ಅಂಗಳದಲ್ಲೇ ಇರುವ ಪಾರಿಜಾತ ಗಿಡದಲ್ಲಿ, ಪಕ್ಕದಲೇ ಇರುವ ಮಾವಿನ ಮರದಲ್ಲಿ, ಮಾತ್ರವಲ್ಲ ಮನೆಯ ಮಾಡಿಗೆ ತೂಗು ಹಾಕಿರುವ ಹ್ಯಾಂಗಿಂಗ್ ನಿಂದ ಪುರ್ ನೆ ಹಾರಿ ಹೋಗುವ ಹಕ್ಕಿ ಇದೇ. ನಿತ್ಯವೂ ನೋಡುತ್ತಿದ್ದರೂ ಹೆಸರೇನೆಂದು ಗೊತ್ತಿರುವುದಿಲ್ಲ.ಕೆಮ್ಮೀಸೆ ಪಿಕಳಾರ (Red whisked bulbul).
ಪುಟ್ಟನೆಯ ಕೊಕ್ಕು, ಕಣ್ಣಿನ ಪಕ್ಕದಲ್ಲಿ ಕೆಂಪು , ಬಿಳಿಯ ಬಣ್ಣ, ಮೇಲೆ ಕಪ್ಪು ಮಿಶ್ರಿತ ಕಂದು ಬಣ್ಣ, ಹೊಟ್ಟೆಯ ಭಾಗ ಬಿಳಿ. ತಲೆಯ ಮೇಲೊಂದು ಕಿರೀಟದಂತಹ ಪುಟ್ಟ ರಚನೆ.
ಈ ಹಕ್ಕಿಗಳು ಮನೆಗಳ ಸುತ್ತಮುತ್ತ, ಉದ್ಯಾನಗಳಲ್ಲಿ, ಹಳ್ಳಿ ಪೇಟೆಗಳೆನ್ನದೆ ಎಲ್ಲೆಡೆಯೂ ಕಂಡು ಬರುತ್ತವೆ. ಸಣ್ಣ ಪುಟ್ಟ ಗಿಡಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಗುಂಪಾಗಿ ಇರಲು ಇಷ್ಟಪಡುತ್ತವೆ. 3 ರಿಂದ 5 ರ ಸಂಖ್ಯೆಯಲ್ಲಿರುತ್ತವೆ. ಕೆಲವೊಮ್ಮೆ ಇವುಗಳ ಸಂಖ್ಯೆ 50 ಮೀರುವುದೂ ಇದೆ. ಸದಾ ಶಬ್ದಮಾಡುತ್ತಲೇ ಇರುತ್ತವೆ.
ಆಹಾರ: ಹಣ್ಣು ಹಂಪಲುಗಳು, ಕೀಟ, ಹೂವಿನ ಮಕರಂದಗಳು. ಫೆಬ್ರವರಿಯಿಂದ ಮೇ ಇವುಗಳ ಸಂತಾನಾಭಿವೃದ್ಧಿಯ ಸಮಯ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel