Advertisement
MIRROR FOCUS

ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ…! | ಪ್ರವಾಹಕ್ಕೆ UAE ತತ್ತರ |

Share

ದುಬೈಯಂತಹ ಮರುಭೂಮಿ(Desert) ನಾಡಿನಲ್ಲಿ ಮಳೆ(Rain) ಅನ್ನೋದೇ ಅಪರೂಪ. ಎತ್ತ ನೋಡಿದರು ಮರಳುಗಾಡು. ಅದು ಬಿಟ್ಟರೆ ಸಮುದ್ರ(Ocean). ಮರಗಳೇ(Tree) ಇಲ್ಲದ ನಾಡಲ್ಲಿ ಮಳೆ ಅನ್ನೋದು ವಿರಳ. ಆದರೆ ಈಗ ದುಬೈಯಲ್ಲಿ (Dubai Rain) ಎತ್ತ ನೋಡಿದರೂ ಜಲರಾಶಿ. ಐಷಾರಾಮಿ ನಗರ ದುಬೈನಲ್ಲಿರುವ ಮಾಲ್, ವಿಮಾನ ನಿಲ್ದಾಣಗಳು (Airport) ಸಂಪೂರ್ಣ ಜಲಾವೃತವಾಗಿದೆ. ಭಾರೀ ಗುಡುಗು ಸಹಿತ ಅಬ್ಬರಿಸಿದ ಮಳೆರಾಯನ(Heavy Rain) ಪ್ರತಾಪಕ್ಕೆ UAE ಯ ಕೆಲವು ಭಾಗಗಳಲ್ಲಿ ಪ್ರವಾಹ (Flood) ಸೃಷ್ಟಿಯಾಗಿದೆ. ಪ್ರಮುಖ ರಸ್ತೆಮಾರ್ಗಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಮಾರ್ಗಗಳು ಸಂಪೂರ್ಣ ಜಲಮಯವಾಗಿದೆ. ಸುದ್ದಿ ಸಂಸ್ಥೆಗಳ ವರದಿ ಪ್ರಕಾರ, ಮಂಗಳವಾರ ಯುಎಇಗೆ ಅಪ್ಪಳಿಸಿದ ಚಂಡಮಾರುತಗಳು ದುಬೈನಲ್ಲಿ ಒಂದೂವರೆ ವರ್ಷಗಳ ನಂತರ ಭಾರೀ ಮಳೆಯಾಗಿದೆ. ದುಬೈ ನಗರಕ್ಕಿಂತ ಯುಎಇಯ ಪೂರ್ವ ಕರಾವಳಿಯಲ್ಲಿರುವ ಎಮಿರೇಟ್ ಫುಜೈರಾದಲ್ಲಿ ಹೆಚ್ಚು ಮಳೆಯಾಗಿದೆ. ಮಂಗಳವಾರ 145 ಮಿಲಿಮೀಟರ್‌ಗಳಷ್ಟು (5.7 ಇಂಚುಗಳು) ಮಳೆ ಬಿದ್ದಿದೆ.

Advertisement
Advertisement
Advertisement
Advertisement

75 ವರ್ಷಗಳಲ್ಲೇ ಹೆಚ್ಚು ಮಳೆ: ಪ್ರವಾಹದ ಆರ್ಭಟಕ್ಕೆ ಉತ್ತರದ ಎಮಿರೇಟ್ ರಾಸ್ ಅಲ್-ಖೈಮಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಪ್ರವಾಹದ ನೀರಲ್ಲಿ ವಾಹನ ಸಿಲುಕಿ 70 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಶಾಪಿಂಗ್ ಕೇಂದ್ರಗಳಲ್ಲಿ ಒಂದಾದ ಮಾಲ್ ಆಫ್ ಎಮಿರೇಟ್ಸ್‌ನಲ್ಲಿ ಪ್ರವಾಹ ನೀರು ತುಂಬಿಕೊಂಡಿದೆ. ಮಾಲ್ ನಲ್ಲಿರುವ ಶಾಪ್ ಗಳ ಸೀಲಿಂಗ್ ನಲ್ಲಿ ನಿರಂತರ ಮಳೆಯಿಂದ ನೀರು ಹರಿದಿದೆ. 75 ವರ್ಷಗಳ ನಂತರ ಹೆಚ್ಚು ಮಳೆಯಾಗಿದೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Advertisement

ಶಾರ್ಜಾ ಸಿಟಿ ಜಲಾವೃತ: ನಿರಂತರ ಮಳೆಯಿಂದಾಗಿ ಶಾರ್ಜಾ ಸಿಟಿ ಸೆಂಟರ್ ಮತ್ತು ದೇರಾ ಸಿಟಿ ಸೆಂಟರ್ ಕೂಡ ಸಂಪೂರ್ಣ ಜಲಾವೃತವಾಗಿದ್ದು, ಜನರು ಪ್ರವಾಹದ ನೀರಲ್ಲಿ ಸಿಲುಕಿದ್ದಾರೆ. ವಿಮಾನ ನಿಲ್ದಾಣಗಳಲ್ಲೂ ನೀರು ನಿಂತಿದ್ದು, ವಿಮಾನಗಳ ಹಾರಾಟದಲ್ಲೂ ತೊಂದರೆಯಾಗಿದೆ. ಟ್ಯಾಕ್ಸಿ ವೇನಲ್ಲೂ ಅತಿ ಹೆಚ್ಚು ನೀರು ತುಂಬಿಕೊಂಡು ಪ್ರವಾಹದ ಮೂಲಕ ಟರ್ಮಿನಲ್‌ಗಳನ್ನು ತಲುಪಲು ಪ್ರಯಾಣಿಕರು ಹೆಣಗಾಡಿದ್ದಾರೆ. ಕೆಲವು ರಸ್ತೆಗಳು ಪ್ರವಾಹ ನೀರಿನಿಂದ ಕಣ್ಮರೆಯಾಗಿದ್ದು, ವಾಹನ ಸವಾರರು ತಮ್ಮ ವಾಹನಗಳನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಧಿಕಾರಿಗಳು ನೀರನ್ನು ಪಂಪ್ ಮಾಡಲು ರಸ್ತೆಗಳು ಮತ್ತು ಹೆದ್ದಾರಿಗಳಿಗೆ ಟ್ಯಾಂಕರ್ ಲಾರಿಗಳನ್ನು ಕಳುಹಿಸಿದ್ದಾರೆ. ಕೆಲ ಮನೆಗಳಿಗೂ ನೀರು ನುಗ್ಗಿದೆ.

24 ಗಂಟೆಗಳ ಅವಧಿಯಲ್ಲಿ 142 ಮಿಲಿಮೀಟರ್‌ ಮಳೆ: ದುಬೈನಲ್ಲಿ 24 ಗಂಟೆಗಳ ಅವಧಿಯಲ್ಲಿ 142 ಮಿಲಿಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಹಿತಿಯ ಪ್ರಕಾರ ಎಮಿರೇಟ್ ಸರಾಸರಿ ವರ್ಷದಲ್ಲಿ 94.7 ಮಿಲಿಮೀಟರ್ ಮಳೆಯಾಗಿದೆ. ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುದಿಯಲ್ಲಿ ಮಿಂಚಿನ ಸ್ಪರ್ಶ ತಾಗಿದೆ. UAEನಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆಯಾಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಕೊಂಚ ಮಳೆಯಾಗುತ್ತಿತ್ತು. ಮಳೆ ಸರಿಯಾಗದ ಕಾರಣ ಅಲ್ಲಿನ ಒಳಚರಂಡಿ ವ್ಯವಸ್ಥೆಗಳು ಸಹ ಸರಿಯಾಗಿಲ್ಲ. ಈಗ ಸಂಭವಿಸಿರುವ ದಿಢೀರ್ ಪ್ರವಾಹದಿಂದ ಮನೆ, ರಸ್ತೆಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲಾ ಕಡೆ ಮಳೆ ನೀರು ತುಂಬಿದೆ. ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲೂ ಮಳೆಯಾಗಿದೆ.

Advertisement
18 ಮಂದಿ ಸಾವು : ವಿಮಾನಗಳ ಮಾಹಿತಿ ನೀಡುವ ಫ್ಲೈಟ್ ರಾಡರ್ 24 ವೆಬ್ ಸೈಟ್ ವರದಿ ಪ್ರಕಾರ, ದುಬೈ ವಿಮಾನನಿಲ್ದಾಣದಲ್ಲಿ 5 ಅಂಶಗಳಿಂದ ಹಾರಾಟಗಳಲ್ಲಿ ಏರುಪೇರಾಗಿದೆ ಎಂದು ಮಂಗಳವಾರ ತಿಳಿಸಿದೆ. ಹವಾಮಾನದಲ್ಲಿನ ವಿಪರೀತ ಬದಲಾವಣೆಯಿಂದ ವಿಮಾನಗಳಲ್ಲಿ ವಿಳಂಬ, ಹಾರಾಟ ರದ್ದು ಪರಿಸ್ಥಿತಿಗಳು ಎದುರಾಗಿತ್ತು. ನ್ಯಾಷನಲ್ ಕಮಿಟಿ ಫಾರ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ತಿಳಿಸಿರುವಂತೆ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸುಮಾರು 18 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 10 ಶಾಲಾ ಮಕ್ಕಳೇ ಇದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ವಾಹನ ನೀರಲ್ಲಿ ಕೊಚ್ಚಿ ಹೋದ ಕಾರಣ ಅದರಲ್ಲಿದ್ದ 10 ಮಕ್ಕಳು ಸಾವನ್ನಪ್ಪಿರುವುದಾಗಿ ತಿಳಿಸಿದೆ.
– ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

5 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago