ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಪ್ರಮುಖವಾಗಿ ರೆಪೋ ದರದ ಮೂಲಾಂಕದಲ್ಲಿ ಶೇಕಡ 0.25ರಷ್ಟು ಕಡಿತ ಮಾಡಿದೆ. ಇದರೊಂದಿಗೆ ರೆಪೋ ದರ ಶೇಕಡ 6.25ರಷ್ಟು ಇದ್ದದ್ದು ಶೇಕಡ 6ಕ್ಕೆ ಇಳಿಕೆಯಾಗಿದೆ. ಮುಂಬೈ ನಲ್ಲಿ ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಹಲವಾರು ಆರ್ಥಿಕ ನಿರ್ಧಾರಗಳನ್ನು ಪ್ರಕಟಿಸಿದ ಆರ್ ಬಿಐ ಗವರ್ನರ್ ಸಂಜಯ್ ಮಲೋತ್ರಾ , ರೆಪೋ ದರದಲ್ಲಿ ಕಡಿತವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಜೊತೆಗೆ ಬೆಳವಣಿಗೆ ದರ, ಹಣದುಬ್ಬರದ ಸ್ಥಿತಿ , ಭಾರತೀಯ ಆರ್ಥಿಕತೆಯ ಜಿಡಿಪಿ ಬೆಳವಣಿಗೆಯ ಬಗ್ಗೆ ವಿವರಿಸಿ , 2025-26ನೇ ಸಾಲಿನ ನೈಜ ಜಿಡಿಪಿ 6.5ರಷ್ಟಿರುವುದಾಗಿ ಅಂದಾಜಿಸಲಾಗಿದೆ. ಹೊಸ ಸುಂಕ ನೀತಿಯು ಆರ್ಥಿಕತೆಯ ಅನಿಶ್ಚಿತತೆಗೆ ಕಾರಣವಾಗಿದೆ ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel