ಏಕೆ ಇಷ್ಟೂ ಅಡಿಕೆ ಆಮದಾಗುತ್ತಿದೆ…?

June 18, 2024
7:47 PM
ಪದೇ ಪದೇ ಅಡಿಕೆ ಆಮದು ಪ್ರಕರಣ ಪತ್ತೆಯಾಗುತ್ತಿದೆ. ವಿದೇಶದಿಂದ ತಪ್ಪು ಮಾಹಿತಿ ನೀಡಿ ಆಮದು ಸುಂಕ ತಪ್ಪಿಸಿ ಅಡಿಕೆ ತರುವ ಪ್ರಯತ್ನ ನಡೆಯುತ್ತಿದೆ. ಈಗ ಅಡಿಕೆ ಆಮದು ನಿಯಂತ್ರಣವೇ ಸವಾಲಾಗಿದೆ.

ಆಗಾಗ ಅಡಿಕೆ ಆಮದು ಪ್ರಕರಣಗಳು ಪತ್ತೆಯಾಗುತ್ತಿದೆ. ಭಾರತಕ್ಕೆ ಏಕೆ ಇಷ್ಟೂ ಅಡಿಕೆ ಆಮದಾಗುತ್ತಿದೆ..? ಇಲಾಖೆಗಳು ಆಗಾಗ ಪತ್ತೆ ಮಾಡಿದರೂ, ಇನ್ನೂ ಏಕೆ ಅಡಿಕೆ ಆಮದಾಗುತ್ತಲೇ ಇದೆ..?. ಈ ನಡುವೆಯೂ ಅನಧಿಕೃತವಾಗಿ ಅಡಿಕೆ ಸಾಗಾಟದ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದೆಲ್ಲಾ ಪ್ರಕರಣಗಳು ಆ ಬಳಿಕ ಏನಾಗುತ್ತಿದೆ..? 

Advertisement

ಈಚೆಗೆ “ಪೈನಾನ್ಸಿಯಲ್‌ ಎಕ್ಸ್‌ಪ್ರೆಸ್‌ ” ವರದಿಯನ್ನು ಮಾಡಿದೆ. ಮುಂಬೈ ಬಂದರಿನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು  5.7 ಕೋಟಿ ರೂಪಾಯಿ ಮೌಲ್ಯದ  112.14 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದ್ದರು.  ಸುಮಾರು 6.27 ಕೋಟಿ ಆಮದು ತೆರಿಗೆಯನ್ನು ತಪ್ಪಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಪ್ರತೀ ಬಾರಿ ಕೂಡಾ ಅಡಿಕೆಯ ಬದಲಾಗಿ ತಪ್ಪು ಮಾಹಿತಿ ನೀಡಿ ಅಡಿಕೆಯನ್ನು ಸಾಗಾಟ ಮಾಡಲಾಗುತ್ತದೆ. ಈ ಬಾರಿಯೂ ಅದೇ ಮಾದರಿಯಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮಾಡಲಾಗಿದೆ. ಮಾಹಿತಿ ಪ್ರಕಾರ ಇದುವರೆಗೆ ದೇಶದಲ್ಲಿ 416 ಅಕ್ರಮ ಅಡಿಕೆ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ, 6760.8 ಮೆಟ್ರಿಕ್ ಟನ್‌ಗಳಷ್ಟು ಅಡಿಕೆ ವಶಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಸಾಕಷ್ಟು ಪ್ರಮಾಣದ ಅಡಿಕೆ ಬೆಳೆಯುತ್ತಿದ್ದರೂ ಅಕ್ರಮವಾಗಿ ಪದೇ ಪದೇ ಅಡಿಕೆ ಸಾಗಾಟ ಏಕೆ ಮಾಡಲಾಗುತ್ತಿದೆ..? ಯಾರು ಮಾಡುತ್ತಿದ್ದಾರೆ..? ಅಷ್ಟೊಂದು ಧೈರ್ಯವಾಗಿ ಅಡಿಕೆ ಆಮಾದು ಮಾಡುವವರು ಯಾರು..? ಇವರ ಹಿಂದೆ ಇರುವವರು ಯಾರು..? ಈ ಎಲ್ಲಾ ಪ್ರಶ್ನೆಗಳು ಸಹಜವಾಗಿಯೇ ಈಗ ಉದ್ಭವಿಸಿದೆ.

ಭಾರತದಲ್ಲಿ ಅಡಿಕೆ ಬಳೆಕೆ ಹೆಚ್ಚಾಗಿದೆ‌, ಅದೇ ರೀತಿ ಅಡಿಕೆ ಬಳಕೆಯೂ ಹೆಚ್ಚಿದೆ. ಗುಟ್ಕಾ ಉತ್ಪಾದನೆ ಹಾಗೂ ಬಳಕೆ ಎರಡೂ ಕೂಡಾ ಇಲ್ಲಿ ಪ್ರಮುಖ ಉದ್ಯಮ. ಗುಟ್ಕಾಕ್ಕೆ ಕಡಿಮೆ ದರ್ಜೆಯ ಅಡಿಕೆ ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಈಗ ಕಂಡುಬಂದಿದೆ. ಹೀಗಾಗಿ ವಿದೇಶದ ಕಳಪೆ ಗುಣಮಟ್ಟದ ಅಡಿಕೆಯನ್ನು ಕಳ್ಳಸಾಗಾಣಿಕೆಯ ಮೂಲಕ ತಂದು ಗುಟ್ಕಾ ಉದ್ಯಮ ಸಹಿತ ಇತರ ಅಡಿಕೆಯ ಜೊತೆ ಮಿಶ್ರಣ ಮಾಡಲಾಗುತ್ತಿದೆ ಎನ್ನುವುದು ಮೇಲ್ನೋಟದ ಅಧ್ಯಯನ.

ಕಳೆದ ಹಲವಾರು ಸಮಯಗಳಿಂದ ತಪ್ಪು ಮಾಹಿತಿ ನೀಡಿ ಗುಜರಾತ್‌ ಬಂದರು ಸೇರಿದಂತೆ ಮುಂಬಯಿ ಬಂದರಿಗೆ ಅಡಿಕೆ ಆಮದಾಗುತ್ತಿದೆ. ಅಡಿಕೆ ಅಕ್ರಮವಾಗಿ ಆಮದಾಗುತ್ತಿರುವುದನ್ನು ಪತ್ತೆ ಮಾಡಿ ಕ್ರಮ ಕೈಗೊಂಡ ಬಳಿಕವೂ ಪದೇ ಪದೇ ಅಡಿಕೆ ಆಮದಾಗುತ್ತಿರುವುದರ ಬಗ್ಗೆ ಕಠಿಣ ಕ್ರಮ ಹಾಗೂ ತನಿಖೆಯಾಗಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸುತ್ತಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group