ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ ತಿಳಿಸಿದ್ದಾರೆ.
ಭತ್ತ ಕ್ವಿಂಟಾಲ್‌ಗೆ 2300, ರಾಗಿ ಕ್ವಿಂಟಾಲ್‌ಗೆ 4290 ರೂಪಾಯಿ, ಬಿಳಿ ಜೋಳ ಮಾಲ್ದಂಡಿ ಕ್ವಿಂಟಾಲ್‌ಗೆ 3421 ರೂಪಾಯಿ, ಬಿಳಿಜೋಳ ಹೈಬ್ರೀಡ್ ಕ್ವಿಂಟಾಲ್‌ಗೆ 3371 ರೂಪಾಯಿಯಂತೆ ಖರೀದಿಸಲು ನಿಗದಿಪಡಿಸಲಾಗಿದೆ. ಬಳ್ಳಾರಿಯ ಎಪಿಎಂಸಿ, ಮೋಕಾ, ಕುರುಗೋಡು, ಕಂಪ್ಲಿ, ಸಿರುಗುಪ್ಪ, ಕರೂರು ಮತ್ತು ಹಚ್ಚೋಳ್ಳಿ ಸೇರಿದಂತೆ ಒಟ್ಟು ೮ ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ವಿಶೇಷ ಕಾರ್ಯಪಡೆ ಸಮಿತಿ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟ ಏಜೆನ್ಸಿಯವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel