MIRROR FOCUS

ದಾಖಲೆ ಪ್ರಮಾಣದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಆವಕ | ಒಂದೇ ದಿನ ಬರೋಬ್ಬರಿ 4 ಲಕ್ಷ ಮೆಣಸಿನಕಾಯಿ ಚೀಲ ಮಾರುಕಟ್ಟೆಗೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಳೆದ ಬಾರಿ ಕೆಂಪು ಮೆಣಸಿನಕಾಯಿ ಬೆಲೆಯ(Red Chilly Price) ಘಾಟು ಗ್ರಾಹಕರಿಗೆ(Customer) ಬಾರಿ ಹೊಡೆದಿತ್ತು. 500ರಿಂದ 600 ರವರೆಗೆ ಕೆಜಿ ಬ್ಯಾಡಗಿ ಮೆಣಸಿನ ಬೆಲೆ ಏರಿತ್ತು. ಆದರೆ ಈ ಬಾರಿ ಹಾವೇರಿ(Haveri) ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ(Byadagi mirchi Market) ಈ ವಾರ ದಾಖಲೆ ಪ್ರಮಾಣದ ಮೆಣಸಿನಕಾಯಿ ಆವಕವಾಗಿದೆ. ಮಾರುಕಟ್ಟೆಗೆ ಒಂದೇ ದಿನ ಸುಮಾರು ನಾಲ್ಕು ಲಕ್ಷ ಚೀಲಗಳ ಆವಕವಾಗಿದ್ದು, ಮಾರುಕಟ್ಟೆಯಲ್ಲಿ ಜಾಗ ಸಾಲದೇ ಮೆಣಸಿನಕಾಯಿ ಚೀಲಗಳನ್ನು ಇಳಿಸಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ. ಆವಕ ಜಾಸ್ತಿಯಾದ ಹಿನ್ನೆಲೆ ಬೆಲೆಯಲ್ಲಿ ಕೊಂಚ ಇಳಿಕೆ ಕಾಣಬಹುದೇನೋ ಅನ್ನುವ ನಿರೀಕ್ಷೆ ಗ್ರಾಹಕರದ್ದು.

Advertisement

ಸುಮಾರು 3 ಲಕ್ಷ ಮೂವತ್ತು ಸಾವಿರ ಚೀಲಗಳನ್ನು ಮಾರುಕಟ್ಟೆಯಲ್ಲಿ ಇಳಿಸಿಕೊಂಡರೆ, ಉಳಿದ 60 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಇಳಿಸಿಕೊಳ್ಳಲಾಯಿತು. ಎರಡು ದಿನಗಳ ಕಾಲ ರೈತರ ಮೆಣಸಿನಕಾಯಿಗೆ ಲಾಟ್​ ನಿರ್ಮಿಸಿ ದರ ನಿಗದಿ ಮಾಡಲಾಗಿತ್ತು.

ಮಾರುಕಟ್ಟೆ ವರ್ತಕರು ಮಾತನಾಡುತ್ತಾ, ‘ಇಷ್ಟು ಪ್ರಮಾಣದ ಆವಕವನ್ನು ಮಾರುಕಟ್ಟೆ ಆರಂಭವಾದಾಗಿನಿಂದ ನೋಡಿರಲಿಲ್ಲಾ. ಕಳೆದ ವರ್ಷ ಏಪ್ರಿಲ್​ನಲ್ಲಿ 3 ಲಕ್ಷ 26 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿತ್ತು. ಆದರೆ ಈ ವರ್ಷ 3 ಲಕ್ಷ 36 ಸಾವಿರ ಚೀಲಗಳನ್ನು ಮಾರುಕಟ್ಟೆಯಲ್ಲಿ ಮತ್ತು ಉಳಿದ 60 ಸಾವಿರಕ್ಕೂ ಅಧಿಕ ಚೀಲಗಳನ್ನು ಕ್ರೀಡಾಂಗಣದಲ್ಲಿ ಇಳಿಸಿಕೊಂಡಿದ್ದೇವೆ. ಈ ರೀತಿ ನಾಲ್ಕು ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆರಂಭವಾದಾಗಿನಿಂದ ಇಷ್ಟು ನೋಡಿರಲಿಲ್ಲಾ. ಇದೊಂದು ದಾಖಲೆ’. ಇನ್ನು ‘ಮೆಣಸಿನಕಾಯಿ ಈ ರೀತಿ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲು ಕಾರಣ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿರುವುದು. ಅಲ್ಲದೆ ಮೆಣಸಿನಕಾಯಿ ಇಳುವರಿಯಲ್ಲಿ ಏರಿಕೆಯಾಗಿರುವುದು ಈ ರೀತಿಯ ಆವಕ ಏರಿಕೆಗೆ ಕಾರಣ’ ಎಂದು ಹೇಳಿದ್ದಾರೆ.

