ಕಳೆದ ಒಂದು ವಾರದಿಂದ ಕರಾವಳಿ-ಮಲೆನಾಡಲ್ಲಿ ಮಳೆಯಾಗುತ್ತಿದೆ. ಈಚೆಗೆ 3 ದಿನಗಳಿಂದ ಸುರಿದ ಭಾರೀ ಮಳೆಗೆ ಎಲ್ಲಾ ಘಾಟಿ ಪ್ರದೇಶದ ರಸ್ತೆಗಳಲ್ಲಿ ಕುಸಿತವಾಗುತ್ತಿದೆ. ಅದರಲ್ಲೂ ಬೆಂಗಳೂರು-ಮಂಗಳೂರು ಸಂಪರ್ಕದ ಹೆದ್ದಾರಿಗಳು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ತಕ್ಷಣವೇ ರೈಲ್ವೇ ವ್ಯವಸ್ಥೆ ಮಾಡುವಂತೆ ಮಂಗಳೂರು ಸಂಸದ ಬ್ರಿಜೇಶ್ ಚೌಟ ರೈಲ್ವೇ ಇಲಾಖೆಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ರೈಲ್ವೇ ಇಲಾಖೆಯು ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸಲು ವ್ಯವಸ್ಥೆ ಮಾಡಿದೆ. ರೈಲ್ವೇ ಸೇವೆ ಆರಂಭ ಹಾಗೂ ಓಡಾಟದ ಮಾಹಿತಿ ನೀಡುವುದಾಗಿ ತಿಳಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel