ಎಂಡೋ ಸಂತ್ರಸ್ತರ ಮಾಸಾಶನವನ್ನು ಹೆಚ್ಚಿಸುವಂತೆ ಹಾಗೂ ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನೀಡುವಂತೆ ಒತ್ತಾಯಿಸಿ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ಕೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗೇರು ಅಭಿವೃದ್ಧಿ ನಿಗಮವು 1980 ರಿಂದ 2000 ದ ತನಕ ಎಂಡೋಸಲ್ಫಾನ್ ವೈಮಾನಿಕ ಸಿಂಪಡಣೆ ನಡೆಸಿದ ಕಾರಣ 8600 ಕ್ಕಿಂತಲೂ ಹೆಚ್ಚು ಜನ ಎಂಡೋ ಪೀಡಿತರಾಗಿದ್ದು, ಇವರಲ್ಲಿ ಹಲವಾರು ಜನ ಮಲಗಿದ್ದಲ್ಲಿ ಇದ್ದು, ಉಳಿದವರು ಬೇರೆ ಬೇರೆ ಅಂಗವೈಕಲ್ಯದಿಂದ, ಕ್ಯಾನ್ಸರ್, ಅಪಸ್ಮಾರ, ಬಂಜೆತನಗಳಿಂದ ನರಳುತ್ತಿದ್ದಾರೆ. ಇವರ ಈ ಪರಿಸ್ಥಿತಿಗೆ ಸರಕಾರ ಸಿಂಪಡಿಸಿದ ಎಂಡೋಸಲ್ಫಾನ್ ಕಾರಣವಾಗಿರುವುದರಿಂದ ಈ ಸಂತ್ರಸ್ತ ರಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರ ಬಗ್ಗೆ ಸಚಿವ @mla_sudhakar ಅವರಿಂದ ಸಭೆ pic.twitter.com/LPv5RE1IaR
— theruralmirror (@ruralmirror) March 23, 2022
Advertisement
ಮನವಿ ಪತ್ರದ ಮುಖ್ಯ ಅಂಶಗಳು:
ಪ್ರಸ್ತುತ ನ್ಯಾಯಾಲಯದ ಆದೇಶದ ಪ್ರಕಾರ ಶೇ.60 ಕ್ಕಿಂತ ಹೆಚ್ಚು ಬಾಧಿತರಾದವರಿಗೆ ರೂ. 4000 ಹಾಗೂ 25 %ಕ್ಕಿಂತ ಹೆಚ್ಚು ಹಾಗೂ 60% ಕ್ಕಿಂತ ಹೆಚ್ಚು ಬಾಧಿತರಾದವರಿಗೆ ರೂ. 2000/- ಮಾಸಾಶನ ನೀಡುತ್ತಿದ್ದು ಇದನ್ನು ಕ್ರಮವಾಗಿ ರೂ.10000/-ಹಾಗೂ 5000/-ಹೆಚ್ಚಿಸಬೇಕು.
ಪ್ರಸ್ತುತ – 8600 ಜನರಲ್ಲಿ ಸುಮಾರು 1200 ಪೀಡಿತರನ್ನು ಕ್ಯಾನ್ಸರ್, ಬಂಜೆತನ ಮತ್ತಿತರ ಕಾಯಿಲೆಗಳ ಎಂಡೋ ಪೀಡಿತರೆಂದು ಗುರುತಿಸಿ ನೀಲಿ ಸ್ಮಾರ್ಟ್ ಕಾರ್ಡ್‌ನ್ನು ಮಾತ್ರ ನೀಡಿದ್ದು, ಇವರಿಗೂ ರೂ. 5000/-ಮಾಸಾಶನವನ್ನು ಒದಗಿಸಬೇಕು.
ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಿಕೊಡಬೇಕು. ಮತ್ತು ತಾಲೂಕಿಗೊಂದು ಶಾಶ್ವತ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಿಕೊಡಬೇಕು. ಕೊಕ್ಕಡ ಹೋಬಳಿಯ ಸಮುದಾಯ ಆಸ್ಪತ್ರೆಗೆ ಫಿಷಿಯನ್ ಹುದ್ದೆಯನ್ನು ಸೃಷ್ಟಿ ಮಾಡಿ ಓರ್ವ ಪಿಸಿಶಿಯನ್, ಓರ್ವ ಸ್ತ್ರೀ ರೋಗ ತಜ್ಞೆ ಯನ್ನು ಹಾಗೂ ನಿಯೋಜನೆಯಲ್ಲಿರುವ ಆರೋಗ್ಯಾಧಿಕಾರಿಯನ್ನು ಕೊಕ್ಕಡಕ್ಕೆ ಆರೋಗ್ಯಾಧಿಕಾರಿಯನ್ನಾಗಿಯೇ ನೇಮಿಸಬೇಕು.
ಎಲ್ಲಾ ಎಂಡೋ ಸಂಸ್ತರಿಗೆ ಪೌಷ್ಠಿಕ ಆಹಾರವನ್ನು ಒದಗಿಸಬೇಕು.