ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ನಾ.ಮೊಗಸಾಲೆ ಅವರ ‘ವಿಶ್ವಂಭರ’ ಚೈತನ್ಯ ಮಹಾಪ್ರಭುಗಳ ಜೀವಾನಾಧರಿತ ಕಾದಂಬರಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಬಳಿಕ ರಾಜ್ಯಪಾಲರು, ಚೈತನ್ಯ ಮಹಾಪ್ರಭುಗಳು ಭಕ್ತಿ ಚಳುವಳಿಯ ಮಹಾನ್ ಸಂತ , ಸಮಾಜ ಸುಧಾರಕ ಮತ್ತು ಕೃಷ್ಣ ಭಕ್ತ , ಈ ಯುಗದಲ್ಲಿ ಪ್ರೀತಿ ಮತ್ತು ಭಕ್ತಿಯ ಮೂಲಕ ಸಮಾಜಕ್ಕೆ ಧೈವಿಕ , ಆದ್ಯಾತ್ಮಿಕತೆಯ ಮಾರ್ಗವನ್ನು ತೋರಿಸಿದವರು. ಚೈತನ್ಯ ಮಹಾಪ್ರಭು ಅವರ ಬೋಧನೆಗಳು ಆಧ್ಯಾತ್ಮಿಕ ಸಮಾನತೆ , ಸಹೋದರತ್ವ ಮತ್ತು ಸ್ವಾತಂತ್ರದ ತತ್ವಗಳನ್ನು ಆಧರಿಸಿವೆ ಎಂದು ಅವರು ಹೇಳಿದರು. ಚೈತನ್ಯ ಮಹಾಪ್ರಭು ಅವರ ಮುಖ್ಯ ಸಂದೇಶವೆಂದರೆ ಹರಿನಾಮ ಸಂಕೀರ್ತನೆ ಇದರ ಅರ್ಥ ಸಾಮೂಹಿಕ ಪಠಣ ಮತ್ತು ದೇವರ ಹೆಸರಿನ ಕೀರ್ತನೆ. ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಶ್ರೀ ಕೃಷ್ಣನ ಪವಿತ್ರ ನಾಮವನ್ನು ಜಪಿಸಬೇಕು ಎಂದು ಬಯಸಿದ್ದರು. 12 ವರ್ಷಗಳ ಅವಧಿಯಲ್ಲಿ 6 ಖಂಡಗಳಲ್ಲಿ 100ಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳನ್ನು ಸ್ಧಾಪಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಪಾಶ್ಟಿಮಾತ್ಯ ದೇಶಗಳಲ್ಲೂ ಹರಡುವ ಕೆಲಸ ಮಾಡಿದ್ದಾರೆ. ಆಧುನಿಕ ಯುಗದಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠ ರಾಯಾಭಾರಿಯಾಗಿದ್ದಾರೆ ಎಂದು ತಿಳಿಸಿದರು. ಚೈತನ್ಯ ಪ್ರಭುಗಳ ಜೀವನ ಕುರಿತು ಕನ್ನಡದಲ್ಲಿ ಬರೆದ ಬರಹಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ. ಮೊಗಸಾಲೆ ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು .ಈ ಕೃತಿ ಭಾರತೀಯ, ಕನ್ನಡ ಸಾಹಿತ್ಯದ ಪ್ರಮುಖ ಪುಸ್ತಕವಾಗಲಿದೆ .ಜತೆಗೆ ಸ್ಪೂರ್ತಿಯ ಮೂಲ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ವೇಳೆ ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ನಟ ಪ್ರಕಾಶ್ ಬೆಳವಾಡಿ, ಮೈಸೂರು ಇಸ್ಕಾನ್ ಅಧ್ಯಕ್ಷ ಸ್ತೋಕ ಕೃಷ್ಣ ಸ್ವಾಮಿ, ಬೆಂಗಳೂರು ಇಸ್ಕಾನ್ ಅಧ್ಯಕ್ಷ ಚಂಚಲ ಪತಿದಾಸ್, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಸೇರಿದಂತೆ ಮತ್ತಿರರು ಉಪಸ್ಧಿತರಿದ್ದರು.