಗಳ ಸುರಕ್ಷತೆಗೆ ನಮ್ಮ ನಿರಂತರ ಬದ್ಧತೆಯಲ್ಲಿ, ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿವಿಧ ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಈ ಪರೀಕ್ಷೆಗಳನ್ನು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ನಡೆಸಲಾಗುತ್ತದೆ ಎಂದು ಹೇಳಿತ್ತು.

ಈಗ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group