ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, ಆಗಸ್ಟ್ 19 ರವರೆಗೆ ನಡೆಯಲಿದ್ದು, ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.ಯಾತ್ರಿಕರು ಅಮರನಾಥ ದೇವಾಲಯ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ, ಆನ್‌ಲೈನ್‌ನಲ್ಲಿ ಅಥವಾ ದೇಶಾದ್ಯಂತ ಗೊತ್ತುಪಡಿಸಿದ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ವೈಯಕ್ತಿಕವಾಗಿ ನೋಂದಾಯಿಸುವಾಗ, ಮೂಲ ದಾಖಲೆಗಳು ಮತ್ತು ಕಡ್ಡಾಯವಾಗಿ ಆರೋಗ್ಯ ಪ್ರಮಾಣಪತ್ರವನ್ನು ಕೊಂಡೊಯ್ಯಬೇಕು. ಅಧಿಕೃತವಾಗಿ ವೈದ್ಯರು ಅಥವಾ ಸಂಸ್ಥೆಗಳು ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರವಿಲ್ಲದೆ, ಯಾರಿಗೂ ಯಾತ್ರೆಗೆ ತೆರಳಲು ಅವಕಾಶವಿರುವುದಿಲ್ಲ. ಈ ಪ್ರಮಾಣಪತ್ರ, ನೀವು ಎತ್ತರದ ಚಾರಣವನ್ನು ತಡೆದುಕೊಳ್ಳಲು ದೈಹಿಕವಾಗಿ ಸದೃಢರಾಗಿದ್ದೀರಿ ಎಂಬುವುದನ್ನು ಖಚಿತಪಡಿಸುತ್ತದೆ. ಸಮುದ್ರಮಟ್ಟದಿಂದ 12,756 ಅಡಿ ಎತ್ತರದ ಗುಹೆಯಲ್ಲಿ, ನೈಸರ್ಗಿಕವಾಗಿ ರಚನೆಯಾಗುವ ಹಿಮಲಿಂಗ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel