ಎಂಡೋ ಸಂತ್ರಸ್ತರ ಮಾಸಾಶನ ಹೆಚ್ಚಿಸುವಂತೆ ಒತ್ತಾಯ | ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನೀಡುವಂತೆ ಆರೋಗ್ಯ ಸಚಿವರಿಗೆ ಮನವಿ |

March 23, 2022
3:19 PM

ಎಂಡೋ ಸಂತ್ರಸ್ತರ ಮಾಸಾಶನವನ್ನು ಹೆಚ್ಚಿಸುವಂತೆ ಹಾಗೂ  ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನೀಡುವಂತೆ ಒತ್ತಾಯಿಸಿ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ  ಶ್ರೀಧರ್ ಗೌಡ ಕೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.

Advertisement
Advertisement

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗೇರು ಅಭಿವೃದ್ಧಿ ನಿಗಮವು 1980 ರಿಂದ 2000 ದ ತನಕ ಎಂಡೋಸಲ್ಫಾನ್ ವೈಮಾನಿಕ ಸಿಂಪಡಣೆ ನಡೆಸಿದ ಕಾರಣ 8600 ಕ್ಕಿಂತಲೂ ಹೆಚ್ಚು ಜನ ಎಂಡೋ ಪೀಡಿತರಾಗಿದ್ದು, ಇವರಲ್ಲಿ ಹಲವಾರು ಜನ ಮಲಗಿದ್ದಲ್ಲಿ ಇದ್ದು, ಉಳಿದವರು ಬೇರೆ ಬೇರೆ  ಅಂಗವೈಕಲ್ಯದಿಂದ, ಕ್ಯಾನ್ಸರ್, ಅಪಸ್ಮಾರ, ಬಂಜೆತನಗಳಿಂದ ನರಳುತ್ತಿದ್ದಾರೆ. ಇವರ ಈ ಪರಿಸ್ಥಿತಿಗೆ ಸರಕಾರ ಸಿಂಪಡಿಸಿದ ಎಂಡೋಸಲ್ಫಾನ್ ಕಾರಣವಾಗಿರುವುದರಿಂದ ಈ ಸಂತ್ರಸ್ತ ರಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Advertisement

ಮುಖ್ಯಾಂಶಗಳು....

ಮನವಿ ಪತ್ರದ ಮುಖ್ಯ ಅಂಶಗಳು:

Advertisement

ಪ್ರಸ್ತುತ ನ್ಯಾಯಾಲಯದ ಆದೇಶದ ಪ್ರಕಾರ ಶೇ.60 ಕ್ಕಿಂತ ಹೆಚ್ಚು ಬಾಧಿತರಾದವರಿಗೆ ರೂ. 4000  ಹಾಗೂ  25 %ಕ್ಕಿಂತ ಹೆಚ್ಚು ಹಾಗೂ 60% ಕ್ಕಿಂತ ಹೆಚ್ಚು ಬಾಧಿತರಾದವರಿಗೆ ರೂ. 2000/- ಮಾಸಾಶನ ನೀಡುತ್ತಿದ್ದು ಇದನ್ನು ಕ್ರಮವಾಗಿ ರೂ.10000/-ಹಾಗೂ 5000/-ಹೆಚ್ಚಿಸಬೇಕು.

Advertisement

ಪ್ರಸ್ತುತ – 8600 ಜನರಲ್ಲಿ ಸುಮಾರು 1200 ಪೀಡಿತರನ್ನು ಕ್ಯಾನ್ಸರ್, ಬಂಜೆತನ ಮತ್ತಿತರ ಕಾಯಿಲೆಗಳ ಎಂಡೋ ಪೀಡಿತರೆಂದು ಗುರುತಿಸಿ ನೀಲಿ ಸ್ಮಾರ್ಟ್ ಕಾರ್ಡ್‌ನ್ನು ಮಾತ್ರ ನೀಡಿದ್ದು, ಇವರಿಗೂ ರೂ. 5000/-ಮಾಸಾಶನವನ್ನು ಒದಗಿಸಬೇಕು.

Advertisement

ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ  ಕೇಂದ್ರವನ್ನು ನಿರ್ಮಾಣ ಮಾಡಿಕೊಡಬೇಕು. ಮತ್ತು ತಾಲೂಕಿಗೊಂದು ಶಾಶ್ವತ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಿಕೊಡಬೇಕು. ಕೊಕ್ಕಡ ಹೋಬಳಿಯ ಸಮುದಾಯ ಆಸ್ಪತ್ರೆಗೆ ಫಿಷಿಯನ್ ಹುದ್ದೆಯನ್ನು ಸೃಷ್ಟಿ ಮಾಡಿ ಓರ್ವ ಪಿಸಿಶಿಯನ್, ಓರ್ವ ಸ್ತ್ರೀ ರೋಗ ತಜ್ಞೆ ಯನ್ನು  ಹಾಗೂ ನಿಯೋಜನೆಯಲ್ಲಿರುವ ಆರೋಗ್ಯಾಧಿಕಾರಿಯನ್ನು ಕೊಕ್ಕಡಕ್ಕೆ ಆರೋಗ್ಯಾಧಿಕಾರಿಯನ್ನಾಗಿಯೇ ನೇಮಿಸಬೇಕು.

ಎಲ್ಲಾ ಎಂಡೋ ಸಂಸ್ತರಿಗೆ ಪೌಷ್ಠಿಕ ಆಹಾರವನ್ನು ಒದಗಿಸಬೇಕು.
Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |
May 8, 2024
1:55 PM
by: ದ ರೂರಲ್ ಮಿರರ್.ಕಾಂ
Karnataka Weather | 08-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |
May 8, 2024
11:07 AM
by: ಸಾಯಿಶೇಖರ್ ಕರಿಕಳ
ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ
ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror