ಸುಳ್ಯದಲ್ಲಿ ನಾಮಾಮಿ ಕ್ರಿಯಾಶೀಲತೆ | ಮನೆಯಂಗಳಕ್ಕೆ ಬಂತು “ಕಾಡು ಕಿತ್ತಳೆ ” | ಸುಳ್ಯದಲ್ಲಿ ನಡೆಯಿತು ಲೋಕಾರ್ಪಣೆ ಕಾರ್ಯಕ್ರಮ |

December 3, 2023
4:55 PM

ಅಳಿಯುವ ಅಂಚಿನಲ್ಲಿರುವ ಕಾಡಿನ ಕಿತ್ತಳೆಯೊಂದು ನಾಡಿಗೆ ಬಂದಿದೆ. ಇಂತಹದ್ದೊಂದು ಕಿತ್ತಳೆ ಕಾಡಿನಲ್ಲಿ ಇತ್ತು, ಅಳಿದು ಹೋಗುತ್ತಿರುವ ಬಗ್ಗೆ ಚರ್ಚೆ ನಡೆದು ಸುಳ್ಯದ ನಾಮಾಮಿ ಬಳಗವು ತಕ್ಷಣವೇ ಜಾಗೃತಗೊಂಡಿತ್ತು. ಇದೀಗ ಅಳಿವಿನಂಚಿಗೆ ತಲಪಿದ್ದ ನಾಯಿಕಿತ್ತಳೆ ಅಥವಾ ಕಾಡುಕಿತ್ತಳೆ ನಾಡಿಗೆ ತಲಪಿದೆ. ಭಾನುವಾರ ಈ ಗಿಡಗಳ ಲೋಕಾರ್ಪಣಾ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು.ನಾಡಿಗೊಂದು ಮಾದರಿ ಕಾರ್ಯಕ್ರಮ ಹಾಗೂ  ಉತ್ತಮ ಸಂದೇಶ ಸುಳ್ಯದಿಂದ ನೀಡಲಾಯಿತು.

Advertisement
Advertisement
Advertisement

ಸುಳ್ಯದ ನಾಮಾಮಿ( ನಾಡ ಮಾವಿನ ಮಿತ್ರರು) ಬಳಗವು ನಾಡ ಮಾಡವು ರಕ್ಷಣೆಯತ್ತ, ಅಳಿವಿನಂಚಿಗೆ ತಲಪುತ್ತಿದ್ದ ವಿಶೇಷ ತಳಿಗಳ ರಕ್ಷಣೆ ಮಾಡುತ್ತಿತ್ತು. ಇದಕ್ಕಾಗಿ ಕಸಿ ತರಬೇತಿ ಕಾರ್ಯಕ್ರಮ ನಡೆಸಿ ಪ್ರತೀ ಕೃಷಿಕನೂ ಕಸಿ ಕಟ್ಟುವ ತರಬೇತಿ ಪಡೆದು ಅಳಿವಿನಂಚಿನಲ್ಲಿರುವ ಗಿಡಗಳ ರಕ್ಷಣೆಗೆ ಇಳಿಯಬೇಕು ಎಂದು ಪ್ರೇರೇಪಣೆ ನೀಡಿತ್ತು. ಈ ತಂಡದಲ್ಲಿ  ಜಯರಾಮ ಮುಂಡೋಳಿಮೂಲೆ, ಶ್ರೀಶಕುಮಾರ್‌ , ಶ್ಯಾಮ ಭಟ್‌ ಗೊರಗೋಡಿ, ಜಗದೀಶ್‌ ಕೆ ಪಿ , ಜಗದೀಶ ಪರಮಲೆ ಸಹಿತ ಇನ್ನೂ ಕೆಲವರು ಇದ್ದರು.

Advertisement
ನಾಯಿಕಿತ್ತಳೆ ಹಣ್ಣು

ಕಸಿ ಕಟ್ಟುವ ತರಬೇತಿಯನ್ನು ಈ ತಂಡವು ಹಲವರಿಗೆ ನೀಡಿತ್ತು. ಮೂರು ಬಾರಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಚರ್ಚೆಗೆ ಬಂದದ್ದು ನಾಯಿಕಿತ್ತಳೆ ಅಥವಾ ಕಾಡುಕಿತ್ತಳೆ. ತಕ್ಷಣವೇ ಇದೊಂದು ಚರ್ಚೆಗೆ ಬಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಸಹಿತ ಹಲವರು ಇದಕ್ಕೆ ಬೆನ್ನೆಲುಬಾಗಿ ನಿಂತು ಇದಕ್ಕೊಂದು ಅಭಿಯಾನದ ರೂಪ ನೀಡಿದರು. ಅನೇಕ ಕಡೆ ಕಾಡು ಕಿತ್ತಳೆ, ನಾಯಿ ಕಿತ್ತಳೆ  ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆಯಿಸಿಕೊಳ್ಳುತ್ತಿದೆ, ಆದರೆ ವಿನಾಶದಂಚಿನಲ್ಲಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಕಸಿ ಕಟ್ಟುವ ಮೂಲಕ ಈ ಕಿತ್ತಳೆಯ ರಕ್ಷಣೆಗೆ ಮುಂದಾದ ನಾಮಾಮಿ ಈಗ 300 ಕ್ಕೂ ಅಧಿಕ ನಾಯಿಕಿತ್ತಳೆ ಗಿಡಗಳನ್ನು ಲೋಕಾರ್ಪಣೆ ಮಾಡಿತು.

ಕಸಿಗಿಡಗಳ ಲೋಕಾರ್ಪಣೆ ಮಾಡಿದ ಪತ್ರಕರ್ತ ಶ್ರೀಪಡ್ರೆ

ಭಾನುವಾರ ಈ ಗಿಡಗಳ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ನಾಯಿಕಿತ್ತಳೆಯ ಕಸಿ ಗಿಡಗಳನ್ನು ಲೋಕಾರ್ಪಣೆ ಮಾಡಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಮಾತನಾಡಿ, ಕಿತ್ತಳೆಯಲ್ಲಿ ಹಲವು ವೈವಿಧ್ಯಗಳು ಇವೆ. ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಕೃಷಿಯಲ್ಲಿ ಬೆಳವಣಿಗೆ ಎಂದರೆ ಬಹುಬೆಳೆಗಳು ಅಗತ್ಯ ಇದೆ. ಅಡಿಕೆಯ ಜೊತೆಗೆ ಇಂತಹ ಹಣ್ಣಿನ ಗಿಡಗಳನ್ನೂ ಖುಷಿಗಾಗಿ ಬೆಳೆಸುವ ಹಾಗೂ ಅಳಿವಿನಂಚಿನಲ್ಲಿರುವ ಗಿಡಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು.

Advertisement
ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ  ಕೆ ಎಂ ರಮೇಶ್‌

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಹೊಸಪೇಟೆಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ  ಕೆ ಎಂ ರಮೇಶ್‌ ಮಾತನಾಡಿ, ಬೆಳೆ ಅಭಿವೃದ್ಧಿಗೆ ಹಾಗೂ ಬೆಳೆ ರಕ್ಷಣೆಗೆ ಪ್ರತಿಯೊಬ್ಬರೂ ಪ್ರಯತ್ನ ಮಾಡಿಬೇಕಿದೆ. ಜಗತ್ತಿನ ಅತೀ ದೊಡ್ಡ ವೈವಿಧ್ಯತೆಯ ತಳಿ ಕಿತ್ತಳೆಯಲ್ಲಿದೆ. ಹೀಗಾಗಿ ಇಂತಹ ವಿಶೇಷ ತಳಿಗಳ ರಕ್ಷಣೆ ಅಗತ್ಯ ಇದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ನಾಮಾಮಿ ತಂಡದ ಶ್ಯಾಮ ಭಟ್‌ ಗೊರಗೋಡಿ, ಕೃಷಿಯಲ್ಲಿ ಆಸಕ್ತಿಯ ಜೊತೆಗೆ ಹಣ್ಣುಗಳ ಬೆಳೆ, ತಳಿ ವೈವಿಧ್ಯತೆಯಲ್ಲಿನ ಆಸಕ್ತಿಯೇ ಈ ತಂಡ ಬೆಳವಣಿಗೆಗೆ ಕಾರಣವಾಯಿತು. ಈ ಕಾರಣದಿಂದ ಅಳಿವಿನಂಚಿನಲ್ಲಿರುವ ತಳಿಯೊಂದರ ರಕ್ಷಣೆಗೆ ನಾವೆಲ್ಲರೂ ಇಳಿಯಬೇಕಾಯಿತು ಎಂದರು.

Advertisement

ನಾಮಾಮಿ ತಂಡದ ಶ್ರೀಶಕುಮಾರ್‌ ಸ್ವಾಗತಿಸಿದರು. ಜಯರಾಮ ಮುಂಡೋಳಿಮೂಲೆ ಪ್ರಸ್ತಾವನೆಗೈದರು. ಜಗದೀಶ್‌ ಕೆ ಪಿ  ವಂದಿಸಿದರು. ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ಇದೇ ಕಾಡುಕಿತ್ತಳೆ ಗಿಡಗಳ ರಕ್ಷಣೆಗೆ ಸಹಕರಿಸಿದ ಹಲವು ಪ್ರಮುಖರನ್ನು ಗೌರವಿಸಲಾಯಿತು. ಇದೀಗ ಕಾಡುಕಿತ್ತಳೆ ಅಥವಾ ನಾಯಿ ಕಿತ್ತಳೆ  ಕಸಿಗಿಡಗಳನ್ನು ಆಸಕ್ತರಿಗೆ ನೀಡಲು ನಾಮಾಮಿ ತಂಡ ಸಿದ್ಧವಾಗಿದೆ.

ನಾಯಿಕಿತ್ತಳೆ ಕಸಿ ಗಿಡಗಳು

launch program of Grafted orange Plants, was held in Sullia. It was led by the Namami team Sullia. here protected the endangered Orange plant.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror