ಉತ್ತರ ಕರ್ನಾಟಕದ ಬಹು ರೈತರ ಜೀವನಾಡಿಯಾಗಿದ್ದ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿದೆ. ಇದನ್ನು ರಿಪೇರಿ ಮಾಡಬೇಕಾದರೆ ಡ್ಯಾಂನಲ್ಲಿ ಸಂಗ್ರಹವಾದ 25 ಟಿಎಂಸಿ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಇದೆ. ಈ ಬಾರಿ ಮುಂಗಾರು ಚೆನ್ನಾಗಿ ಆದ ಪರಿಣಾಮ ತುಂಗಭದ್ರಾ ಡ್ಯಾಂ ಭರ್ತಿಯಾಗಿತ್ತು. ಆದರೆ ದುರಾದೃಷ್ಟವಶಾತ್ ಈ ದುರಂತ ನಡೆದ ಹಿನ್ನೆಲೆ ರೈತರ ಬದುಕಿಗೆ ಪೆಟ್ಟು ಕೊಟ್ಟಂತಾಗಿದೆ. ಇದೀಗ ಘಟನೆಯನ್ನು ಪರಿಶಶೀಲಿಸಿದ ಅಧಿಖಾರಿಗಳು ಐದು ದಿನಗಳೊಳಗೆ ಗೇಟ್ ರಿಪೇರಿ ಮಾಡಿ ಕೊಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ಭಾನುವಾರ ಸಂಜೆ ಆಂಧ್ರಪ್ರದೇಶ ಹಾಗೂ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದೆ. ಎಲ್ಲಾ ಕ್ರಸ್ಟ್ ಗೇಟ್ (Crest Gate) ತೆರೆದ ಪರಿಣಾಮ ಸುತ್ತಮುತ್ತಲಿನ ಸೇತುವೆಗಳ ಪ್ರವೇಶ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಸರ್ಕಾರದ ಮುಂದಿರುವ ಆಯ್ಕೆಗಳೇನು? : ಐದು ದಿನಗಳಲ್ಲಿ ಗೇಟ್ ರಿಪೇರಿ ಮಾಡುವುದಕ್ಕೆ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಆರಂಭದಲ್ಲಿ 25 ಟಿಎಂಸಿ ನೀರು ಬಿಟ್ಟು, ಗೇಟ್ ಕೂಡಿಸಲು ಪ್ರಯತ್ನ ಮಾಡವುದು. ಈ ಪ್ರಯತ್ನ ವಿಫಲವಾದರೆ 40 ಟಿಎಂಸಿ ನೀರು ಹೊರಕ್ಕೆ ಬಿಡುವುದು. ಈ ಪ್ರಯತ್ನವೂ ಆಗದೇ ಇದ್ದರೆ ಅಂತಿಮವಾಗಿ 60 ಟಿಎಂಸಿ ನೀರು ಖಾಲಿ ಮಾಡಲಾಗುತ್ತದೆ. 60 ಟಿಎಂಸಿ ನೀರು ಖಾಲಿ ಮಾಡಿದರೆ ಗೇಟ್ ಅನ್ನು ಸುಲಭವಾಗಿ ಹಾಕಬಹುದು. ಈಗಾಗಲೇ ತಜ್ಞರ ಮೂಲಕ ಸಭೆ ನಡೆಸಿ, ಚರ್ಚೆ ನಡೆಸಿರುವ ಅಧಿಕಾರಿಗಳು ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವು ಹೆಚ್ಚಿಸಲು ತೀರ್ಮಾನ ಮಾಡಲಾಗುತ್ತಿದೆ. ಎಂಥಹದ್ದೇ ಪರಿಸ್ಥಿತಿ ಎದುರಾದರೂ ಐದು ದಿನಗಳಲ್ಲಿ ಗೇಟ್ ರಿಪೇರಿ ಮುಗಿಸಿ, ಜನರಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಶತ ಪ್ರಯತ್ನ ಮಾಡಲಾಗುತ್ತಿದೆ.
– ಅಂತರ್ಜಾಲ ಮಾಹಿತಿ
ಅರಣ್ಯ ಹಕ್ಕು ಕಾಯಿದೆ -2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಅಭಾವದಿಂದ ಕಟ್ಟಡ ನಿರ್ಮಾಣ…
ಮಳೆಯ ಕಾರಣದಿಂದ ಅಡಿಕೆಗೆ ಬಾಧಿಸಿದ ಕೊಳೆರೋಗದ ತೀವ್ರತೆ ಹಾಗೂ ನಷ್ಟದ ಬಗ್ಗೆ ಅಖಿಲ…
ಅಡಿಕೆಗೆ ಕೊಳೆರೋಗ ವ್ಯಾಪಕವಾಗುತ್ತಿದೆ. ವಾರದ ಮೊದಲು ಕೆಲವು ಕಡೆ ಮಾತ್ರವೇ ಅಡಿಕೆಗೆ ಕೊಳೆರೋಗ…
ಅರಣ್ಯ ಅಥವಾ ಕಾಡು ಎಂದರೆ ದಟ್ಟವಾದ ಮರಗಳ ಸಮೂಹ ಮಾತ್ರವಲ್ಲ, ಅರಣ್ಯ ಎಂದರೆ…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇಲ್ ಸ್ತರ ಹಾಗೂ ಮಧ್ಯಮ…