ಆಗಾಗ ಅಡಿಕೆ ಆಮದು ಪ್ರಕರಣಗಳು ಪತ್ತೆಯಾಗುತ್ತಿದೆ. ಭಾರತಕ್ಕೆ ಏಕೆ ಇಷ್ಟೂ ಅಡಿಕೆ ಆಮದಾಗುತ್ತಿದೆ..? ಇಲಾಖೆಗಳು ಆಗಾಗ ಪತ್ತೆ ಮಾಡಿದರೂ, ಇನ್ನೂ ಏಕೆ ಅಡಿಕೆ ಆಮದಾಗುತ್ತಲೇ ಇದೆ..?. ಈ ನಡುವೆಯೂ ಅನಧಿಕೃತವಾಗಿ ಅಡಿಕೆ ಸಾಗಾಟದ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದೆಲ್ಲಾ ಪ್ರಕರಣಗಳು ಆ ಬಳಿಕ ಏನಾಗುತ್ತಿದೆ..?
ಈಚೆಗೆ “ಪೈನಾನ್ಸಿಯಲ್ ಎಕ್ಸ್‌ಪ್ರೆಸ್ ” ವರದಿಯನ್ನು ಮಾಡಿದೆ. ಮುಂಬೈ ಬಂದರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು 5.7 ಕೋಟಿ ರೂಪಾಯಿ ಮೌಲ್ಯದ 112.14 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದ್ದರು. ಸುಮಾರು 6.27 ಕೋಟಿ ಆಮದು ತೆರಿಗೆಯನ್ನು ತಪ್ಪಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಪ್ರತೀ ಬಾರಿ ಕೂಡಾ ಅಡಿಕೆಯ ಬದಲಾಗಿ ತಪ್ಪು ಮಾಹಿತಿ ನೀಡಿ ಅಡಿಕೆಯನ್ನು ಸಾಗಾಟ ಮಾಡಲಾಗುತ್ತದೆ. ಈ ಬಾರಿಯೂ ಅದೇ ಮಾದರಿಯಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮಾಡಲಾಗಿದೆ. ಮಾಹಿತಿ ಪ್ರಕಾರ ಇದುವರೆಗೆ ದೇಶದಲ್ಲಿ 416 ಅಕ್ರಮ ಅಡಿಕೆ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ, 6760.8 ಮೆಟ್ರಿಕ್ ಟನ್‌ಗಳಷ್ಟು ಅಡಿಕೆ ವಶಪಡಿಸಿಕೊಳ್ಳಲಾಗಿದೆ.
ಭಾರತದಲ್ಲಿ ಸಾಕಷ್ಟು ಪ್ರಮಾಣದ ಅಡಿಕೆ ಬೆಳೆಯುತ್ತಿದ್ದರೂ ಅಕ್ರಮವಾಗಿ ಪದೇ ಪದೇ ಅಡಿಕೆ ಸಾಗಾಟ ಏಕೆ ಮಾಡಲಾಗುತ್ತಿದೆ..? ಯಾರು ಮಾಡುತ್ತಿದ್ದಾರೆ..? ಅಷ್ಟೊಂದು ಧೈರ್ಯವಾಗಿ ಅಡಿಕೆ ಆಮಾದು ಮಾಡುವವರು ಯಾರು..? ಇವರ ಹಿಂದೆ ಇರುವವರು ಯಾರು..? ಈ ಎಲ್ಲಾ ಪ್ರಶ್ನೆಗಳು ಸಹಜವಾಗಿಯೇ ಈಗ ಉದ್ಭವಿಸಿದೆ.
ಭಾರತದಲ್ಲಿ ಅಡಿಕೆ ಬಳೆಕೆ ಹೆಚ್ಚಾಗಿದೆ, ಅದೇ ರೀತಿ ಅಡಿಕೆ ಬಳಕೆಯೂ ಹೆಚ್ಚಿದೆ. ಗುಟ್ಕಾ ಉತ್ಪಾದನೆ ಹಾಗೂ ಬಳಕೆ ಎರಡೂ ಕೂಡಾ ಇಲ್ಲಿ ಪ್ರಮುಖ ಉದ್ಯಮ. ಗುಟ್ಕಾಕ್ಕೆ ಕಡಿಮೆ ದರ್ಜೆಯ ಅಡಿಕೆ ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಈಗ ಕಂಡುಬಂದಿದೆ. ಹೀಗಾಗಿ ವಿದೇಶದ ಕಳಪೆ ಗುಣಮಟ್ಟದ ಅಡಿಕೆಯನ್ನು ಕಳ್ಳಸಾಗಾಣಿಕೆಯ ಮೂಲಕ ತಂದು ಗುಟ್ಕಾ ಉದ್ಯಮ ಸಹಿತ ಇತರ ಅಡಿಕೆಯ ಜೊತೆ ಮಿಶ್ರಣ ಮಾಡಲಾಗುತ್ತಿದೆ ಎನ್ನುವುದು ಮೇಲ್ನೋಟದ ಅಧ್ಯಯನ.
ಕಳೆದ ಹಲವಾರು ಸಮಯಗಳಿಂದ ತಪ್ಪು ಮಾಹಿತಿ ನೀಡಿ ಗುಜರಾತ್ ಬಂದರು ಸೇರಿದಂತೆ ಮುಂಬಯಿ ಬಂದರಿಗೆ ಅಡಿಕೆ ಆಮದಾಗುತ್ತಿದೆ. ಅಡಿಕೆ ಅಕ್ರಮವಾಗಿ ಆಮದಾಗುತ್ತಿರುವುದನ್ನು ಪತ್ತೆ ಮಾಡಿ ಕ್ರಮ ಕೈಗೊಂಡ ಬಳಿಕವೂ ಪದೇ ಪದೇ ಅಡಿಕೆ ಆಮದಾಗುತ್ತಿರುವುದರ ಬಗ್ಗೆ ಕಠಿಣ ಕ್ರಮ ಹಾಗೂ ತನಿಖೆಯಾಗಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸುತ್ತಾರೆ.
ದೇಶದ ಜಿಡಿಪಿಯಲ್ಲಿ ಗಮನಾರ್ಹ ರೀತಿಯ ಬೆಳವಣಿಗೆಯಾಗುತ್ತಿದ್ದು, ಬೇರೆ ದೇಶದವರು ಭಾರತದಲ್ಲಿ ಹೂಡಿಕೆ ಮಾಡಲು…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಗಸ್ಟ್ 20, 21ರಂದು ಮಹಾರಾಷ್ಟ್ರ ಮೂಲಕ ಸಾಗಿ ಗುಜರಾತ್…
ನ್ಯಾನೊ ಯೂರಿಯಾ ಬಳಕೆಯಿಂದ ಶೇಕಡಾ 80 ರಷ್ಟು ಇಳುವರಿ ಸಾಧ್ಯವಾಗಲಿದೆ ಎಂದು ದಾವಣಗೆರೆ…
ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ತಕ್ಷಣವೇ ಶಾಲಾ ಶಿಕ್ಷಣ ಇಲಾಖೆಗೆ 17 ಸಾವಿರ ಶಿಕ್ಷಕರ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಎರಡು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ…
18.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…