ತುಂಗಾಭದ್ರಾ ಗೇಟ್‌ ರಿಪೇರಿಗೆ ಇನ್ನು 5 ದಿನ ಬೇಕು | ಪ್ರಯತ್ನ ವಿಫಲವಾದರೆ ಎಲ್ಲಾ 60 ಟಿಎಂಸಿ ನೀರು ಖಾಲಿ – ಸರ್ಕಾರಕ್ಕೆ ಅಧಿಕಾರಿಗಳ ಮಾಹಿತಿ

August 12, 2024
10:49 AM

ಉತ್ತರ ಕರ್ನಾಟಕದ ಬಹು ರೈತರ ಜೀವನಾಡಿಯಾಗಿದ್ದ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿದೆ. ಇದನ್ನು ರಿಪೇರಿ ಮಾಡಬೇಕಾದರೆ ಡ್ಯಾಂನಲ್ಲಿ ಸಂಗ್ರಹವಾದ 25 ಟಿಎಂಸಿ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಇದೆ. ಈ ಬಾರಿ ಮುಂಗಾರು ಚೆನ್ನಾಗಿ ಆದ ಪರಿಣಾಮ ತುಂಗಭದ್ರಾ ಡ್ಯಾಂ ಭರ್ತಿಯಾಗಿತ್ತು. ಆದರೆ ದುರಾದೃಷ್ಟವಶಾತ್‌ ಈ ದುರಂತ ನಡೆದ ಹಿನ್ನೆಲೆ ರೈತರ ಬದುಕಿಗೆ ಪೆಟ್ಟು ಕೊಟ್ಟಂತಾಗಿದೆ. ಇದೀಗ ಘಟನೆಯನ್ನು ಪರಿಶಶೀಲಿಸಿದ ಅಧಿಖಾರಿಗಳು ಐದು ದಿನಗಳೊಳಗೆ ಗೇಟ್ ರಿಪೇರಿ ಮಾಡಿ ಕೊಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ಭಾನುವಾರ ಸಂಜೆ ಆಂಧ್ರಪ್ರದೇಶ ಹಾಗೂ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದೆ. ಎಲ್ಲಾ ಕ್ರಸ್ಟ್‌ ಗೇಟ್‌ (Crest Gate) ತೆರೆದ ಪರಿಣಾಮ ಸುತ್ತಮುತ್ತಲಿನ ಸೇತುವೆಗಳ ಪ್ರವೇಶ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಅಪಾರ ಪ್ರಮಾಣದ ನೀರು ಹೊರಗಡೆ ಹೋಗುವುದನ್ನು ಹಾಗೂ ವೀಕ್ಷಣೆ ಮಾಡಲು ನರು ಕಿರು ಸೇತುವೆ ಸೇರಿದಂತೆ ಮುಖ್ಯ ಸೇತುವೆಗಳ ಮೇಲೆ ನಿಲ್ಲುತ್ತಿದ್ದರು. ಅಲ್ಲದೇ ನದಿಯ ಸೇತುವೆಯ ಮೇಲೆ ಸಹ ಜನರು ಹುಚ್ಚಾಟ ಮೆರೆಯುತ್ತಿದ್ದರು. ನಿನ್ನೆ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಅವರ ಸೂಚನೆಯಂತೆ ವಿಜಯನಗರ ಡಿಸಿ ಎಂಎಸ್ ದಿವಾಕರ್ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. 

ಸರ್ಕಾರದ ಮುಂದಿರುವ ಆಯ್ಕೆಗಳೇನು? : ಐದು ದಿನಗಳಲ್ಲಿ ಗೇಟ್ ರಿಪೇರಿ ಮಾಡುವುದಕ್ಕೆ ಸರ್ಕಾರ ಪ್ಲಾನ್‌ ಮಾಡಿಕೊಂಡಿದೆ. ಆರಂಭದಲ್ಲಿ 25 ಟಿಎಂಸಿ ನೀರು ಬಿಟ್ಟು, ಗೇಟ್ ಕೂಡಿಸಲು ಪ್ರಯತ್ನ ಮಾಡವುದು. ಈ ಪ್ರಯತ್ನ ವಿಫಲವಾದರೆ 40 ಟಿಎಂಸಿ ನೀರು ಹೊರಕ್ಕೆ ಬಿಡುವುದು. ಈ ಪ್ರಯತ್ನವೂ ಆಗದೇ ಇದ್ದರೆ ಅಂತಿಮವಾಗಿ 60 ಟಿಎಂಸಿ ನೀರು ಖಾಲಿ ಮಾಡಲಾಗುತ್ತದೆ. 60 ಟಿಎಂಸಿ ನೀರು ಖಾಲಿ ಮಾಡಿದರೆ ಗೇಟ್‌ ಅನ್ನು ಸುಲಭವಾಗಿ ಹಾಕಬಹುದು. ಈಗಾಗಲೇ ತಜ್ಞರ ಮೂಲಕ ಸಭೆ ನಡೆಸಿ, ಚರ್ಚೆ ನಡೆಸಿರುವ ಅಧಿಕಾರಿಗಳು ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವು ಹೆಚ್ಚಿಸಲು ತೀರ್ಮಾನ ಮಾಡಲಾಗುತ್ತಿದೆ. ಎಂಥಹದ್ದೇ ಪರಿಸ್ಥಿತಿ ಎದುರಾದರೂ ಐದು ದಿನಗಳಲ್ಲಿ ಗೇಟ್ ರಿಪೇರಿ ಮುಗಿಸಿ, ಜನರಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಶತ ಪ್ರಯತ್ನ ಮಾಡಲಾಗುತ್ತಿದೆ.

– ಅಂತರ್ಜಾಲ ಮಾಹಿತಿ

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror