ಈಚೆಗಿನ ವರ್ಷದಲ್ಲಿ ನಮ್ಮ ಆರೋಗ್ಯ ತಪಾಸಣೆ ಪ್ರತೀ ವರ್ಷ ಕಡ್ಡಾಯ ಎನ್ನುವ ಹಂತಕ್ಕೆ ತಲುಪಿದೆ. ಹಿಂದೆಲ್ಲಾ ಈ ಸ್ಥಿತಿ ಇರಲಿಲ್ಲ. ಈಗಿನ ಈ ಪರಿಸ್ಥಿಗೆ ಕಾರಣ ನಮ್ಮ ಆಹಾರದಲ್ಲಿ ಆಗುವ ಬದಲಾವಣೆ . ಒಂದೊಂದು ಸಲ ನಿಯಮಿತ ಆರೋಗ್ಯ ತಪಾಸಣೆಯಿಂದಲೂ ಕೆಲವೊಂದು ದೀರ್ಷಕಾಲದ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು.
ಪ್ರತಿ ವರ್ಷ ಆರೋಗ್ಯ ತಪಾಸಣೆಗಳು ಮಾಡಿಕೊಳ್ಳುವುದು ಈಗ ಉತ್ತಮ. ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚು. ರಕ್ತಪರೀಕ್ಷೆಗಳನ್ನು ಮಾಡುವುದು, ಲಿಪಿಡ್ ಪ್ರೊಪೈಲ್ ಸೇರಿದಂತೆ ಕೆಲವೊಂದು ಸಣ್ಣ ಅಂಶಗಳು ಕೂಡಾ ಈಗ ಮುಖ್ಯವಾಗುತ್ತದೆ. ಇಂತಹ ಸಣ್ಣ ಪರೀಕ್ಷೆಗಳು ನಮ್ಮ ಜೀವನಕ್ಕೆ ಪ್ರಯೋಜನಗಳು ಆಗುತ್ತದೆ. ಆದರಲ್ಲೂ ಮಹಿಳೆಯರಿಗೆ ಮುಟ್ಟಿನ ತೊಂದರೆ, ಗರ್ಭಾಶಯ ತೊಂದರೆ, ಸ್ತನ ಸಮಸ್ತೆ ಹೀಗೆ ಹಲವಾರು ತೊಂದರೆಗಳು ಇರುವುದು ಗೊತ್ತೆ ಆಗುವುದಿಲ್ಲ.
ವರ್ಷಕ್ಕೊಮ್ಮೆ ಪರೀಕ್ಷಿಸುವುದರಿಂದ ದೇಹದಲ್ಲಿ ಸಕ್ಕೆರೆ ಮಟ್ಟಗಳು ಹೆಚ್ಚಿವೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ಹೆಚ್ಚಿದ್ದಲ್ಲಿ ಅವುಗಳ ಸುಲಭ ಪರಿಹಾರವನ್ನು ಕಂಡುಹಿಡಿಯಬಹುದು. ಅದೇ ರೀತಿ ಸಿ-ರಿಯಾಕ್ಟವ್ ಪ್ರೋಟೀನ್ ಕ್ಯಾನ್ಸರ್ ಆರಂಭಿಕ ಚಿಹ್ನೆಗಳನ್ನು ಕೂಡಾ ಒದಗಿಸುತ್ತದೆ. ಮೂತ್ರಪಿಂಡಗಳು ಮತ್ತು ಯಕೃತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ವರ್ಷಕ್ಕೊಮ್ಮೆ ಸಣ್ಣ ಪ್ರಮಾಣದಲ್ಲಿ ನಮ್ಮ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಬಹುದು, ಸಮಸ್ಯೆಗಳು ಇದ್ದರೆ ಪರಿಹರಿಸಿಕೊಳ್ಳಬಹುದು. ಈಗಿನ ಆಹಾರ ಪದ್ಧತಿಯೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಆಹಾರ ಪದ್ಧತಿಯಲ್ಲಿನ ಬದಲಾವಣೆ ಈಗ ಕಷ್ಟ ಸಾಧ್ಯವಾಗಿದೆ.




