Advertisement
ಸುದ್ದಿಗಳು

ಜನನ-ಮರಣ 21 ದಿನಗಳೊಳಗೆ  ನೋಂದಣಿ ಕಡ್ಡಾಯ – ದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ

Share

ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/ ಗ್ರಾಮ ಪಂಚಾಯತ್ ನೋಂದಣಾಧಿಕಾರಿಗಳ ಮೂಲಕ ನೋಂದಣಿ ಮಾಡಿಸಬೇಕು   ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಸೂಚಿಸಿದ್ದಾರೆ.

ದಕ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಮಂಗಳವಾರ ನಡೆದ ಜನನ-ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ  ಬೇರೆ ಜಿಲ್ಲೆಯ ವ್ಯಕ್ತಿಯು ಅಪಘಾತ ಅಥವಾ ಇನ್ನಿತರ ಅಪರಾಧ  ಕೃತ್ಯಗಳ ಮೂಲಕ  ಸಾವನ್ನಪ್ಪಿದ್ದರೆ    ಮರಣ ನೋಂದಣಿಯನ್ನು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿಖರ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ನೀಡಬೇಕು ಎಂದು   ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಗ್ರಾಮಾಂತರ  ಮತ್ತು ನಗರ ಪ್ರದೇಶದಲ್ಲಿ  678 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಜನನ ಮತ್ತು ಮರಣ ನೋಂದಣಿಯನ್ನು ಯಾವುದೇ ಕಾರಣಕ್ಕೂ  ವಿಳಂಬವಾಗಿ ಮಾಡಬಾರದು. ಜನನ ಮತ್ತು ಮರಣ  ಘಟನೆಗಳು ನಡೆದ 21 ದಿನದ  ನಂತರ  ನೋಂದಾಯಿಸಿದರೆ ಅದನ್ನು ತಡನೋಂದಣಿ ಎಂದು ಪರಿಗಣಿಸಿ,   ವಿಳಂಬ ಶುಲ್ಕ ರೂ. 20  ನ್ನು ಪಡೆಯಲಾಗುತ್ತದೆ.  ತಡ ನೋಂದಣಿಯನ್ನು ಕಡಿಮೆಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು. ತಾಲೂಕು ಮಟ್ಟದಲ್ಲಿ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯನ್ನು ನಡೆಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅವರು  ಸೂಚಿಸಿದರು.  ಜನನ ಮತ್ತು ಮರಣದ ದಾಖಲೆಗಳನ್ನು ಹಾಳಾಗದಂತೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು   ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ಅವರು ಸೂಚಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ  ಎ. ಆರ್ ಶ್ರೀಧರ್ ಮಾತನಾಡಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಎಲ್ಲಾ ಜನನ ಮತ್ತು ಮರಣ ಘಟನೆಗಳನ್ನು  ನೊಂದಣಾಧಿಕಾರಿಗಳಿಗೆ ವರದಿ ಮಾಡಬೇಕು. ನೋಂದಣಾಧಿಕಾರಿಗಳು  ಅಥವಾ ಉಪ ನೋಂದಣಾಧಿಕಾರಿಗಳು  ವರದಿ ಮಾಡಿದ ಘಟನೆಗಳನ್ನು ನೋಂದಣಿ ಮಾಡಿ ಪ್ರಕ್ರಿಯೆ ಮುಗಿದ ನಂತರ ಮಾಹಿತಿದಾರರಿಗೆ ಜನನ ಪ್ರಮಾಣ ಪತ್ರವನ್ನು ಒದಗಿಸಬೇಕು. ಗ್ರಾಮ ಒನ್ ಕಚೇರಿಯಲ್ಲಿ ಸಾರ್ವಜನಿಕರು ಜನನ ಮರಣ ನೋಂದಣಿಗೆ  ಅರ್ಜಿ ಸಲ್ಲಿಸಬಹುದು  ಎಂದು ಹೇಳಿದರು.   ಇ-ಜನ್ಮ ತಂತ್ರಾಂಶದಲ್ಲಿ ಜನನ ಮರಣ ಘಟನೆಗಳನ್ನು ನೋಂದಾಯಿಸುವಾಗ  ಆಧಾರ್ ಸಂಖ್ಯೆಯನ್ನು ಅಥವಾ  ಇತರೆ ದಾಖಲೆಗಳನ್ನು ಅಪ್ಡೇಟ್‌  ಮಾಡಬೇಕು. ಮರಣ  ಘಟನೆಗಳ  ಸಂದರ್ಭದಲ್ಲಿ ಮೃತರ ಆಧಾರ್ ನಂಬರ್ ಬದಲು ಅರ್ಜಿದಾರರ ಆಧಾರ್ ನಂಬರ್ ನಮೂದಿಸಿದರೆ,  ಸರಕಾರದಿಂದ ಸವಲತ್ತುಗಳು ಸಿಗುವುದಿಲ್ಲ ಎಂದು  ಹೇಳಿದರು.  ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ  ಹಾಗೂ ಶೇಖಡ 100 ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರಿಶೀಲನೆಯನ್ನು ತಾಂತ್ರಿಕ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ  ಎಂದು    ಅವರು ಸಭೆಗೆ ಮಾಹಿತಿ ನೀಡಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

1 day ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

2 days ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

2 days ago

ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!

ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಅಂಗಡಿ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.…

2 days ago

2026ರಲ್ಲಿ ಮಳೆ ಕಡಿಮೆ…? ಎಲ್‌ನಿನೊ ಪರಿಣಾಮದಿಂದ ಭಾರತಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆ…!

2026ರಲ್ಲಿ ಭಾರತದಲ್ಲಿ ಮಳೆಗಾಲ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಮುನ್ಸೂಚನೆ…

3 days ago

ಭಾರತದ ಬಂದರುಗಳು ಚೇತರಿಕೆ..! 915 ಮಿಲಿಯನ್ ಟನ್ ಸರಕು ಸಾಗಣೆ – ಶೇ.7 ಹೆಚ್ಚಳ ದಾಖಲೆ

ದೇಶದ ಪ್ರಮುಖ ಬಂದರುಗಳು 915 ಮಿಲಿಯನ್ ಟನ್ ಸರಕು ಸಾಗಣೆ ಮಾಡಿ ಶೇ.7…

3 days ago