ಕಾಡಾನೆ ಹಾವಳಿ | ಕೃಷಿ ಹಾನಿಯಿಂದ ರೋಸಿ ಹೋದ ರೈತರು | ರೈತರಿಂದ ಹಕ್ಕೊತ್ತಾಯಕ್ಕೆ ಸಿದ್ಧತೆ |

October 25, 2023
7:59 PM
ಕಾಡಾನೆ ಹಾಗೂ ಕಾಡು ಪ್ರಾಣಿಗಳ ಉಪಟಳ ತಪ್ಪಿಸುವಂತೆ ಮತ್ತು ಖಾಯಾಂ ಪರಿಹಾರವನ್ನು ಕಲ್ಪಿಸುವಂತೆ ಒತ್ತಾಯಿಸಿ ಬೃಹತ್ ರೈತ ಹಕ್ಕೊತ್ತಾಯ ಮೆರವಣಿಗೆ ಕಡಬದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಕಾಡಾನೆ(Elephent) ಹಾಗೂ ಕಾಡು ಪ್ರಾಣಿಗಳ (Wild Animals) ಕಾಟವು ಹೆಚ್ಚಾಗಿದೆ. ಕೃಷಿ ಹಾಗೂ ಕೃಷಿಕನ ಮೇಲೆ ನಿರಂತರ ಸಮಸ್ಯೆಯಾಗುತ್ತಿದೆ.ಆದರೂ ಯಾವುದೇ ಪರಿಹಾರ ಇಲ್ಲ. ಹೀಗಾಗಿ ಖಾಯಾಂ ಪರಿಹಾರವನ್ನು ಕಲ್ಪಿಸುವಂತೆ ಒತ್ತಾಯಿಸಿ ಬೃಹತ್ ರೈತ ಹಕ್ಕೊತ್ತಾಯ ಮೆರವಣಿಗೆಗೆ ಸಿದ್ಧತೆ ನಡೆದಿದೆ.
ಕಾಡಾನೆ ಹಾವಳಿ ತಪ್ಪಿಸಿ…. ಎಂದು ಜಾಗೃತ ರೈತ ಕುಟುಂಬಗಳ ಒಕ್ಕೂಟ ನೇತೃತ್ವದಲ್ಲಿ ಬೃಹತ್‌ ರೈತ ಹಕ್ಕೊತ್ತಾಯ ನಡೆಯಲಿದೆ. ಅ.26 ರಂದು ಕಡಬದ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಿಂದ ಕಾಡಾನೆ ಹಾಗೂ ಕಾಡು ಪ್ರಾಣಿಗಳ ಉಪಟಳ ತಪ್ಪಿಸುವಂತೆ ಮತ್ತು ಖಾಯಾಂ ಪರಿಹಾರವನ್ನು ಕಲ್ಪಿಸುವಂತೆ ಒತ್ತಾಯಿಸಿ ಬೃಹತ್ ರೈತ ಹಕ್ಕೊತ್ತಾಯ ಮೆರವಣಿಗೆ ನಡೆಯಲಿದೆ. ಕೃಷಿಕರಿಗೆ  “ಖಾಯಂ” ಪರಿಹಾರದ ಹಕ್ಕೊತ್ತಾಯಕ್ಕಾಗಿ ಸರಕಾರದ ಗಮನ ತರುವ ದೃಷ್ಟಿಯಿಂದ ಕಡಬ ಪೇಟೆಯಲ್ಲಿ “ರೈತ ಹಕ್ಕೊತ್ತಾಯ ಬೃಹತ್ ಮೆರವಣಿಗೆ” ನಡೆಸಲಾಗುತ್ತಿದೆ.ಸ್ಥಳಿಯ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ರಾಜಕೀಯ ರಹಿತವಾಗಿ ಈ ಹಕ್ಕೊತ್ತಾಯ ಮೆರವಣಿಗೆ ನಡೆಯಲಿದೆ.
ಪ್ರಮುಖವಾಗಿ ಕಾಡಾನೆಗಳ ಸ್ಥಳಾಂತರ ಮತ್ತು ಶಾಶ್ವತವಾಗಿ ತಡೆಬೇಲಿ ರಚನೆ, ಕಾಡಾನೆ ದಾಳಿ ಸಮಯದಲ್ಲಿ ಪ್ರಾಣಹಾನಿ ಸೇರಿದಂತೆ ಆರೋಗ್ಯಕ್ಕೆ ಎದುರಾಗುತ್ತಿರುವ ತೊಂದರೆಗಳು ಮತ್ತು ಕೃಷಿ ನಾಶಕ್ಕೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಈ ಮೆರವಣಿಗೆ ನಡೆಯಲಿದೆ.ಇದಕ್ಕೆ ಸರಕಾರ ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಗಳು ಹಾಗೂ ರಸ್ತೆ ತಡೆಯಂತಹ ಧರಣಿಗಳೂ ನಡೆಸಲಾಗುತ್ತದೆ ಎಂದು ಸಾರ್ವಜನಿಕರು  ಎಚ್ಚರಿಸಿದ್ದಾರೆ.
In most of the villages of Kadaba Taluk of Dakshina Kannada district, elephant and wild animals have increased. There is a constant problem on agriculture and the farmer, but there is no solution. Therefore, preparations have been made for a huge farmer’s rights march demanding a permanent solution.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 06-04-2025 | ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ |
April 6, 2025
6:08 PM
by: ಸಾಯಿಶೇಖರ್ ಕರಿಕಳ
ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
April 6, 2025
11:00 AM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ
April 6, 2025
10:00 AM
by: ದ ರೂರಲ್ ಮಿರರ್.ಕಾಂ
ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ
April 6, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group