ಇನ್ನು ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿ ಮಾರುಕಟ್ಟೆಗಿಂತ ಇಲ್ಲಿ ಅಧಿಕ ದರ ಸಿಗುವ ಕಾರಣ ಸುಮಾರು 600, 700 ಕೀಲೋಮೀಟರ್​ ದೂರದಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ರೈತರು ತಮ್ಮ ಉತ್ಪನ್ನ ತಂದು ಮಾರಾಟ ಮಾಡುತ್ತಾರೆ. ಮತ್ತೊಂದು ಪ್ರಮುಖ ಕಾರಣ ಎಂದರೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಪಾರದರ್ಶಕತೆ ಮತ್ತು ಇ ಟೆಂಡರ್ ವ್ಯವಸ್ಥೆ. ಇಲ್ಲಿಯ ವರ್ತಕರು ಯಾವುದೇ ಕಾರಣಕ್ಕೂ ರೈತರಿಗೆ ಮೋಸವಾಗಲು ಬಿಡುವುದಿಲ್ಲಾ. ಅಲ್ಲದೆ ಯಾವುದೇ ರೀತಿಯ ವಂಚನೆಯನ್ನು ಇಲ್ಲಿ ವರ್ತಕರು ಸಹಿಸುವುದಿಲ್ಲಾ. ಈ ನಂಬಿಕೆಯಿಂದ ಈ ಮಾರುಕಟ್ಟೆಗೆ ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಮಾರಾಟ ಮಾಡಲು ರೈತರು ಬರುತ್ತಿದ್ದಾರೆ ಎಂದು ವರ್ತಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಈ ವರ್ಷ ಅಧಿಕ ಮಳೆಯಾಗದ ಕಾರಣ ಮೆಣಸಿನಕಾಯಿ ಬೆಳೆಗೆ ಫಂಗಸ್ ಸೇರಿದಂತೆ ಯಾವುದೇ ರೋಗಗಳು ಬಂದಿಲ್ಲಾ. ಅಲ್ಲದೆ ತುಂಗಭದ್ರಾ ಜಲಾಯಶ ಹಾಗೂ ಆಲಮಟ್ಟಿ ಡ್ಯಾಂ ನೀರು ಮೆಣಸಿನಕಾಯಿ ಬೆಳೆಯುವ ರೈತರಿಗೆ ಹೆಚ್ಚು ಉಪಯೋಗವಾಗಿದ್ದು ಇದರಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಯಾವುದೇ ಬರಗಾಲದ ಬಿಸಿ ತಟ್ಟಲಿಲ್ಲಾ ಎಂದು ವರ್ತಕ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.

ಉತ್ತರಕರ್ನಾಟಕದ ಪ್ರಮುಖ ಜಿಲ್ಲೆಗಳು ಮತ್ತು ಬಾದಾಮಿ ಬಾಗಲಕೋಟೆ ಮೆಣಸಿನಕಾಯಿ ಬೆಳೆಯು ಅಧಿಕವಾಗಿದ್ದರಿಂದ ಮಾರುಕಟ್ಟೆಗೆ ದಾಖಲೆ ಪ್ರಮಾಣದ ಮೆಣಸಿನಕಾಯಿ ಆವಕವಾಗಿದೆ. ಈ ವರ್ಷ ಮಳೆ ಇನ್ನು ಸ್ವಲ್ಪ ಬಂದಿದ್ದರೆ ಐದು ಲಕ್ಷ ಚೀಲದವರೆಗೆ ಹೋಗುತ್ತಿತ್ತು. ಮೆಣಸಿನಕಾಯಿ ಬೆಳೆಯಲ್ಲಿನ ಹೊಸ ಹೊಸ ತಳಿಗಳು ಪರಿಚಯವಾಗಿದ್ದು ಅಧಿಕ ಪ್ರಮಾಣದಲ್ಲಿ ಇಳುವರಿ ಬಿಡಲಾರಂಭಿಸಿದ್ದು, ಇದು ಸಹ ಮಾರುಕಟ್ಟೆಗೆ ಅಧಿಕ ಪ್ರಮಾಣದ ಆವಕಕ್ಕೆ ಕಾರಣ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರತಿವರ್ಷ ಎರಡು ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಪ್ರಮಾಣದ ವಹಿವಾಟು ನಡೆಸುತ್ತಿದೆ. ಆದರೆ ಈ ವರ್ಷ ಮಾರುಕಟ್ಟೆಯ ವಹಿವಾಟು ಎರಡು ಸಾವಿರ 500 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.

– ಅಂತರ್ಜಾಲ ಮಾಹಿತಿ

Byadagi mirchi market of Haveri district has received a record amount of chillies this week. Around four lakh bags are available in the market in a single day, and there is a situation where the market cannot unload the bags of chilli without running out of space. Consumers are expecting a slight decrease in the price against the background of increased demand.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಗವದ್ಗೀತೆ ಬಿಡಿ, ಬೇರೆ ಏನಾದ್ರೂ ಸ್ತೋತ್ರ ಬರ್ತದಾ..?

ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…

10 hours ago

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…

12 hours ago

ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |

ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…

12 hours ago

ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

23 hours ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

23 hours ago